ಹಿಂದಿನ ಕಾಲದಿಂದಲೂ ಈ ಸೊಪ್ಪನ್ನು ಕಾ ಮೋ ತ್ತೇ ಜಕವಾಗಿ ಬಳಸಲಾಗುತ್ತಿದೆ!ಯಾವುದು ಗೊತ್ತಾ!?

Featured-Article

ನುಗ್ಗೆಸೊಪ್ಪು

ಸಾಮಾನ್ಯವಾಗಿ ನುಗ್ಗೆಕಾಯಿ ಬಗ್ಗೆ ನಮಗೆ ತಿಳಿದಿದೆ ಯಾಕೆಂದರೆ ನುಗ್ಗೆಕಾಯಿಯನ್ನು ಹೆಚ್ಚಾಗಿ ನಾವು ಮಾರ್ಕೆಟ್ನಲ್ಲಿ ತೆಗೆದುಕೊಂಡಿರುತ್ತೇವೆ.ಆದರೆ ನುಗ್ಗೆ ಸೊಪ್ಪಿನ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ.ಆದ್ದರಿಂದ ಇಂದಿನ ನಮ್ಮ ಲೇಖನದಲ್ಲಿ ನುಗ್ಗೆ ಸೊಪ್ಪಿನ ಬಗ್ಗೆ ತಿಳಿಯೋಣ ಬನ್ನಿ..

ನುಗ್ಗೆಸೊಪ್ಪಿನ ಔಷಧೀಯ ಗುಣಗಳು

ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮಿರು ದೌರ್ಬಲ್ಯವನ್ನು ಇದು ಕಡಿಮೆಗೊಳಿಸುತ್ತದೆ.

ನೂರಾರು ವರ್ಷಗಳಿಂದ ನುಗ್ಗೆ ಸೊಪ್ಪನ್ನು ಕಾಮೋತ್ತೇಜಕವಾಗಿ ಬಳಸಲಾಗುತ್ತಿದೆ.

ಈ ಸೊಪ್ಪನ್ನು ಸೇವಿಸಿದಾಗ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುವ ಮೂಲಕ ನಿಮಿರು ದೌರ್ಬಲ್ಯದಂತಹ ತೊಂದರೆಯನ್ನು ಇದು ಕಡಿಮೆ ಮಾಡುತ್ತದೆ.

ನುಗ್ಗೆಸೊಪ್ಪಿನೊಂದಿಗೆ ಹೂವನ್ನು ಕೂಡ ಬಳಸಬಹುದು.ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವನೆ ಮಾಡುವುದರಿಂದ ಲೈಂಗಿಕ ಕ್ರಿಯಾಶಕ್ತಿ ಹೆಚ್ಚಾಗುತ್ತದೆ.

ನುಗ್ಗೆಕಾಯಿಯ ಊಟ ಮಾಡುವುದರಿಂದ ಸಂಧಿವಾತ , ನರಗಳ ದೌರ್ಬಲ್ಯ ಹಾಗೂ ಮಲಬದ್ಧತೆ ಇತ್ಯಾದಿ ರೋಗಗಳು ಕೂಡ ಗುಣವಾಗುತ್ತದೆ.

ಸಕ್ಕರೆ ಕಾಯಿಲೆಯನ್ನು ಹತೋಟಿಗೆ ತರುವ ಶಕ್ತಿ ನುಗ್ಗೆ ಸೊಪ್ಪಿಗಿದೆ.

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆ ತುಂಬಾ ಹೆಚ್ಚಾಗಿದೆ ಮತ್ತು ಹೆಚ್ಚಾಗುತ್ತಿದೆ ಇದಕ್ಕೆ ಪ್ರಮುಖ ಕಾರಣ ಅಧಿಕವಾಗಿ ಸಕ್ಕರೆ ಅಂಶವನ್ನು ಹೊಂದಿರುವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತದೆ.

ನುಗ್ಗೆ ಸೊಪ್ಪು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ನುಗ್ಗೆಯ ಎಲೆಗಳಲ್ಲಿ ರೈಬೋಪ್ಲೇವಿನ್ ಎಂಬ ಅಂಶವಿದ್ದು ,ಇದು ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಇನ್ನು ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಹೊಟ್ಟೆಯಲ್ಲಿ ಜಂತು ಹುಳಗಳು ಕಾ ಇದ್ದರೆ ನಿಯಮಿತವಾಗಿ ನುಗ್ಗೆಕಾಯಿಯನ್ನು ಹಾಗೂ ನುಗ್ಗೆ ಸೊಪ್ಪನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಪೆಟ್ಟು ಬಿದ್ದಿದ್ದರೆ ಮತ್ತು ಅದು ಊದಿಕೊಂಡಿದ್ದರೆ ಹುರಿದ ನುಗ್ಗೆ ಸೊಪ್ಪನ್ನು ಬಟ್ಟೆಯಲ್ಲಿ ಗಂಟು ಕಟ್ಟಿ
ಊದಿಕೊಂಡಿರುವ ಭಾಗಕ್ಕೆ ಬಿಸಿಯಾದ ಶಾಖ ಕೊಟ್ಟರೆ ಊತ ಕಡಿಮೆಯಾಗುತ್ತದೆ ಹಾಗೂ ನೋವು ಕೂಡ ಶಮನಗೊಳ್ಳುತ್ತದೆ.

ನುಗ್ಗೆಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ
ಹಾಗೂ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.

ಜೊತೆಗೆ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

ಇನ್ನೂ ಬೇರೆ ಪದಾರ್ಥಕ್ಕೆ ಇದನ್ನು ಹೋಲಿಕೆ ಮಾಡಿದರೆ ಇದರಲ್ಲಿ

  • ಕಿತ್ತಳೆ ಹಣ್ಣಿಗಿಂತ 7ಪಟ್ಟು ಹೆಚ್ಚು ವಿಟಮಿನ್ ಸಿ .
  • ಹಾಲಿಗಿಂತ 4ಪಟ್ಟು ಹೆಚ್ಚು ಕ್ಯಾಲ್ಸಿಯಂ .
  • ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಶಿಯಂ .
  • ಕ್ಯಾರೆಟ್ ಗಿಂತ 4ಪಟ್ಟು ಹೆಚ್ಚು ವಿಟಮಿನ್ ಎ.
  • ಪಾಲಕ್ ಗಿಂತ 3ಪಟ್ಟು ಹೆಚ್ಚು ವಿಟಮಿನ್ ಇ.
  • ಬಾದಾಮಿ ಗಿಂತ 3ಪಟ್ಟು ಹೆಚ್ಚು ವಿಟಮಿನ್ ಇ .
  • ಮೊಟ್ಟೆಯ ಬಿಳಿಯ ಭಾಗ ಕ್ಕಿಂತ 2 ಪಟ್ಟು ಹೆಚ್ಚು ಪ್ರೋಟಿನ್.

ಧನ್ಯವಾದಗಳು.

Leave a Reply

Your email address will not be published.