Nikhil Kumaraswamy: ಫ್ಯಾಮಿಲಿ ಜೊತೆಗೆ ಸಂಕ್ರಾಂತಿ ಹಬ್ಬ ಆಚರಿಸಿ ನಿಖಿಲ್ ಕುಮಾರಸ್ವಾಮಿ!

Written by Pooja Siddaraj

Published on:

Nikhil Kumaraswamy: ಸ್ಯಾಂಡಲ್ ವುಡ್ ನ ಯುವರಾಜ ಎಂದು ಹೆಸರು ಪಡೆದುಕೊಂಡಿರುವ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಯುವನಟ ಹಾಗೂ ಯುವ ರಾಜಕರಣಿ. ವೈಯಕ್ತಿಕ ಜೀವನದಲ್ಲಿ ಮದುವೆಯಾಗಿ, ತಂದೆಯಾಗಿ ನಂತರ ಕರ್ತವ್ಯಗಳನ್ನು ಬಹಳ ಸಂತೋಷದಿಂದ ಮಾಡುತ್ತಿರುವ ನಿಖಿಲ್, ಸಿನಿಮಾಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಇದೀಗ ಇವರು ಕುಟುಂಬದ ಜೊತೆಗೆ ಸಂಕ್ರಾಂತಿ ಹಬ್ಬದ ಆಚರಣೆ ಮಾಡಿರುವ ಫೋಟೋಸ್ ವೈರಲ್ ಆಗಿದೆ.

ನಿಖಿಲ್ ಕುಮಾರಸ್ವಾಮಿ ಸ್ವಾಮಿ ಜಾಗ್ವರ್ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂಗರ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದರು. ರಾಜಕೀಯಕ್ಕೂ ಎಂಟ್ರಿ ಕೊಟ್ಟು, ಒಳ್ಳೆಯ ಹೆಸರು ಪಡೆದರು ನಿಖಿಲ್. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ರೇವತಿ ಅವರ ಜೊತೆ ನಡೆಯಿತು. ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ ನಿಖಿಲ್, ಆಗಾಗ ಪತ್ನಿ ಜೊತೆಗೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಹಾಗೆಯೇ ಇವರ ಮುದ್ದಿನ ಮಗ ಅವ್ಯಾನ್ ಅವರನ್ನು ಕಂಡರು ಸಹ, ಅಭಿಮಾನಿಗಳಿಗೆ ಬಹಳ ಪ್ರೀತಿ ಇದೆ. ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುವ ನಿಖಿಲ್ ಅವರು, ಇದೀಗ ತಮ್ಮ ಕುಟುಂಬದ ಜೊತೆಗೆ ಸಂಕ್ರಾಂತಿ ಹಬ್ಬದ ಆಚರಣೆ ಮಾಡಿದ್ದು, ಈ ಫೋಟೋಸ್ ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರ ಸಂಕ್ರಾಂತಿ ಸೆಲೆಬ್ರೇಷನ್ ಫೋಟೋಸ್ ಈಗ ವೈರಲ್ ಆಗಿದೆ.

Leave a Comment