Nayanthara: ನಟಿ ನಯನತಾರ ಹುಟ್ಟುಹಬ್ಬಕ್ಕೆ ಗಂಡ ವಿಘ್ನೇಶ್ ಶಿವನ್ ಕೊಟ್ಟ ಗಿಫ್ಟ್ ಏನು ಗೊತ್ತಾ?

Written by Pooja Siddaraj

Published on:

Nayanthara: ಸೌತ್ ಇಂಡಿಯನ್ ಸಿನಿಮಾದ ಲೇಡಿ ಸೂಪರ್ ಸ್ಟಾರ್ ನಯನತಾರ ಅವರು ಅತಿಹೆಚ್ಚು ಬೇಡಿಕೆ ಇರುವ, ಸೌತ್ ಇಂಡಿಯನ್ ಸಿನಿಮಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ. ನಯನತಾರ ಅವರು ಮದುವೆಯಾದ ಮೇಲೆ ಕೂಡ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಇದೀಗ ಇವರ ಹುಟ್ಟುಹಬ್ಬಕ್ಕೆ ಗಂಡ ಎಂಥಾ ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ? ಖುದ್ದು ನಯನತಾರ ಅವರೇ ಶಾಕ್ ಆಗಿದ್ದಾರೆ.

ನಟಿ ನಯನತಾರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕವೇ ಕಳೆದು ಹೋಗುತ್ತಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಹೆಚ್ಚಾಗಿ ನಟಿಸುವ ನಯನತಾರ ಅವರು ಕನ್ನಡದಲ್ಲಿ ಉಪೇಂದ್ರ ಅವರೊಡನೆ ಸೂಪರ್ ಸಿನಿಮಾದಲ್ಲಿ ನಟಿಸಿದರು. ಇನ್ನು ಬಾಲಿವುಡ್ ಗೆ ಈ ವರ್ಷ ಜವಾನ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಎಲ್ಲಾ ಕಡೆ ಇವರದ್ದೇ ಹವಾ ಎಂದರೆ ತಪ್ಪಲ್ಲ..

ಇನ್ನು, ನಯನತಾರ ಅಭಿನಯದ ಹೊಸ ಸಿನಿಮಾ ಅನ್ನಪೂರಣಿ ಡಿಸೆಂಬರ್ ನಲ್ಲಿ ತೆರೆಕಾಣಲಿದೆ. ಸಿನಿಮಾಗಳಲ್ಲಿ ಬಹಳ ಬ್ಯುಸಿ ಇರುವ ನಯನತಾರ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು, ಇವರ ಹುಟ್ಟುಹಬ್ಬಕ್ಕೆ ಗಂಡ ವಿಘ್ನೇಶ್ ಶಿವನ್ ಕೊಟ್ಟಿರುವ ಗಿಫ್ಟ್ ನ ಫೋಟೋವನ್ನು ನಯನತಾರ ಅವರು ಶೇರ್ ಮಾಡಿದ್ದು ಇದೀಗ ಈ ಫೋಟೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ ನಯನ್.

ವಿಘ್ನೇಶ್ ಶಿವನ್ ಅವರು ಪತ್ನಿಯ ಹುಟ್ಟುಹಬ್ಬಕ್ಕೆ ಮರ್ಸಿಡಿಸ್ ಬೆಂಕ್ ಮೇಬ್ಯಾಕ್ ಕಾರ್ ಅನ್ನು ಗಿಫ್ಟ್ ನೀಡಿದ್ದಾರೆ. ಈ ಕಾರ್ ಗಳು ಬರುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ, ವಿಘ್ನೇಶ್ ಶಿವನ್ ಅವರು ನಯನತಾರ ಅವರ ಹುಟ್ಟುಹಬ್ಬಕ್ಕೆ ಬುಕ್ ಮಾಡಿರುವ ಕಾರ್ ಈಗ 2 ವಾರಗಳ ನಂತರ ಬಂದಿದೆ. ಕಾರ್ ನ ಫೋಟೋಸ್ ಶೇರ್ ಮಾಡಿರುವ ನಯನ್ ಅವರು ಸುಂದರವಾದ ಕ್ಯಾಪ್ಶನ್ ಸಹ ಬರೆದಿದ್ದಾರೆ..

“Welcome home you beauty.. ವಿಕ್ಕಿ ಮೈ ಡಿಯರ್ ಪತಿ..ಈ ಬರ್ತ್ ಡೇ ಗಿಫ್ಟ್ ಗೆ ಥ್ಯಾಂಕ್ ಯು ಸೋ ಮಚ್.. ಲವ್ ಯೂ..”ಎಂದು ಬರೆದುಕೊಂಡಿದ್ದಾರೆ ನಟಿ ನಯನತಾರ. ಈ ಫೋಟೋಸ್ ನೋಡಿ ನೆಟ್ಟಿಗರು ಸಂತೋಷದಿಂದ ವಿಶ್ ಮಾಡುತ್ತಿದ್ದಾರೆ. ಇನ್ನು ಕೆಲವರು ಯಾವ ಬ್ರ್ಯಾಂಡ್ ಅಂತ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ.

Leave a Comment