Nannamma Superstar: ನನ್ನಮ್ಮ ಸೂಪರ್ ಸ್ಟಾರ್ ಶೋಗೆ ಹೊಸ ನಿರೂಪಕಿ! ಯಾರು ಗೊತ್ತಾ ಈ ಸುಂದರಿ?

0 17

Nannamma Superstar: ನನ್ನಮ್ಮ ಸೂಪರ್ ಸ್ಟಾರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಖ್ಯಾತಿ ಪಡೆದಿರುವ ರಿಯಾಲಿಟಿ ಶೋ. ಈ ಶೋ ಎಲ್ಲಾ ಮಕ್ಕಳಿಗೆ ಮತ್ತು ದೊಡ್ಡವರಿಗೆ ಎಲ್ಲರಿಗೂ ಬಹಳ ಇಷ್ಟ ಎಂದರೆ ತಪ್ಪಲ್ಲ. ಇದೀಗ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಶುರುವಾಗುವುದಕ್ಕೆ ಉಳಿದಿರುವುದು ಇನ್ನು ಒಂದೆರೆಡೆ ದಿನಗಳು ಮಾತ್ರ. ಫೆಬ್ರವರಿ 3ನೇ ತಾರೀಕಿನಿಂದ ನನ್ನಮ್ಮ ಸೂಪರ್ ಸ್ಟಾರ್ ಶುರುವಾಗಲಿದೆ.

ಬಿಗ್ ಬಾಸ್ ಮುಗಿದ ನಂತರ ಈ ಶೋ ಏನೋ ಶುರುವಾಗುತ್ತಿದೆ. ಎಂದಿನಂತೆ ಸೃಜನ್ ಲೋಕೇಶ್, ನಟಿ ತಾರಾ ಹಾಗೂ ನಟಿ ಅನು ಪ್ರಭಾಕರ್ ಮೂವರು ಜಡ್ಜ್ ಆಗಿ ಬಂದಿದ್ದಾರೆ. ಆದರೆ ಈ ಶೋನ ನಿರೂಪಣೆ ಮಾಡೋರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಅನುಪಮಾ ಗೌಡ ನಿರೂಪಣೆ ಮಾಡ್ತಾರಾ ಅಥವಾ ನಿರಂಜನ್ ನಿರೂಪಣೆ ಮಾಡ್ತಾರಾ ಎನ್ನುವ ಪ್ರಶ್ನೆ ಶುರುವಾಗಿತ್ತು. ಆದರೆ ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿತು.

ಕಲರ್ಸ್ ಕನ್ನಡ ವಾಹಿನಿಯವರು ಇಂದು ಪ್ರೋಮೋ ಬಿಡುಗಡೆ ಮಾಡಿದ್ದು, ನನ್ನಮ್ಮ ಸೂಪರ್ ಸ್ಟಾರ್ ಶೋಗೆ ನಟಿ ಸುಷ್ಮಾ ರಾವ್ ಅವರು ನಿರೂಪಕಿಯಾಗಿ ಬಂದಿದ್ದಾರೆ. ಕಲರ್ಸ್ ಕನ್ನಡದಲ್ಲೇ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕಿ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ಸುಶ್ಮಾ ಅವರು ಇದೀಗ ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ ನಿರೂಪಕಿಯಾಗಿ ಮತ್ತೆ ರೀ ಎಂಟ್ರಿ ಪಡೆದುಕೊಂಡಿದ್ದಾರೆ..

ಸುಷ್ಮಾ ಅವರಿಗೆ ಭಾಗ್ಯ ಪಾತ್ರದ ಮೂಲಕ ಬಹಳ ಜನಪ್ರಿಯತೆ ತಂದುಕೊಟ್ಟಿದೆ. ಈ ಹಿಂದೆ ಕೂಡ ಹಲವು ಕಾರ್ಯಕ್ರಮಗಳ ಮೂಲಕ ಸುಷ್ಮಾ ಅವರು ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ನಿರೂಪಣೆಗೆ ಬಂದಿದ್ದಾರೆ. ಅಭಿಮಾನಿಗಳಿಗೂ ಸುಷ್ಮಾ ಅವರನ್ನು ನಿರೂಪಕಿಯಾಗಿ ಮತ್ತೆ ನೋಡಿ, ಸಂತೋಷವಾಗಿದೆ. ಫೆಬ್ರವರಿ 3ರಂದು ಕಾರ್ಯಕ್ರಮ ಶುರುವಾಗಲಿದ್ದು, ವೀಕ್ಷಕರು ಕಾಯುತ್ತಿದ್ದಾರೆ.

Leave A Reply

Your email address will not be published.