Namratha Shirodkar: ನಟಿ ನಮ್ರತಾ ಶಿರೋಡ್ಕರ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರು ಇಂದು ಟಾಲಿವುಡ್ ನ ಸ್ಟಾರ್ ನಟ ಮಹೇಶ್ ಬಾಬು ಅವರ ಪತ್ನಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ನಮ್ರತಾ ಅವರು ಇಬ್ಬರು ಮಕ್ಕಳ ತಾಯ, ಮದುವೆಗಿಂತ ಮೊದಲು ಸ್ಟಾರ್ ನಟಿಯಾಗಿದ್ದ ನಮ್ರತಾ ಅವರು ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಯಾವುದು? ಹೀರೋ ಯಾರು ಗೊತ್ತಾ?
ನಟಿ ನಮ್ರತಾ ಮೂಲತಃ ಉತ್ತರ ಭಾರತದ ಹುಡುಗಿ, ಇವರು 1993ರಲ್ಲಿ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, 6ನೇ ಸ್ಥಾನ ಪಡೆದರು. ಬಳಿಕ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ನಮ್ರತಾ ಅವರು ಮಿಸ್ ಇಂಡಿಯಾ ಆದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಿಂದಿ, ತೆಲುಗು, ತಮಿಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಹಾಗೆಯೇ ಕನ್ನಡದಲ್ಲಿ ಕೂಡ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ..
ಆ ಸಿನಿಮಾ ಹೆಸರು ಚೋರ ಚಿತ್ತ ಚೋರ, ಇದು 1999 ರಲ್ಲಿ ತೆರೆಕಂಡ ಸಿನಿಮಾ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಸಿ, ಸುಬ್ರಹ್ಮಣ್ಯ ಅವರು ನಿರ್ದೇಶನ ಮಾಡಿದ ಸಿನಿಮಾ ಆಗಿದೆ. ಇದು ನಮ್ರತಾ ಅವರು ನಟಿಸಿರುವ ಒಂದೇ ಒಂದು ಕನ್ನಡ ಸಿನಿಮಾ ಆಗಿದೆ. ಇದನ್ನು ಹೊರತುಪಡಿಸಿ, ನಮ್ರತಾ ಅವರು ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀರೋಯಿನ್ ಆಗಿ ಪೀಕ್ ನಲ್ಲಿದ್ದು, ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ಸಿನಿಮಾ ಮಾಡಿದ್ದಾರೆ ನಮ್ರತಾ.
ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅವರನ್ನು ಪ್ರೀತಿಸಿ 2005ರಲ್ಲಿ ಮದುವೆಯಾದರು. ಈ ಮದುವೆಗೆ ಮಹೇಶ್ ಬಾಬು ಅವರ ಮನೆಯವರ ಒಪ್ಪಿಗೆ ಇರಲಿಲ್ಲ. ನಮ್ರತಾ ಅವರು ಮದುವೆ ನಂತರ ನಟನೆ ಇಂದ ದೂರ ಉಳಿಯಬೇಕು ಎನ್ನುವ ಕಂಡೀಷನ್ ಇಂದ ಮದುವೆ ಮಾಡಿಕೊಳ್ಳಲಾಯಿತು. ಅದೇ ರೀತಿ ನಮ್ರತಾ ಅವರು ಮದುವೆ ನಂತರ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಈಗಲೂ ನಟನೆ ಇಂದ ದೂರವೇ ಇದ್ದಾರೆ.
ಸಂಪೂರ್ಣ ಸಮಯವನ್ನು ಮನೆ, ಕುಟುಂಬಕ್ಕಾಗಿ ನೀಡುತ್ತಾರೆ. ನಮ್ರತಾ ಹಾಗೂ ಮಹೇಶ್ ದಂಪತಿಗೆ ಇಬ್ಬರು ಮಕ್ಕಳು. ಗೌತಮ್ ಮತ್ತು ಸೀತಾರ. ನಮ್ರತಾ ಅವರು ಹೆಚ್ಚಿನ ಸಮಯವನ್ನು ಮಕ್ಕಳಿಗಾಗಿಯೇ ಮೀಸಲಾಗಿ ಇಡುತ್ತಾರೆ. ಮಕ್ಕಳ ಕೆರಿಯರ್ ಬಗ್ಗೆ ಈಗ ಹೆಚ್ಚಾಗಿ ಗಮನ ನೀಡುತ್ತಿದ್ದಾರೆ.