ಕಾವೇರಿ ವಿವಾದ ಇನ್ನು ಕಡಿಮೆ ಆಗಿಲ್ಲ. ತಮಿಳುನಾಡಿಗೆ ನೀರು ಬಿಡಬಾರದು ಎಂದು ಕರ್ನಾಟಕದ ಜನರು ಪಟ್ಟು ಹಿಡಿದಿದ್ದಾರೆ. ನೀರಿನ ವಿಚಾರಕ್ಕೆ ಈಗಾಗಲೇ ಬಂದ್ ಗಳು ಕೂಡ ನಡೆದಿದೆ. ಸುಪ್ರೀಂ ಕೋರ್ಟ್ ಆಜ್ಞೆಯನ್ನು ಪಾಲಿಸಬಾರದು, ನಮ್ಮ ಜನರಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ರೈತರ ಮತ್ತು ಜನರ ಆಕಾಂಕ್ಷೆ ಆಗಿದೆ. ಜನರ ಜೊತೆಗೆ ಬೆಂಬಲವಾಗಿ ಚಿತ್ರರಂಗ ಕೂಡ ನಿಂತಿದೆ. ಶಿವಣ್ಣ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ದಿನ ಹೋರಾಟ ಕೂಡ ನಡೆಯಿತು.
ಈ ಹೋರಾಟದಲ್ಲಿ ನಟ ಶಿವ ರಾಜ್ ಕುಮಾರ್, ಹಂಸಲೇಖ, ನಟರಾದ ದರ್ಶನ್, ಧ್ರುವ ಸರ್ಜಾ, ಪ್ರಜ್ವಲ್, ರಘು ಮುಖರ್ಜಿ, ನಟಿಯರಾದ ಶ್ರುತಿ, ಉಮಾಶ್ರೀ, ಪೂಜಾ ಗಾಂಧಿ, ಗಿರಿಜಾ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದೆಯರು ಪಾಲ್ಗೊಂಡಿದ್ದರು. ಈ ರೀತಿಯಾಗಿ ಕಾವೇರಿ ಹೋರಾಟಕ್ಕೆ ಜನರ ಜೊತೆಗೆ ಸದಾ ನಿಲ್ಲುವುದಾಗಿ ಚಿತ್ರರಂಗದ ಕಲಾವಿದರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ನಡುವೆ ನಟ ಪ್ರೇಮ್ ಅವರು ತಾವು ಕಾವೇರಿ ಹೋರಾಟಕ್ಕೆ ಸದಾ ಸಿದ್ಧ ಎನ್ನುವುದನ್ನು ತಿಳಿಸಿದ್ದಾರೆ..
ಇನ್ಸ್ಟಾಗ್ರಾಮ್ ನಲ್ಲಿ ನಟ ನೆನಪಿರಲಿ ಪ್ರೇಮ್ ಅವರು ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದರೆ ಅದರಲ್ಲಿ ಪ್ರೇಮ್ ಅವರು ರಕ್ತದಲ್ಲಿ ಪತ್ರ ಬರೆಯುತ್ತಿರುವುದನ್ನು ನೋಡಬಹುದು. ಪ್ರಧಾನಮಂತ್ರಿಗಳಾದ ನರೇಂದ್ರಮೋದಿ ಅವರಿಗೆ ನಟ ಪ್ರೇಮ್ ಅವರು ಪತ್ರ ಬರೆದಿದ್ದು, ಪತ್ರದ ಮೂಲಕ ನರೇಂದ್ರಮೋದಿ ಅವರಿಗೆ ಕಾವೇರಿಗೆ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
“ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ.. ದಯವಿಟ್ಟು ನಮ್ಮ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿ. ಕಾವೇರಿ ನಮ್ಮದು. ಇಂತಿ ನೆನಪಿರಲಿ ಪ್ರೇಮ್ ಚಿತ್ರನಟ” ಎಂದು ನಟ ಪ್ರೇಮ್ ಅವರು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಈ ವಿಡಿಯೋ ಗೆ ‘ಸಿದ್ಧ ಕಣೋ ಪ್ರಾಣ ಕೊಡೋಕೆ, ಈ ನೆಲ ಜಲ ನಾಡು ನುಡಿಗೆ’ ಎಂದು ಕ್ಯಾಪ್ಶನ್ ಕೂಡ ಬರೆದಿದ್ದಾರೆ. ಈ ವಿಡಿಯೋಗೆ ಈಗ ವಿವಿಧ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ..
ನಟ ಪ್ರೇಮ್ ಅವರ ಅಭಿಮಾನಿಗಳು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವು ಜನರು ಪ್ರೇಮ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಲ್ಲಿ ಸಮಸ್ಯೆ ಇರುವುದು ಕರ್ನಾಟಕ ಸರ್ಕಾರದ್ದು, ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಕೇಳಬೇಕು, ಪ್ರಧಾನ ಮಂತ್ರಿಗಳನ್ನ ಇಲ್ಲಿ ಎಳೆದು ತರುವ ಅವಶ್ಯಕತೆ ಇಲ್ಲ ಎಂದು ಜನರು ಪ್ರೇಮ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
“ತಲೆಲಿ ಬುದ್ಧಿ ಇದ್ದವರು ಇಲ್ಲಿಯ ಸರ್ಕಾರನ ಕೇಳಬೇಕು, ಮೋದಿನ ಮಧ್ಯ ಯಾಕೆ ತರ್ತಿರಿ ಹಾ, ಊಟ ಬೇಕಾದರೆ ಹೋಟೆಲ್‌ಗೆ ಹೋಗಬೇಕು Jewellery Shopಗೆ ಅಲ್ಲ” ಎಂದು ಇನ್ನೊಬ್ಬರು ಕಮೆಂಟ್ ಬರೆದಿದ್ದಾರೆ.. “ತಪ್ಪಿರೋದು ರಾಜ್ಯ ಸರ್ಕಾರದ್ದು ರಾಜ್ಯ ಸರ್ಕಾರಕ್ಕೆ ಪ್ರಶ್ನೆಸಿ ಮೊದಲು, ‘ಮೋದಿಗಲ್ಲ ಸಿದ್ದುಗೆ ಕೇಳು …. ಉಪೇಂದ್ರ ಅವರ ಮಾತು ಒಮ್ಮೆ ಕೇಳು ಗೊತ್ತಾಗುತ್ತೆ.. ಎಲ್ಲಿ ಹೇಳಿದ್ರೆ ಪ್ರಾಬ್ಲಂ ಸಾಲ್ವ್ ಆಗುತ್ತೆ ಅಂತ’, ‘ರಾಜ್ಯ ಸರ್ಕಾರವನ್ನ ಏಕೆ ಪ್ರಶ್ನಿಸುವುದಿಲ್ಲ? ‘, ‘ಯಾರನ್ನ ಕೇಳಬೇಕು ಯಾರನ್ನ ಕೇಳ್ತಾ ಇದ್ದೀರಾ. ಸಿನಿಮಾದವರು ಕಾಂಗ್ರೆಸ್ ಏಜೆಂಟ್ ಡಿಕೆ ಶಿವಕುಮಾರ್ ಏಜೆಂಟ್ ಗಳಂತೆ ವರ್ತಿಸುವುದು ನಿಲ್ಲಿಸಿ” ಎಂದು ಇನ್ನೊಬ್ಬರು ಕಮೆಂಟ್ ಬರೆದಿದ್ದಾರೆ..