Niveditha Gowda: ಕೊನೆಗೂ ಕನ್ನಡ ಹಾಡಿಗೆ ರೀಲ್ಸ್ ಮಾಡಿದ ನಿವೇದಿತಾ ಗೌಡ! ವಿಡಿಯೋ ವೈರಲ್

0 15

Niveditha Gowda: ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ನಿವೇದಿತಾ ಗೌಡ, ಫಿನಾಲೆವರೆಗು ಬಿಗ್ ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ್ದರು. ಬಿಗ್ ಬಾಸ್ ಇಂದ ಹೊರಬಂದ ನಂತರ ತಮ್ಮ ಜೊತೆಗೆ ಪ್ರತಿಸ್ಪರ್ಧಿಯಾಗಿದ್ದು, ಆ ಸೀಸನ್ ವಿನ್ನರ್ ಆದ ಚಂದನ್ ಶೆಟ್ಟಿ ಅವರೊಡನೆ ಮದುವೆಯಾಗಿ ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ.

ಜೊತೆಗೆ ಕಿರುತೆರೆಯಲ್ಲಿ ಕೂಡ ನಿವೇದಿತಾ ಅವರು ಹೆಚ್ಚಾಗಿ ಸಕ್ರಿಯವಾಗಿದ್ದು, ಹಲವು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ ರಾಣಿ, ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಹೆಚ್ಚಾಗಿ ಟ್ರಾವೆಲ್ ಮಾಡುತ್ತಾರೆ. ವಿದೇಶ ಪ್ರವಾಸಕ್ಕೆ ಹೋಗುವ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ..

ಇಷ್ಟೆಲ್ಲಾ ಬ್ಯುಸಿ ಇರುವ ನಿವೇದಿತಾ ಗೌಡ ಅವರು ಬಿಗ್ ಬಾಸ್ ಶೋಗೆ ಮತ್ತೊಮ್ಮೆ ಬರುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು, ಆದರೆ ನಿವೇದಿತಾ ಗೌಡ ಬಿಗ್ ಬಾಸ್ ಶೋಗೆ ಬರಲಿಲ್ಲ. ಆದರೆ ಫಿನಾಲೆ ಸಂಚಿಕೆಯಲ್ಲಿ ಗಿಚ್ಚಿ ಗಿಲಿಗಿಲಿ ತಂಡದ ಜೊತೆಗೆ ಬಂದು ಪರ್ಫಾರ್ಮ್ ಮಾಡಿದ್ದರು. ಹಾಗೆಯೇ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಹೆಚ್ಚಾಗಿ ರೀಲ್ಸ್ ಶೇರ್ ಮಾಡುತ್ತಾರೆ..

ಇದೀಗ ನಿವೇದಿತಾ ಗೌಡ ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ್ ಮುಖವ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಸಪೋರ್ಟ್ ಮಾಡಿದ್ದಾರೆ. ಯಾವಾಗಲೂ ಇಂಗ್ಲಿಷ್ ಹಾಡಿಗೆ ರೀಲ್ಸ್ ಮಾಡುವ ನಿವೇದಿತಾ ಗೌಡ, ಇದೀಗ ಕನ್ನಡ ಹಾಡಿಗೆ ರೀಲ್ಸ್ ಮಾಡಿರೋದು ನೋಡಿ, ಈಗಾದರು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿದ್ದೀರಾ ಎಂದು ನೆಟ್ಟಿಗರು ಪ್ರಶಂಸೆ ನೀಡಿದ್ದಾರೆ.

Leave A Reply

Your email address will not be published.