Namratha Gowda: ವಯಸ್ಸು 30 ಆಗಿದ್ದರು ಇನ್ನು ಯಾಕೆ ಮದುವೆಯಾಗಿಲ್ಲ ನಮ್ರತಾ? ಅಸಲಿ ಕಾರಣ ರಿವೀಲ್!

0 1

Namratha Gowda: ನಾಗಿಣಿ2 ಸೀರಿಯಲ್ ಮೂಲಕ ಸಧ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಗಳಿಸಿದವರು ನಟಿ ನಮ್ರತಾ ಗೌಡ. ನಾಗಿಣಿ ಧಾರಾವಾಹಿಯಲ್ಲಿ ಪಾತ್ರಕ್ಕೆ ತಕ್ಕಂತೆ ಇವರು ಧರಿಸುವ ಉಡುಪುಗಳು ಹಾಗೂ ಅಲಂಕಾರಿಕ ವಸ್ತುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ನಾಗಿಣಿ ಪಾತ್ರದಲ್ಲಿ ಟ್ರಡಿಷನಲ್ ಉಡುಪಿನಲ್ಲಿ ಆಧುನಿಕವಾದ ಆಭರಣಗಳನ್ನು ಧರಿಸಿ ಬಹಳ ಟ್ರೆಂಡಿ ಆಗಿ ಕಾಣಿಸಿಕೊಳ್ಳುತ್ತಿದ್ದ ನಮ್ರತಾ ಅದಕ್ಕಿಂತ ಮೊದಲು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ನಟಿಸಿದ್ದರು. ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಕೂಡ ಬಹಳ ಜನಪ್ರಿಯತೆ ಗಳಿಸಿದ್ದರು.

ನಮ್ರತಾರಿಗೆ ಬಣ್ಣದ ನಂಟು ಹೊಸದಲ್ಲ. ಈ ಹುಡುಗಿ ಮೂರು ವರ್ಷದವರಿದ್ದಾಗಲೇ ನಟನೆ ಆರಂಭಿಸಿದ್ದರು. ಏಪ್ರಿಲ್ 14, 1993 ರಲ್ಲಿ ಜನಿಸಿದ ನಮ್ರತಾ ಗೌಡ, ಹುಟ್ಟಿದ್ದು ಬೆಳೆದಿದ್ದು ವಿದ್ಯಾಭ್ಯಾಸ ಮುಗಿಸಿದ್ದು ಪ್ರಸ್ತುತ ಇರುವುದು ಎಲ್ಲವೂ ಬೆಂಗಳೂರಿನಲ್ಲೇ. ಆಚಾರ್ಯ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ, ಆರ್ಕಿಟೆಕ್ಚರ್ ವಿಷಯದಲ್ಲಿ ನಮ್ರತಾ ಗೌಡ ಪದವಿ ಶಿಕ್ಷಣ ಪಡೆದಿದ್ದಾರೆ. ನಮ್ರತಾ ಗೌಡ ಅವರಿಗೆ ಜನಪ್ರಿಯತೆ ಸಿಕ್ಕಿದ್ದು ಪುಟ್ಟಗೌರಿ ಮದುವೆ ಧಾರಾವಾಹಿಯ ಹಿಮ ಪಾತ್ರದಿಂದ.

ಅದಕ್ಕೂ ಮೊದಲು ನಾಕುತಂತಿ, ಚೆಲುವಿ, ಆಕಾಶದೀಪ, ಸಿಲ್ಲಿಲಲ್ಲಿ ಮತ್ತು ಅಪಾರ್ಟ್ಮೆಂಟ್ ಧಾರಾವಾಹಿಯಲ್ಲಿ ನಟಿಸಿದ್ದರು. ಜೊತೆಗೆ ಗೇಮ್, ತುತ್ತೂರಿ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಬಹಳ ಫೇಮಸ್ ಆಗಿದ್ದ ಕೃಷ್ಣ ರುಕ್ಮಿಣಿ ಸೀರಿಯಲ್ ನಲ್ಲಿ ಕೂಡ ನಟಿಸಿದ್ದರು ನಮ್ರತಾ ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಜೊತೆಗೆ ನಮ್ರತಾ ಬಹಳ ಒಳ್ಳೆಯ ಡ್ಯಾನ್ಸರ್. ಹಲವಾರು ಡ್ಯಾನ್ಸ್ ಶೋ ಗಳಲ್ಲಿ ಪರ್ಫಾರ್ಮ್ ಮಾಡಿದ್ದಾರೆ.

ಹಾಗು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಅವುಗಳಲ್ಲಿ ಒಂದು ಕಿಕ್ ಡ್ಯಾನ್ಸ್ ಶೋ, ಹಾಗೂ ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್. ತಕಧಿಮಿತ ನಲ್ಲಿ ನಮ್ರತಾರ ಡ್ಯಾನ್ಸ್ ಪಾರ್ಟ್ನರ್ ಆಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಕಿಶನ್. ಈ ಕಾರ್ಯಕ್ರಮದಲ್ಲಿ ಟಾಪ್ 5 ಫೈನಲಿಸ್ಟ್ ನಲ್ಲಿ ಒಬ್ಬರಾಗಿದ್ದರು ನಮ್ರತಾ. ಡ್ಯಾನ್ಸ್ ಶೋಗಳ ಜೊತೆಗೆ, ಭರ್ಜರಿ ಕಾಮಿಡಿ ಎನ್ನುವ ಕಾಮಿಡಿ ಶೋ ನಲ್ಲಿ ಕೂಡ ಕಾಣಿಸಿಕೊಂಡಿದ್ದರು ನಮ್ರತಾ.

ಇವರು ಉತ್ತಮ ನಟಿ, ಡ್ಯಾನ್ಸರ್ ಎನ್ನುವುದರ ಜೊತೆಗೆ ಕಾರಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಕೂಡ ಪಡೆದಿದ್ದಾರೆ. ಪ್ರಸ್ತುತ ಬಿಗ್ ಬಾಸ್ ಶೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ, ಇವರಿಗೆ ವಯಸ್ಸು 30 ಆಗಿದ್ದರು ಕೂಡ ಇನ್ನು ಮದುವೆಯಾಗಿಲ್ಲ..ಅದಕ್ಕೆ ಕಾರಣ ಎನ್ನುವುದನ್ನು ನಮ್ರತಾ ಅವರೇ ತಿಳಿಸಿದ್ದಾರೆ. ಮದುವೆಯಾದರೆ ಬರುವ ಗಂಡನಿಂದ ತಂದೆ ತಾಯಿ ಜೊತೆಗೆ ಹೆಚ್ಚು ಸಮಯ ಕಳೆಯಲು ಆಗೋದಿಲ್ಲ.

ಗಂಡ ತಾಯಿಯಿಂದ ತನ್ನನ್ನು ದೂರ ಮಾಡಿಬಿಡುತ್ತಾನೆ ಅನ್ನೋ ಭಯ ನಮ್ರತಾ ಅವರಿಗೆ ಇದೆಯಂತೆ. ಅದೇ ಕಾರಣಕ್ಕೆ ಅವರು ಮದುವೆಗೆ ಇನ್ನು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ನಮ್ರತಾ ಅವರು ಯಾವಾಗ ಮದುವೆ ಆಗ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.