ನಿಂಬೆ ಹಣ್ಣಿನಿಂದ ಮಾಡಬಹುದಾದ ಸುಲಭವಾದ ಉಪಾಯದ ಬಗ್ಗೆ ತಿಳಿದುಕೊಳ್ಳಿ!
ಮೊದಲಿಗೆ ಸ್ವಚ್ಛವಾದ 2 ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು, ಇದಾದನಂತರ ಒಂದು ಲೋಟದಲ್ಲಿ ನೀರನ್ನು ಹಾಕಿ ನೀರಿನೊಳಗೆ ಈ ಎರಡು ನಿಂಬೆಹಣ್ಣನ್ನು ಹಾಕಬೇಕು. ಈ ರೀತಿಯಾಗಿ ನಿಂಬೆಹಣ್ಣನ್ನು 24 ಗಂಟೆಗಳ ಕಾಲ ನೀರಿನಲ್ಲಿ ಹಾಕಿ ಇಡಬೇಕು.
ಮೊದಲಿಗೆ ಲೋಟದಲ್ಲಿರುವ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗ ಮಾಡಿ ಮನೆ ಸುತ್ತ ಇರುವ ನಾಲ್ಕು ಮೂಲೆಗೂ ನಿಂಬೆಹಣ್ಣು ಇಟ್ಟು ಅದರ ಮೇಲೆ ಲೋಟದಲ್ಲಿ ಇಟ್ಟಿದ್ದ ನೀರನ್ನು ಸ್ವಲ್ಪ ಹಾಕಬೇಕು. ಈ ರೀತಿ ಮಾಡುವುದರಿಂದ ಮನೆ ಮೇಲೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದರೆ ಅಥವಾ ದೋಷಗಳು ಏನಾದರೂ ಇದ್ದರೆ ಅದು ಕಮ್ಮಿಯಾಗುತ್ತದೆ.
ನಿಂಬೆಹಣ್ಣನ್ನು ಮನೆಯ ನಾಲ್ಕು ದಿಕ್ಕುಗಳಲ್ಲೂ ಇಡಬೇಕಾದರೆ ಯಾವ ರೀತಿ ಬೇಡಿಕೊಳ್ಳಬೇಕು ಎಂದರೆ ನಮ್ಮ ಮನೆಗೆ ಯಾವುದೇ ರೀತಿಯ ಕಷ್ಟಗಳು ಬರದೇ ಇರಲಿ ಎಂದು ಸ್ಮರಣೆ ಮಾಡಿಕೊಳ್ಳುತ್ತಾ ನಾಲ್ಕು ದಿಕ್ಕುಗಳಲ್ಲಿ ಇಡುವುದರಿಂದ ನಿಮ್ಮೆಲ್ಲಾ ಸಮಸ್ಯೆ ದೂರವಾಗುತ್ತದೆ.
ಒಂದು ಲೋಟದಲ್ಲಿ ಇಟ್ಟಿದ್ದ ಮತ್ತೊಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಮನೆಯಲ್ಲಿ ಯಾರು ಕೆಲಸವನ್ನು ಮಾಡುತ್ತಿರುತ್ತಾರೋ ಅವರ ತಲೆಯ ಮೇಲಿಂದ ಕ್ಲಾಕ್ ವೈಸ್ ಏಳು ಬಾರಿ ನಿವಾಳಿಸಬೇಕು. ಇದಾದ ನಂತರ ನಿವಾಳಿಸಿದ ಆ ನಿಂಬೆಹಣ್ಣನ್ನು ಮೂರು ದಾರಿ ಸೇರುವ ಜಾಗದಲ್ಲಿ ಎಸೆದು ಹಿಂದೆ ತಿರುಗಿ ನೋಡದೆ ಮನೆಗೆ ಬರಬೇಕು. ಈ ರೀತಿ ಮಾಡುವುದರಿಂದ ಕೆಲಸ ಮಾಡುವ ವ್ಯಕ್ತಿಗಳಿಗೆ ಕೆಲಸದಲ್ಲಿ ಪ್ರಶಂಸೆ ಅಥವಾ ಗೌರವ ಅಥವಾ ಉನ್ನತಿ ದೊರೆಯುತ್ತದೆ.