Nithyananda Swami:ವಿ ವಾ ದಿತ, ಸ್ವಯಂ ಘೋಷಿತ ದೇವಮಾನವ ಬಿಡದಿಯ ನಿತ್ಯಾನಂದ(Nithyananda) ಇದೀಗ ಮತ್ತೊಮ್ಮೆ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಹಲವು ಆ ರೋ ಪಗಳನ್ನು ಹೊತ್ತು ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಒಂದು ದ್ವೀಪ ರಾಷ್ಟ್ರವನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ(Kailasa Nation) ಎಂದು ಹೆಸರನ್ನು ಇಟ್ಟು ಆಡಳಿತ ನಡೆಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಅದಕ್ಕಿಂತ ದೊಡ್ಡ ಅಚ್ಚರಿಯ ವಿಷಯ ಏನೆಂದರೆ ಇತ್ತೀಚೆಗೆ ವಿಶ್ವಸಂಸ್ಥೆಯ ಮಹತ್ವದ ಸಮ್ಮೇಳನ ಒಂದರಲ್ಲಿ ಕೈಲಾಸದೇಶ ಭಾಗಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಗಳು ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಭಾಗಿಯಾಗಿದ್ದು ಹಿಂದೂ ಧರ್ಮದ ಪುನರುಜ್ಜೀವನಕ್ಕೆ ನಿಂತಿರುವ ನಿತ್ಯಾನಂದನಿಗೆ ಭಾರತದಲ್ಲಿ ಕಿ ರು ಕು ಳ ನೀಡಲಾಗುತ್ತಿದೆ, ಹೀಗಾಗಿ ಹಿಂದೂ ಧರ್ಮದ ಸರ್ವೋಚ್ಛ ಧರ್ಮ ಗುರುವಿಗೆ ರಕ್ಷಣೆ ಬೇಕು ಎಂದು ಮನವಿ ಮಾಡಲಾಗಿದೆ.

ಜೀನೇವಾದಲ್ಲಿ ನಡೆದಂತಹ ವಿಶ್ವಸಂಸ್ಥೆಯ(UNO) 19ನೇ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕು ಸಮಿತಿ ಸಭೆಯಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ಮಾ ವಿಜಯಪ್ರಿಯ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನಿತ್ಯಾನಂದನ ಮೇಲೆ ಭಾರತ ನಡೆಸುತ್ತಿರುವ ಕಿ ರು ಕು ಳವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಲಾಗಿದೆ. ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಖಾಯಂ ರಾಯಭಾರಿಯಾಗಿ ಮಾ ವಿಜಯ ಪ್ರಿಯ ಅವರನ್ನು ನೇಮಕ ಮಾಡಲಾಗಿದೆ. ಇದೀಗ ನಿತ್ಯಾನಂದನ ಕೈಲಾಸ ದೇಶ ವಿಶ್ವಸಂಸ್ಥೆಯಲ್ಲಿ ತನ್ನ ಮೋಡಿಯನ್ನು ಮಾಡಲು ಮುಂದಾದಂತೆ ಕಾಣುತ್ತಿದೆ.
ಭಾರತದಿಂದ ಪರಾರಿಯಾಗಿ ಹೋದ ನಿತ್ಯಾನಂದ ಕೈಲಾಸ ದೇಶ ಸೃಷ್ಟಿ ಮಾಡಿ ಅದಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆಯನ್ನು ಪಡೆಯಲು ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದ್ದಾನೆ. ಮಹಾಸಮ್ಮೇಳನದ ಅಧಿಕೃತ ವೀಡಿಯೋವನ್ನು ವಿಶ್ವಸಂಸ್ಥೆಯು ತನ್ನ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕೈಲಾಸ ದೇಶದ ಪ್ರತಿನಿಧಿ ಭಾಗವಹಿಸಿ ಮಾತನಾಡುತ್ತಿರುವ ದೃಶ್ಯ ಎಲ್ಲರ ಕಣ್ಮುಂದೆ ಬಂದಿದ್ದು, ಇದು ಭಾರಿ ಸಂಚಲನವನ್ನು ಸೃಷ್ಟಿಸಿದೆ. 2019ರಲ್ಲಿ ಸೃಷ್ಟಿಯಾದ ಕೈಲಾಸ ದೇಶ ವಿಶ್ವಸಂಸ್ಥೆಗೆ ಮಾನ್ಯತೆ ನೀಡುವಂತೆ ಮನವಿಯನ್ನು ಮಾಡಲಾಗಿತ್ತು. Nithyananda Swami