Namratha Gowda: ನಮ್ರತಾ ಜೊತೆ ಮದುವೆಗೆ ಸ್ನೇಹಿತ್ ತಂದೆತಾಯಿಯಿಂದ ಗ್ರೀನ್ ಸಿಗ್ನಲ್! ಆದರೆ ನಮ್ರತಾ ಹೇಳಿದ್ದೇನು ಗೊತ್ತಾ?

0 15

Namratha Gowda: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಜಗಳ ಅಗ್ರೆಶನ್ ಎಷ್ಟಿತ್ತೋ, ಅಷ್ಟೇ ಪ್ರೀತಿ ಪ್ರೇಮ, ಫ್ರೆಂಡ್ಶಿಪ್ ಫ್ಲರ್ಟಿಂಗ್ ಕೂಡ ಇತ್ತು. ಬಿಗ್ ಮನೆಯಲ್ಲಿ ಸುದ್ದಿಯಾದ ಮೊದಲ ಜೋಡಿ ಕಾರ್ತಿಕ್ ಸಂಗೀತ, ಈ ಜೋಡಿಯನ್ನು ಜನರು ತುಂಬಾ ಇಷ್ಟಪಟ್ಟರು. ಇವರಲ್ಲದೇ ನಮ್ರತಾ ಸ್ನೇಹಿತ್, ತನಿಷಾ ವರ್ತೂರ್ ಸಂತೋಷ್, ಕಾರ್ತಿಕ್ ನಮ್ರತಾ ಕೂಡ ಸದ್ದು ಮಾಡಿದ್ದರು. ಈ ಜೋಡಿಗಳಲ್ಲಿ ನಮ್ರತಾ ಸ್ನೇಹಿತ್ ಜೋಡಿ ಬೇರೆ ಥರವೇ ಇತ್ತು..

ಸ್ನೇಹಿತ್ ನಿಜಕ್ಕೂ ಬಹಳ ಕನೆಕ್ಟ್ ಆಗಿದ್ದರು, ನಮ್ರತಾ ಅವರನ್ನು ಮದುವೆಯಾಗಿ ಅವರೊಡನೆ ಇಡೀ ಜೀವನ ಕಳೆಯುವುದಕ್ಕೆ ರೆಡಿ ಆಗಿದ್ದರು ಎಂದು ಹೇಳಿಕೊಂಡಿದ್ದರು. ನಮ್ರತಾ ಅವರ ಹಿಂದೆ ಯಾವಾಗಲೂ ಓಡಾಡುತ್ತಲೇ ಇದ್ದರು. ಆದರೆ ನಮ್ರತಾ ಅವರಲ್ಲಿ ಒಳ್ಳೆಯ ಫ್ರೆಂಡ್ಶಿಪ್ ಭಾವನೆ ಇದ್ದರೂ ಕೂಡ, ಅವರು ಅದನ್ನು ತೋರ್ಪಡಿಸಲಿಲ್ಲ. ತಮಗೆ ಲವ್, ರಿಲೇಶನ್ಷಿಪ್ ನಲ್ಲಿ ಆಸಕ್ತಿ ಇಲ್ಲ ಎಂದೇ ಹೇಳುತ್ತಿದ್ದರು..

ಆದರೆ ಸ್ನೇಹಿತ್ ಎಲಿಮಿನೇಟ್ ಆದ ನಂತರ ನಮ್ರತಾ ಅವರು ಕಣ್ಣೀರು ಹಾಕಿದ್ದರು. ಜೊತೆಗೆ ಸ್ನೇಹಿತ್ ಅವರನ್ನು ಮಿಸ್ ಮಾಡಿಕೊಂಡಿದ್ದರು. ನಮಗೆಲ್ಲ ಗೊತ್ತಿರುವ ಹಾಗೆ ನಮ್ರತಾ ಅವರು ಫಿನಾಲೆ ಹಂತದವರೆಗು ಬಂದು, ಫಿನಾಲೆ ವೀಕ್ ನಡೆಯುವ ಹಿಂದಿನ ವಾರ ಎಲಿಮಿನೇಟ್ ಆದರು. ನಮ್ರತಾ ಅವರು ಬಿಗ್ ಮನೆಯಿಂದ ಹೊರಬಂದ ಮೇಲು ಸ್ನೇಹಿತ್ ಹಾಗೂ ನಮ್ರತಾ ವಿಚಾರ ಸುದ್ದಿಯಾಗಿದೆ. ಇತ್ತ ಒಂದು ಸಂದರ್ಶನದಲ್ಲಿ ಸ್ನೇಹಿತ್ ಅವರ ತಂದೆ ಇವರ ಬಗ್ಗೆ ಮಾತನಾಡಿದ್ದಾರೆ.

ಅವರಿಗೆ ಒಪ್ಪಿಗೆ ಇದ್ದರೆ, ನಮ್ಮದೇನು ಅಭಂತ್ರ ಇಲ್ಲ, ನಮಗೆ ಓಕೆ ಎಂದು ಹೇಳಿದ್ದಾರೆ. ಈ ಮಾತಿಗೆ ನಮ್ರತಾ ಅವರು ಮತ್ತೊಂದು ಸಂದರ್ಶನದಲ್ಲಿ ಮಾತನಾಡಿ, ಉತ್ತರ ಕೊಟ್ಟಿದ್ದಾರೆ. “ಅವರು ಮಾತನಾಡಿದ್ದು ನನಗೆ ಇರಿಟೇಟ್ ಆಯ್ತು. ನಾವು ನಮ್ಮ ಮನೆಯಲ್ಲಿ ಮಾತಾಡಿ, ನಮ್ಮ ಪೋಷಕರು ಒಪ್ಪಿದ ಮೇಲೆ, ಆ ಥರ ಹೇಳಿದ್ರೆ ಒಂದು ಅರ್ಥ. ಅವರೇ ಏನೋ ಅಂದುಕೊಂಡು ಒಂದು ಹುಡುಗಿ ಬಗ್ಗೆ ಹಾಗೆಲ್ಲ ಹೇಳಿರೋದು ನನಗೆ ಇಷ್ಟ ಆಗಲಿಲ್ಲ. ಬೇಜಾರಾಗಿದೆ.

ನಿಮ್ಮ ಮಗಳ ಮದುವೆ ಸ್ನೇಹಿತ್ ಜೊತೆಗೆ ಫಿಕ್ಸ್ ಮಾಡಿದ್ದೀರಾ ಅಂತ ನಮ್ಮ ತಂದೆ ತಾಯಿಯನ್ನ ಕೇಳುತ್ತಿದ್ದಾರೆ. ಅವರಿಗು ಇದರಿಂದ ಬೇಸರ ಆಗಿದೆ..” ಎಂದು ಹೇಳಿದ್ದಾರೆ ನಮ್ರತಾ. ಒಟ್ಟಿನಲ್ಲಿ ಹೊರಗೆ ಬಂದಮೇಲೆ ಇವರ ಲವ್ ಸ್ಟೋರಿ ಬೇರೆಯದೇ ಹಾದಿ ಹಿಡಿದಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.