ಬಿಗ್ ಬಾಸ್ ಶೋ ಶುರುವಾಗುತ್ತೆ ಎಂದರೆ ಕಿರುತೆರೆ ವೀಕ್ಷಕರಲ್ಲಿ ಹೊಸ ಕುತೂಹಲ ಶುರುವಾಗುತ್ತದೆ. ಯಾರೆಲ್ಲಾ ಸೆಲೆಬ್ರಿಟಿಗಳು ನೂರು ದಿನಗಳ ಆಟಕ್ಕೆ ಬಿಗ್ ಬಾಸ್ ಮನೆಗೆ ಹೋಗ್ತಾರೆ? ಯಾವೆಲ್ಲಾ ಟಾಸ್ಕ್ ಗಳನ್ನು ಕೊಡಲಾಗುತ್ತೆ? ಹೀಗೆ ಸಾಕಷ್ಟು ಕುತೂಹಲ ಜನರಲ್ಲಿ ಇರುತ್ತದೆ. ಈ ವರ್ಷ ಕನ್ನಡ ಬಿಗ್ ಬಾಸ್ ಬಹಳ ಸ್ಪೆಷಲ್, ಅದಕ್ಕೆ ಕಾರಣ ಈ ವರ್ಷ ಬಿಗ್ ಬಾಸ್ ಕನ್ನಡ 10ನೇ ಸೀಸನ್ ನಡೆಯಲಿದೆ.
ಇದು ಬಹಳ ವಿಶೇಷವಾಗಿದ್ದು, ಆಕ್ಟೊಬರ್ 8ರಿಂದ ಬಿಬಿಕೆ10 ಶುರುವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಬಿಗ್ ಬಾಸ್ ಶೋಗೆ ಸಂಬಂಧಿಸಿದ ಹಾಗೆ ಪ್ರೊಮೋಗಳು, ಪೋಸ್ಟರ್ ಗಳು ವೈರಲ್ ಆಗುತ್ತಿದೆ. ಇದರ ನಡುವೆ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಹೋಗಬಹುದು ಎನ್ನುವ ಚರ್ಚೆಗಳು ಕೂಡ ಶುರುವಾಗುತ್ತಿದೆ. ಈ ಲಿಸ್ಟ್ ನಲ್ಲಿ ಈಗ ನಿವೇದಿತಾ ಗೌಡ ಅವರ ಹೆಸರು ಕೇಳಿಬರುತ್ತಿದೆ..
ಬಿಗ್ ಬಾಸ್ ಮನೆಗೆ ನಿವೇದಿತಾ ಗೌಡ ಹೊಸಬರಲ್ಲ, ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ನಿವೇದಿತಾ ಗೌಡ, ಫಿನಾಲೆವರೆಗು ಬಿಗ್ ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ್ದರು. ಬಿಗ್ ಬಾಸ್ ಇಂದ ಹೊರಬಂದ ನಂತರ ತಮ್ಮ ಜೊತೆಗೆ ಪ್ರತಿಸ್ಪರ್ಧಿಯಾಗಿದ್ದು, ಆ ಸೀಸನ್ ವಿನ್ನರ್ ಆದ ಚಂದನ್ ಶೆಟ್ಟಿ ಅವರೊಡನೆ ಮದುವೆಯಾಗಿ ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ.
ಜೊತೆಗೆ ಕಿರುತೆರೆಯಲ್ಲಿ ಕೂಡ ನಿವೇದಿತಾ ಅವರು ಹೆಚ್ಚಾಗಿ ಸಕ್ರಿಯವಾಗಿದ್ದು, ಹಲವು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ ರಾಣಿ, ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಹೆಚ್ಚಾಗಿ ಟ್ರಾವೆಲ್ ಮಾಡುತ್ತಾರೆ. ವಿದೇಶ ಪ್ರವಾಸಕ್ಕೆ ಹೋಗುವ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ..
ಇಷ್ಟೆಲ್ಲಾ ಬ್ಯುಸಿ ಇರುವ ನಿವೇದಿತಾ ಗೌಡ ಅವರು ಬಿಗ್ ಬಾಸ್ ಶೋಗೆ ಮತ್ತೊಮ್ಮೆ ಬರುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಒಂದು ಸಾರಿ ಬಿಗ್ ಬಾಸ್ ಶೋಗೆ ಬಂದವರನ್ನು ಮತ್ತೊಮ್ಮೆ ಕರೆಸುವುದು ಹೊಸ ವಿಷಯವಲ್ಲ. ಜನರಿಗೆ ಮನರಂಜನೆ ಕೊಡುತ್ತಾರೆ ಎನ್ನುವ ಕಾರಣಕ್ಕೆ ಈ ಥರ ಹಳೆಯ ಸ್ಪರ್ಧಿಗಳನ್ನು ಮತ್ತೊಮ್ಮೆ ಬಿಗ್ ಮನೆಗೆ ಕರೆಸುವ ಘಟನೆ ನಡೆದಿದೆ.
ಇವರು ಎಷ್ಟು ದಿನಗಳ ಕಾಲ ಇರುತ್ತಾರೆ ಎಂದು ಹೇಳಲು ಆಗೋದಿಲ್ಲ, ಈ ರೀತಿಯಾಗಿ ನಿವೇದಿತಾ ಗೌಡ ಅವರನ್ನು ಬಿಗ್ ಬಾಸ್ ಮನೆಗೆ ಕಳಿಸಬೇಕು ಎನ್ನುವ ಚರ್ಚೆ ನಡೆದಿದ್ದು, ಈಗಾಗಲೇ ನಿವೇದಿತಾ ಗೌಡ ಅವರನ್ನು ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಕರೆಸಲು ಅವರಿಗೆ ಕರೆ ಕೂಡ ಹೋಗಿದೆ ಎಂದು ಹೇಳಲಾಗುತ್ತಿದ್ದು, ಇದರಲ್ಲಿ ಸತ್ಯಾಂಶ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಒಟ್ಟಿನಲ್ಲಿ ನಿಜಕ್ಕೂ ನಿವೇದಿತಾ ಗೌಡ ಅವರು ನಿಜಕ್ಕೂ ಬಿಗ್ ಬಾಸ್ ಮನೆಗೆ ಹೋಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.