Neethu Vanajakshi: ಬಿಗ್ ಬಾಸ್ ಮನೆಯ 50 ದಿನಗಳ ಪ್ರಯಾಣಕ್ಕೆ ನೀತು ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

Written by Pooja Siddaraj

Published on:

Neethu Vanajakshi: ಬಿಗ್ ಬಾಸ್ ಮನೆಗೆ ಈ ಸೀಸನ್ ನಲ್ಲಿ ತೃತೀಯ ಲಿಂಗಿ ಆಗಿರುವ ನೀತು ವನಜಾಕ್ಷಿ ಅವರು ಎಂಟ್ರಿ ಕೊಟ್ಟಿದ್ದಾರೆ. ನೀತು ಅವರ ತಮ್ಮ ಸಮುದಾಯದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಈ ಸೀಸನ್ ನಲ್ಲಿ ಮೊದಲ ಸಾರಿ ಕ್ಯಾಪ್ಟನ್ ಆಗಿ ಉತ್ತಮ ಪ್ರದರ್ಶನ ನೀಡಿದ್ದ ನೀತು, ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾಗಲೇ ಕಳೆದ ವಾರ ನಾಮಿನೇಟ್ ಆದರು..

ನೀತು ವನಜಾಕ್ಷಿ ಅವರು ಸಾಮಾನ್ಯ ವ್ಯಕ್ತಿಯಲ್ಲ, ಒಬ್ಬ ಉದ್ಯಮಿಯಾಗಿ ಮಾಡೆಲ್ ಆಗಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಮೊದಲಿಗೆ ಟ್ಯಾಟೂ ಆರ್ಟಿಸ್ಟ್ ಆಗಿದ್ದ ನೀತು ಅವರು ಬಳಿಕ ತಮ್ಮದೇ ಆದ ಪಾರ್ಲರ್ ಬ್ಯುಸಿನೆಸ್ ಶುರು ಮಾಡಿದರು, ನಂತರ ಊಟದ ಬ್ಯುಸಿನೆಸ್ ಕೂಡ ಶುರು ಮಾಡಿದ್ದಾರೆ. ಬಹಳಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ನೀತು ಅವರು ತಾವು ತೃತೀಯ ಲಿಂಗಿ ಆಗಿದ್ದು ಹೇಗೆ ಎನ್ನುವ ಕಥೆಯನ್ನು ಬಿಗ್ ಬಾಸ್ ಮನೆಯೊಳಗೆ ಕೂಡ ಹೇಳಿಕೊಂಡಿದ್ದರು.

ಹುಡುಗನಾಗಿ ಹುಟ್ಟಿದ ಅವರಿಗೆ ಮಂಜುನಾಥ್ ಎಂದು ಹೆಸರನ್ನು ಇಡಲಾಗಿತ್ತು, 7ನೇ ತರಗತಿಯಲ್ಲಿದ್ದ ಮಂಜು ಅವರಿಗೆ ತಮ್ಮಲ್ಲಾಗುತ್ತಿದ್ದ ಬದಲಾವಣೆಯ ಅರಿವಾಗಿತ್ತು. ಹುಡುಗರ ಮೇಲೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿದ್ದೇನೆ ಎಂದು ಅನ್ನಿಸಿ, ತಮ್ಮನ್ನು ತಾವು ಆಕ್ಸೆಪ್ಟ್ ಮಾಡಿಕೊಂಡಾಗ ಮಂಜುನಾಥ್ ಅವರಿಗೆ ತುಂಬಾ ಭಯ ಆಗಿತ್ತಂತೆ. ಮೊದಲು ಅವರಿಗೆ ಸಪೋರ್ಟ್ ಮಾಡಿದ್ದು ಅವರ ಅಕ್ಕ. ನಂತರ ಅವರ ತಾಯಿಗೂ ವಿಷಯ ಗೊತ್ತಾಯಿತು.

ತಾಯಿ ತಮ್ಮ ಮಗ ಹೀಗೆ ಬದಲಾಗುತ್ತಿದ್ದಾರೆ ಎಂದು ಮಗನನ್ನ ದೂರ ಮಾಡದೆ, ಮಗನಿಗೆ ಸಪೋರ್ಟ್ ಮಾಡಿದರೆ. ತಾಯಿಯ ಸಪೋರ್ಟ್ ಸಿಕ್ಕಿದ ಕಾರಣವೇ ನೀತು ವನಜಾಕ್ಷಿ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ತಾವು ನೀತು ಎಂದು ಹೆಸರು ಬದಲಾಯಿಸಿಕೊಂಡು, ತಮ್ಮ ತಾಯಿಯ ಹೆಸರಾಗಿರುವ ವನಜಾಕ್ಷಿ ಎನ್ನುವ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದಾರೆ. ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನೀತು.

ಇನ್ನು ಬಿಗ್ ಬಾಸ್ ಮನೆಯಲ್ಲಿ ಕೂಡ ನೀತು ಅವರು ಉತ್ತಮ ಸ್ಪರ್ಧಿಯಾಗಿ ಮುಂದುವರೆಯುತ್ತಿದ್ದರು. ಎರಡನೇ ಸಾರಿ ಕ್ಯಾಪ್ಟನ್ ಆಗಿ ಇನ್ನು ಉತ್ತಮ ಪ್ರದರ್ಶನ ನೀಡುವ ಭರವಸೆ ತೋರಿದ್ದ ನೀತು ಅವರು ಕಳೆದ ವಾರ ಎಲಿಮಿನೇಟ್ ಆಗಿದ್ದಾರೆ. ಬಳಿಕ ಇಂಟರ್ವ್ಯೂ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನೀತು ಅವರಿಗೆ ತಮಗೆ ಸಿಕ್ಕ ಸಂಭಾವನೆ ಎಷ್ಟು ಎಂದು ಪ್ರಶ್ನೆ ಕೇಳಲಾಗುತ್ತಿದ್ದು, ಅದಕ್ಕೆ ಜಾಣ್ಮೆಯಿಂದಲೇ ಉತ್ತರಿಸಿದ ನೀತು ಅವರು, “ನನಗೆ ಸಿಕ್ಕಿರೊ ಸಂಭಾವನೆ ಜನರ ಪ್ರೀತಿ ..” ಎಂದು ಹೇಳಿದ್ದಾರೆ.

Leave a Comment