Niharika Konidela: ವಿಚ್ಛೇದನದ ಬಳಿಕ ಎರಡನೇ ಮದುವೆಗೆ ಸಿದ್ಧವಾದ ಮೆಗಾಸ್ಟಾರ್ ಚಿರಂಜೀವಿ ಅಳಿಯ

Written by Pooja Siddaraj

Published on:

ತೆಲುಗು ಚಿತ್ರರಂಗದ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಭಾರತ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಕಲಾವಿದನಾಗಿ ಹೆಸರು ಮಾಡಿದ್ದಾರೆ. ಚಿರಂಜೀವಿ ಅವರು ಈಗಲೂ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚಿರಂಜೀವಿ ಅವರು ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೆ ಅವರ ಕುಟುಂಬದ ವಿಚಾರಕ್ಕೂ ಆಗಾಗ ಸುದ್ದಿಯಾಗುತ್ತಾರೆ.

ಚಿರಂಜೀವಿ ಅವರ ಕುಟುಂಬದಲ್ಲಿ ಹೆಚ್ಚಾಗಿ ಚರ್ಚೆ ಆಗುವುದು ಚಿರಂಜೀವಿ ಅವರ ಎರಡನೇ ಮಗಳು ನಿಹಾರಿಕಾ ಅವರ ಬಗ್ಗೆ. ಚಿತ್ರರಂಗದಲ್ಲೂ ಸಕ್ರಿಯವಾಗಿರುವ ನಿಹಾರಿಕಾ ಅವರು ಮದುವೆ ವಿಚಾರದಿಂದ ಸುದ್ದಿಯಾಗಿದ್ದರು. ನಿಹಾರಿಕಾ ಅವರು ಚೈತನ್ಯ ಜೊನ್ನಲಗಡ್ಡ ಅವರೊಡನೆ 2020ರಲ್ಲಿ ಅದ್ಧೂರಿಯಾಗಿ ವಿವಾಹವಾದರು. ಇವರಿಬ್ಬರ ಮದುವೆ ರಾಜಸ್ಥಾನದಲ್ಲಿ ಕುಟುಂಬದವರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಮದುವೆಯ ನಂತರ ನಿಹಾರಿಕಾ ಅವರು ಚಿತ್ರರಂಗದಲ್ಲಿ ಕೂಡ ಸಕ್ರಿಯವಾಗಿದ್ದರು. ಆದರೆ ಈ ವರ್ಷದ ಶುರುವಿನಿಂದ ನಿಹಾರಿಕಾ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆ ಇರಬಹುದು ಎಂದು ಊಹಾಪೋಹಗಳು ಶುರುವಾಗಿದ್ದವು. ಅದೇ ರೀತಿ ಈ ವರ್ಷ ಜೂನ್ ತಿಂಗಳಿನಲ್ಲಿ ಇಬ್ಬರು ವಿಚ್ಛೇದನ ಪಡೆದಿರುವುದಾಗಿ ಅಧಿಕೃತವಾಗಿ ತಿಳಿಸಿದರು. ಬಳಿಕ ನಿಹಾರಿಕಾ ಅವರು ಸಿನಿಮಾದಲ್ಲಿ ಸಕ್ರಿಯವಾಗಿದ್ದಾರೆ.

ಪ್ರಸ್ತುತ ನಿಹಾರಿಕಾ ಅವರ ಪತಿ ಚೈತನ್ಯ ಅವರು ಎರಡನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಚೈತನ್ಯ ಅವರು ವಿಚ್ಛೇದನದ ನಂತರ ಒಂಟಿಯಾಗಿದ್ದು, ಅವರ ಕುಟುಂಬದಲ್ಲಿ ಎರಡನೇ ಮದುವೆ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ದು ಅದಕ್ಕಾಗಿ ಚೈತನ್ಯ ಅವರು ಒಪ್ಪಿಗೆ ನೀಡಿದ್ದಾರಂತೆ. ಕುಟುಂಬಕ್ಕೆ ಆತ್ಮೀಯವಾಗಿರುವ ಐಪಿಎಸ್ ಅಧಿಕಾರಿ ಒಬ್ಬರ ಮಗಳ ಜೊತೆಗೆ ಚೈತನ್ಯ ಅವರ ಮದುವೆ ನಡೆಯುತ್ತದೆ ಎಂದು ಮಾಹಿತಿ ಸಿಕ್ಕಿದೆ.

Leave a Comment