Nayana Kaverappa: ದಶಕದ ನಂತರ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ ಕವಲುದಾರಿ ಧಾರಾವಾಹಿಯ ನಟಿ ನಯನಾ! ಯಾವ ಕಾರ್ಯಕ್ರಮದ ಮೂಲಕ ಗೊತ್ತಾ?

0 31

Nayana Kaverappa: ಸುಮಾರು ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಹಲವು ಜನಮೆಚ್ಚುಗೆ ಗಳಿಸಿದ, ಉತ್ತಮ ಕಥೆ ಹೊಂದಿರುವ ಧಾರಾವಾಹಿಗಳು ಪ್ರಸಾರ ಆಗಿವೆ. ಅವುಗಳನ್ನ ಜನರು ಈಗಲೂ ಮರೆತಿಲ್ಲ. ಅಂಥದ್ದೊಂದು ಧಾರವಾಹಿ ಕವಲುದಾರಿ ಎಂದರೆ ತಪ್ಪಲ್ಲ. ಈ ಧಾರಾವಾಹಿಯ ಸ್ವಾತಿ ಪಾತ್ರದ ಮೂಲಕ ಜನರಿಗೆ ಹತ್ತಿರ ಆಗಿದ್ದವರು ನಟಿ ನಯನಾ ಕಾವೇರಪ್ಪ.

ಇವರು ಕನ್ನಡದ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ, ದುಡ್ಡು ದುಡ್ಡು ದುಡ್ಡು, ಮದುವೆ ಮದುವೆ ಮದುವೆ, ಕುಸುಮಾಂಜಲಿ, ಕವಲುದಾರಿ, ಬಣ್ಣದ ಬುಗುರಿ ಸೇರಿದಂತೆ ಅನೇಕ ಧಾರವಾಹಿಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಬಹಳ ಹತ್ತಿರ ಆಗಿದ್ದವರು ನಟಿ ನಯನಾ. ಆದರೆ ಮದುವೆ ನಂತರ ಇವರು ನಟನೆಯಿಂದ ದೂರ ಉಳಿದಿದ್ದರು. ಕೂರ್ಗ್ ನಲ್ಲಿದ್ದು ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದರು.

ನಯನಾ ಅವರು ಮಕ್ಕಳನ್ನು ಬಹಳ ವಿಭಿನ್ನವಾಗಿ ಬೆಳೆಸಿದ್ದಾರೆ ಎಂದರೆ ತಪ್ಪಲ್ಲ. ಪ್ರಕೃತಿಯ ಮಡಿಲಲ್ಲಿ ಒಳ್ಳೆಯ ಪಾಠ ಕಲಿಸಿ ಬೆಳೆಸುತ್ತಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು. ನಯನಾ ಅವರು ಇತ್ತೀಚೆಗೆ ನಟ ರಘು ರಾಮ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಆಗಿನಿಂದಲು ಅಭಿಮಾನಿಗಳು ಇವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಬಯಸುತ್ತಿದ್ದರು.

ಇದೀಗ ನಯನಾ ಅವರ ಅಭಿಮಾನಿಗಳ ಕನಸು ನನಸಾಗಿದ್ದು, ನಯನಾ ಅವರು ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅದು ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ. ಕಲರ್ಸ್ ಕನ್ನಡ ಚಾನೆಲ್ ಶೇರ್ ಮಾಡಿರುವ ಪ್ರೊಮೋದಲ್ಲಿ ನಯನಾ ಅವರನ್ನು ನೋಡಬಹುದು. ನಾಳಿದ್ದು ಅಂದರೆ ಫೆಬ್ರವರಿ 3ನೇ ತಾರೀಕಿನಿಂದ ನನ್ನಮ್ಮ ಸೂಪರ್ ಸ್ಟಾರ್ ಸೇಸನ್3 ಶುರುವಾಗುತ್ತಿದ್ದು, ನಯನಾ ಅವರು ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಿಗೆ ಇದು ಸಂತೋಷ ತಂದಿದೆ.

Leave A Reply

Your email address will not be published.