Nayanthara: ಗಂಡನ ಸಿನಿಮಾ ಇಂದಲೇ ಹೊರಬಂದ ಲೇಡಿ ಸೂಪರ್ ಸ್ಟಾರ್ ನಯನತಾರ! ಶುರುವಾಯ್ತಾ ದಾಂಪತ್ಯದಲ್ಲಿ ಬಿರುಕು?

Written by Pooja Siddaraj

Published on:

Nayanthara: ಸೌತ್ ಇಂಡಿಯನ್ ಸಿನಿಮಾದ ಲೇಡಿ ಸೂಪರ್ ಸ್ಟಾರ್ ನಯನತಾರ ಅವರು ಅತಿಹೆಚ್ಚು ಬೇಡಿಕೆ ಇರುವ, ಸೌತ್ ಇಂಡಿಯನ್ ಸಿನಿಮಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ. ನಯನತಾರ ಅವರು ಮದುವೆಯಾದ ಮೇಲೆ ಕೂಡ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಆದರೆ ಇದೀಗ ನಯನತಾರ ಅವರು ತಮ್ಮ ಗಂಡನ ಸಿನಿಮಾ ಇಂದಲೇ ಹೊರಬಂದಿದ್ದು, ಈ ವಿಚಾರ ಭಾರಿ ಚರ್ಚೆಗೆ ಒಳಗಾಗಿದೆ.

ನಟಿ ನಯನತಾರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕವೇ ಕಳೆದು ಹೋಗುತ್ತಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಹೆಚ್ಚಾಗಿ ನಟಿಸುವ ನಯನತಾರ ಅವರು ಕನ್ನಡದಲ್ಲಿ ಉಪೇಂದ್ರ ಅವರೊಡನೆ ಸೂಪರ್ ಸಿನಿಮಾದಲ್ಲಿ ನಟಿಸಿದರು. ಇನ್ನು ಬಾಲಿವುಡ್ ಗೆ ಈ ವರ್ಷ ಜವಾನ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಎಲ್ಲಾ ಕಡೆ ಇವರದ್ದೇ ಹವಾ ಎಂದರೆ ತಪ್ಪಲ್ಲ..ಆದರೆ ಕಳೆದ ತಿಂಗಳು ನಯನತಾರ ಅಭಿನಯದ ಅನ್ನಪೂರಣಿ ಸಿನಿಮಾ ತೆರೆಕಂಡಿತು.

ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಾಣುವುದರ ಜೊತೆಗೆ, ವಿವಾದಕ್ಕೂ ಕಾರಣವಾಯಿತು. ಈ ಸಿನಿಮಾ ಬಳಿಕ ನಯನತಾರ ಅವರ ಕೆರಿಯರ್ ಗ್ರಾಫ್ ಸೆಪ ಕೆಳಗೆ ಹೋಗಿದೆ ಎಂದರೆ ತಪ್ಪಲ್ಲ. ಇನ್ನು ನಯನತಾರ ಅವರ ಪತಿ ವಿಘ್ನೇಶ್ ಶಿವನ್, LIC ಎನ್ನುವ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪ್ರದೀಪ್ ರಂಗನಾಥನ್ ಹೀರೋ, ಕನ್ನಡದ ಹುಡುಗಿ ಕೃತಿ ಶೆಟ್ಟಿ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಯಕನ ಅಕ್ಕನ ಪಾತ್ರದಲ್ಲಿ ನಯನತಾರ ಅವರು ನಟಿಸಬೇಕಿತ್ತು.

ಇದು ಬಹಳ ಮುಖ್ಯವಾದ ಪಾತ್ರ ಎಂದು ಹೇಳಲಾಗಿತ್ತು. ಆದರೆ LIC ಟೈಟಲ್ ವಿಷಯಕ್ಕೆ ವಿವಾದ ಶುರುವಾಗಿದೆ. ಈ ಟೈಟಲ್ ಬದಲಾಯಿಸಬೇಕು ಎಂದು LIC ಸಂಸ್ಥೆ ಕೇಸ್ ಹಾಕಿದ್ದು, ಬದಲಾಯಿಸಿಲ್ಲ ಎಂದರೆ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದೆ. ಹಾಗಾಗಿ ವಿಘ್ನೇಶ್ ಶಿವನ್ ಅವರು ಹೊಸ ಟೈಟಲ್ ಗಾಗಿ ಹುಡುಕಾಟ ಮಾಡುತ್ತಿದ್ದಾರಂತೆ. ಟೈಟಲ್ ವಿಚಾರಕ್ಕೆ ವಿವಾದ ಶುರುವಾಗಿರುವ ಕಾರಣ ನಯನತಾರ ಅವರು ಈ ಸಿನಿಮಾ ಇಂದ ಹೊರಬಂದಿದ್ದಾರೆ ಎನ್ನುವ ವಿಚಾರ ಈಗ ವೈರಲ್ ಆಗಿದೆ.

ನಯನತಾರ ಅವರು ಹೊರಬಂದಿರುವುದು ಟೈಟಲ್ ಕಾರಣಕ್ಕೆ ಮಾತ್ರ ಎನ್ನಲಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಹಾಗಾಗಿ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎನ್ನಲಾಗಿದೆ.

Leave a Comment