Nivedita Gowda: ನಿವಿ ರೀಲ್ಸ್ ನೋಡಿ ಚಂದು ಎಲ್ಲಿದ್ದೀಯಪ್ಪಾ ಎಂದ ನೆಟ್ಟಿಗರು! ಏನಾಗಿದೆ ಗೊತ್ತಾ?

Written by Pooja Siddaraj

Published on:

Nivedita Gowda: ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ನಿವೇದಿತಾ ಗೌಡ, ಫಿನಾಲೆವರೆಗು ಬಿಗ್ ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ್ದರು. ಬಿಗ್ ಬಾಸ್ ಇಂದ ಹೊರಬಂದ ನಂತರ ತಮ್ಮ ಜೊತೆಗೆ ಪ್ರತಿಸ್ಪರ್ಧಿಯಾಗಿದ್ದು, ಆ ಸೀಸನ್ ವಿನ್ನರ್ ಆದ ಚಂದನ್ ಶೆಟ್ಟಿ ಅವರೊಡನೆ ಮದುವೆಯಾಗಿ ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ.

ಜೊತೆಗೆ ಕಿರುತೆರೆಯಲ್ಲಿ ಕೂಡ ನಿವೇದಿತಾ ಅವರು ಹೆಚ್ಚಾಗಿ ಸಕ್ರಿಯವಾಗಿದ್ದು, ಹಲವು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ ರಾಣಿ, ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಹೆಚ್ಚಾಗಿ ಟ್ರಾವೆಲ್ ಮಾಡುತ್ತಾರೆ. ವಿದೇಶ ಪ್ರವಾಸಕ್ಕೆ ಹೋಗುವ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ..

ಇಷ್ಟೆಲ್ಲಾ ಬ್ಯುಸಿ ಇರುವ ನಿವೇದಿತಾ ಗೌಡ ಅವರು ಬಿಗ್ ಬಾಸ್ ಶೋಗೆ ಮತ್ತೊಮ್ಮೆ ಬರುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು, ಆದರೆ ನಿವೇದಿತಾ ಗೌಡ ಬಿಗ್ ಬಾಸ್ ಶೋಗೆ ಬರಲಿಲ್ಲ. ಆದರೆ ಫಿನಾಲೆ ಸಂಚಿಕೆಯಲ್ಲಿ ಗಿಚ್ಚಿ ಗಿಲಿಗಿಲಿ ತಂಡದ ಜೊತೆಗೆ ಬಂದು ಪರ್ಫಾರ್ಮ್ ಮಾಡಿದ್ದರು. ಹಾಗೆಯೇ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಹೆಚ್ಚಾಗಿ ರೀಲ್ಸ್ ಶೇರ್ ಮಾಡುತ್ತಾರೆ..

ಇದೀಗ ನಿವೇದಿತಾ ಗೌಡ ಅವರು ಶೇರ್ ಮಾಡಿರುವ ರೀಲ್ಸ್ ನೋಡ್ತಿರೋ ನೆಟ್ಟಿಗರು, ಚಂದನ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ. ನಿನ್ನ ಹೆಂಡತಿ ಮಾಡೋ ರೀಲ್ಸ್ ನ ನೋಡೋಕೆ ಆಗ್ತಿಲ್ಲ.. ಎಂದು ಚಂದನ್ ಶೆಟ್ಟಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ರೆಡ್ ಡ್ರೆಸ್ ನಲ್ಲಿ ನಿವೇದಿತಾ ಗೌಡ ಅವರು ಡ್ಯಾನ್ಸ್ ಮಾಡುತ್ತಿರುವ ರೀಲ್ಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Comment