ಕುಕ್ಕರ್ ಅಡುಗೆ ಬಿಟ್ಟು ಈ ಪಾತ್ರೆಯಲ್ಲಿ ಅಡುಗೆ ಮಾಡಿ ನೋಡಿ ನಿಮ್ಮ ದೇಹ ಹೇಗಾಗುತ್ತದೆ!
ಈಗಿನ ಕಾಲಮಾನದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕುಕ್ಕರ್ ಇದೆ ಆದ್ದರಿಂದ ಪ್ರತಿಯೊಬ್ಬರೂ ಕುಕ್ಕರ್ ಬಳಸಿ ಅಡುಗೆ ಮಾಡುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಮಣ್ಣಿನ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭಗಳು ಸಿಗಬಹುದು ಎಂದು.ಇನ್ನು ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿಕೊಂಡು ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..
ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣಗಳ ಬಗ್ಗೆ ತಿಳಿಯೋಣ.
ನಿಮ್ಮ ಜೀವನ ಚೆನ್ನಾಗಿರಬೇಕಾದರೆ ನಿಮ್ಮ ಜಿಹ್ವಾ ಹತೋಟಿಯಲ್ಲಿರಬೇಕು.ಜಿಹ್ವಾ ಅಂದರೆ ಸಂಸ್ಕೃತದಲ್ಲಿ ನಾಲಿಗೆ ಎಂದು ಅರ್ಥ.ಯಾರಿಗೆ ನಾಲಿಗೆಯ ಮೇಲೆ ಹತೋಟಿ ಇರುತ್ತದೆಯೋ ಅವರ ಜೀವನ ಸುಂದರವಾಗಿರುತ್ತದೆ.ನಾಲಿಗೆ ಯನ್ನು ಬಳಸಿ ಏನೇನೋ ಮಾತನಾಡಿದರೆ ನಮ್ಮ ಜೀವನ ಚೆನ್ನಾಗಿರುವುದಿಲ್ಲ
ಅದೇ ರೀತಿ ನಾಲಿಗೆ ಕೇಳುವುದನ್ನೆಲ್ಲ ತಿಂದರೆ ಸಹ ನಮ್ಮ ಜೀವನ ಚೆನ್ನಾಗಿರುವುದಿಲ್ಲ.
ಮಣ್ಣಿನ ಮಡಿಕೆ
ಮನುಷ್ಯ ಮಾಡಲ್ಪಟ್ಟಿರುವುದು ಸಪ್ತಧಾತು ಮತ್ತು ಪಂಚ ಮಹಾಭೂತಗಳಿಂದ.ಇಡೀ ಪ್ರಪಂಚ ಮಾಡಲ್ಪಟ್ಟಿರುವುದು ಪಂಚ ಮಹಾಭೂತಗಳ ಆಧಾರದ ಮೇಲೆ.ಈ ಭೂಮಿಯ ಮೇಲೆ ಹೇಗೆ ಪಂಚ ಮಹಾಭೂತಗಳು ಇದೆಯೋ ಅದೇ ರೀತಿ ನಮ್ಮ ದೇಹದಲ್ಲೂ ಸಹ ಪಂಚಮಹಾಭೂತಗಳು ಇದೆ.ಪಂಚತತ್ವಗಳಿಂದ ಮಾಡಲ್ಪಟ್ಟಿರುವ ಈ ಶರೀರ ಕೊನೆಗೆ ಸೇರಬೇಕಾಗಿರುವುದು ಪಂಚ ತತ್ವಗಳಲ್ಲಿ.ಇನ್ನೂ ಪಂಚ ತತ್ವಗಳಿಂದ ಮಾಡಲ್ಪಟ್ಟಿರುವ ಶರೀರಕ್ಕೆ ಏನಾದರೂ ತೊಂದರೆಯಾದರೆ ಅದನ್ನು ಪಂಚತತ್ವ ಗಳಿಂದಲೇ ಸರಿ ಮಾಡಿಕೊಳ್ಳಬೇಕು.
ಅಂದರೆ ಪಂಚತತ್ವಗಳ ಸಹಾಯದ ಮೂಲಕ ಮಾಡಲ್ಪಟ್ಟಿರುವ ಆಹಾರವನ್ನು ಸೇವಿಸಬೇಕು ಅಂದರೆ
ಪಂಚ ತತ್ವಗಳನ್ನು ಒಳಗೊಂಡಿರುವಂತಹ ಪೃಥ್ವಿಯು ಮಣ್ಣಿನ ಮಡಕೆ ಯಲ್ಲಿ ಇರುತ್ತದೆ ಆದ್ದರಿಂದ ಮಣ್ಣಿನ ಮಡಕೆಯಲ್ಲಿ ಅಡುಗೆಯನ್ನು ಮಾಡಿಕೊಂಡು ಸೇವಿಸಬೇಕು.ಹೀಗೆ ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡಿಕೊಂಡು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಗೆ ಶ್ರೇಯಸ್ಕರ.
ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುವುದರಿಂದ ಯಾವುದೇ ರೀತಿಯ ಕಲ್ಮಶ ನಮ್ಮದೇಹಕ್ಕೆ ಸೇರಿಕೊಳ್ಳುವುದಿಲ್ಲ ಅಂದರೆ ಕೆಮಿಕಲ್ಸ್ ದೇಹಕ್ಕೆ ಸೇರಿಕೊಳ್ಳುವುದಿಲ್ಲ ಇನ್ನು
ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ.ಅಂದರೆ ಪೃಥ್ವಿಯು ಪಂಚ ಮಹಾಭೂತಗಳಲ್ಲಿ ಒಂದಾಗಿರುವುದರಿಂದ ಮಣ್ಣಿನಿಂದಲೆ ಮಾಡಿರುವ ಮಡಕೆ ಆರೋಗ್ಯಕ್ಕೆ ಒಳ್ಳೆಯದೇ ಆಗಿರುತ್ತದೆ.
ಅಂದರೆ ಹಾಗೆ ನೋಡುವುದಾದರೆ ಮಣ್ಣಿನಿಂದ ಬೆಳೆದ ತರಕಾರಿ , ದವಸ ಧಾನ್ಯಗಳನ್ನು ಹಾಗೂ ಇತ್ಯಾದಿಗಳನ್ನು ನಮ್ಮ ದಿನ ಬಳಸುತ್ತೇವೆ ಮಣ್ಣಿನಿಂದಲೇ ಬೆಳೆಯಲಾಗುತ್ತದೆ.
ಇನ್ನು ಅದೇ ಮಣ್ಣಿನ ಒಳಗೆ ಉದ್ಭವಿಸುವ ನೀರನ್ನು ಬಳಸಿ ಅಡುಗೆ ಮಾಡುತ್ತೇವೆ ಆದ್ದರಿಂದ
ಮಣ್ಣಿನ ಪಾತ್ರೆಗಳನ್ನು ಬಳಸಿ ಅಡುಗೆ ಮಾಡಿ ಸೇವಿಸಿ.
ನಮ್ಮ ದೇಹದಲ್ಲಿರುವ ಗಟ್ಟಿ ಅಂಗಾಂಗಗಳು ಅಂದರೆ ಹಲ್ಲು , ಮೂಳೆ ಗಟ್ಟಿಯಾಗಿರಬೇಕೆಂದರೆ ಪೃಥ್ವಿ ಅಂಶವು ನಮ್ಮ ದೇಹಕ್ಕೆ ಬೇಕಾಗಿರುತ್ತದೆ.ಅದು ನಮಗೆ ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡಿಕೊಂಡು ಸೇವಿಸುವುದರಿಂದ ಸಿಗುತ್ತದೆ.
ಧನ್ಯವಾದಗಳು.