Latest Breaking News

ನುಗ್ಗೆ ಕಾಯಿ ತಿಂದರೆ ಏನಾಗುತ್ತದೆ ಗೊತ್ತಾ!ಇದು ನಿಜವಾಗಿಯೂ ಕಾ ಮವನ್ನ ಉತ್ತೇಜಸಲಿದೇಯಾ?

0 1

Get real time updates directly on you device, subscribe now.

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ.ಆರೋಗ್ಯ ಕಾಪಾಡಿಕೊಳ್ಳಲು ನಾವು ತಿನ್ನುವಂತಹ ಆಹಾರವು ಆರೋಗ್ಯಕಾರಿಯಾಗಿರಬೇಕು ಇಷ್ಟು ಮಾತ್ರವಲ್ಲದೆ ಸಮತೋಲನ ಆಹಾರ ಸೇವನೆಯಿಂದ ದೇಹದ ಆರೋಗ್ಯವನ್ನು ಕಾಪಾಡಬಹುದು ಅದರಲ್ಲೂ ನಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಪಾಲು ತರಕಾರಿ ಇದ್ದರೆ ಆಗ ಅದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ಇಂತಹ ಒಂದು ಔಷಧೀಯ ಗುಣ ಇರುವ ತರಕಾರಿ ಎಂದರೆ ಅದೇ ನುಗ್ಗೇಕಾಯಿ.ನುಗ್ಗೇಕಾಯಿ ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಇದೆ.ಕೇವಲ ನುಗ್ಗೆಕಾಯಿ ಮಾತ್ರವಲ್ಲ ಅದರ ಸೊಪ್ಪು, ಹೂವು ಹಾಗೂ ತೊಗಟೆ ನಮಗೆ ಹಲವಾರು ರೀತಿಯಿಂದ ಆರೋಗ್ಯದಲ್ಲಿ ನೆರವಾಗುತ್ತದೆ.ನುಗ್ಗೇ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಾಕಾಂಶವಿದೆ.

ಇದನ್ನು ರಕ್ತಹೀನತೆಯ ಸಮಸ್ಯೆಯಿಂದ ಬಳಲುವವರು ಇದರ ಸೊಪ್ಪನ್ನು ತಿಂದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ನುಗ್ಗೆ ಕಾಯಿ ಹೂವನ್ನು ಪಲ್ಯ ಮಾಡುತ್ತಾರೆ ಇದರ ಹೂವು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ನುಗ್ಗೆಕಾಯಿಯನ್ನು ವಾರದಲ್ಲಿ ಕನಿಷ್ಠ ಒಂದು ದಿನವಾದರೂ ತಿಂದರೆ ನಿಮ್ಮ ದೇಹಕ್ಕೆ ಸಾಕಷ್ಟು ಲಾಭಗಳೇ ದೊರೆಯುತ್ತದೆ.

ಇನ್ನು ನುಗ್ಗೆಕಾಯಿಯನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ..

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ.ನುಗ್ಗೆಕಾಯಿಯು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.ನುಗ್ಗೆಕಾಯಿ ತಿಂದರೆ ಅದರಿಂದ ಮೂತ್ರಕೋಶವು ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.ಮೂಳೆಗಳನ್ನು ಬಲಪಡಿಸುತ್ತದೆ.ನುಗ್ಗೆಕಾಯಿಯಲ್ಲಿ ಉನ್ನತ ಮಟ್ಟದ ಕ್ಯಾಲ್ಷಿಯಂ ಕಬ್ಬಿಣಾಂಶ ಮತ್ತು ಇತರ ಕೆಲವೊಂದು ವಿಟಮಿನ್ಗಳು ಇರುವ ಕಾರಣದಿಂದದಾಗಿ ಇದು ಮೂಳೆಗಳನ್ನು ಬಲಪಡಿಸುತ್ತದೆ.ಮತ್ತು ದಿನನಿತ್ಯವೂ ನುಗ್ಗೆಕಾಯಿ ತಿಂದರೆ ಅದರಿಂದ ಮೂಳೆಯ ಸಾಂದ್ರತೆಯೂ ಹೆಚ್ಚಾಗುತ್ತದೆ ಮತ್ತು ಮೂಳೆಯು ಆರೋಗ್ಯದಿಂದಿರುತ್ತದೆ.

ಶೀತ ಮತ್ತು ಜ್ವರದ ವಿರುದ್ಧ ಹೋರಾಡುತ್ತದೆ.ವಿಟಮಿನ್ ಸಿ ಅಧಿಕವಾಗಿರುವಂತಹ ನುಗ್ಗೆ ಕಾಯಿಯು ಕೆಲವೊಂದು ಸಾಮಾನ್ಯ ಸಮಸ್ಯೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಅದರಲ್ಲೂ ಇದರ ಸೇವನೆಯಿಂದ ಮುಖ್ಯವಾಗಿ ಕಾಡುವಂತಹ ಶೀತ , ಜ್ವರ ಹಾಗೂ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

ಗರ್ಭಧಾರಣೆಯ ಸಮಸ್ಯೆಯ ಅಪಾಯವನ್ನು ತಗ್ಗಿಸುತ್ತದೆ.ಗರ್ಭಿಣಿ ಮಹಿಳೆಯರು ತಮ್ಮ ಆಹಾರಕ್ರಮದಲ್ಲಿ ನುಗ್ಗೆಕಾಯಿಯನ್ನು ಸೇರಿಸಿಕೊಂಡರೆ ಅದರಿಂದ ಹೆರಿಗೆಯು ತುಂಬಾ ಸುಲಭವಾಗಿ ಆಗುತ್ತದೆ ಮತ್ತು ಹೆರಿಗೆ ಬಳಿಕದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಇದರಲ್ಲಿ ಉನ್ನತ ಮಟ್ಟದ ವಿಟಮಿನ್ಗಳು ಮತ್ತು ಖನಿಜಾಂಶಗಳು ಇವೆ ಮತ್ತು ಇದು ಗರ್ಭಕೋಶವು ಜೋತು ಬೀಳುವುದನ್ನು ತಡೆಯುತ್ತದೆ.ಮತ್ತು ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.ರಕ್ತವನ್ನು ಶುದ್ಧೀಕರಿಸುತ್ತದೆ. ನುಗ್ಗೇ ಕಾಯಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಇದು ಪ್ರಬಲ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.ನುಗ್ಗೆ ಕಾಯಿ ತಿಂದರೆ ಇದು ಮೊಡವೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡುತ್ತದೆ.

ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತದೆ.ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವಂತಹ ನುಗ್ಗೆ ಕಾಯಿ ಎಲೆಗಳು ಮತ್ತು ಹೂವುಗಳು ಗಂಟಲು ಹಾಗೂ ಚರ್ಮದ ಸೋಂಕು ತಡೆಯಲು ತುಂಬಾ ಪರಿಣಾಮಕಾರಿ.
ಇದರಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಸಿ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ
ಮತ್ತು ದೇಹದಲ್ಲಿ ಇರುವಂತಹ ಹಾನಿಕಾರಕ ಪ್ರೀ ರಾಡಿಕಲ್ ಗಳನ್ನು ದೂರ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ನುಗ್ಗೆಕಾಯಿ ಎಲೆಗಳಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ ಮತ್ತು ಇದು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಈ ವಿಟಮಿನ್ಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯ ವೇಳೆ ಕಾರ್ಬೊಹೈಡ್ರೇಟ್ , ಪ್ರೊಟೀನ್ ಮತ್ತು ಕೊಬ್ಬನ್ನು ವಿಂಗಡಿಸುತ್ತದೆ.

ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿರುವವರು ನುಗ್ಗೆಕಾಯಿ ಮತ್ತು ಇದರ ಸೊಪ್ಪನ್ನು ಸೇವಿಸುವುದು ತುಂಬಾನೇ ಒಳ್ಳೆಯದು.ಕೂದಲು ಮತ್ತು ಚರ್ಮದ ಆರೈಕೆಗೆ ಉತ್ತಮ.ನುಗ್ಗೇಕಾಯಿಯು ವಿಟಮಿನ್ ಎ ಬಿ ಮತ್ತು ಫಾಲಿಕ್ ಆಮ್ಲದಿಂದ ಸಮೃದ್ಧವಾಗಿದೆ ಮತ್ತು ಇದರಿಂದಾಗಿ ಸುಂದರ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುತ್ತದೆ.ಅದೇ ರೀತಿಯಲ್ಲಿ ಕೂದಲು ಕೂಡ ರೇಷ್ಮೆಯಂತೆ ಹೊಳೆಯುತ್ತದೆ.

ಧನ್ಯವಾದಗಳು.

Get real time updates directly on you device, subscribe now.

Leave a comment