ಒಣ ಕೆಮ್ಮು , ಕಫ , ಕೆಮ್ಮು ಎಲ್ಲದಕ್ಕೂ ಇದೊಂದು ಚಮಚ ಸಾಕು!
ಕೆಲವರಿಗೆ ಅತಿಯಾದ ಒಣ ಕೆಮ್ಮು ಇರುತ್ತದೆ ಹಾಗೂ ಹೀಗೆ ಕೆಮ್ಮುವಾಗ ಹಳದಿ ಕಫ ಬರುತ್ತದೆ
ಅಥವಾ ಕೆಮ್ಮುವಾಗ ಕಫ ಪಿತ್ತ ಬರುತ್ತದೆ ಅಥವಾ ಒಣ ಕೆಮ್ಮಿನ ಕಫದ ಸಮಸ್ಯೆ
ಮತ್ತು ನಿಶ್ಯಕ್ತಿಯಿಂದ ಇರುವುದು ,ಎದೆಯಲ್ಲಿ ಉರಿ ,ಗಂಟಲು ಉರಿ ,ಕೆಲವರಿಗೆ ಅತಿಯಾಗಿ ಕೆಮ್ಮು , ವಾಂತಿ ಬಂದಂತಾಗುವುದು, ಕಣ್ಣು ಉರಿ ,ಮೈಯೆಲ್ಲ ಉರಿ , ಉಷ್ಣತೆ ಇವೆಲ್ಲ ಒಣ ಕೆಮ್ಮಿನ ಲಕ್ಷಣಗಳಾಗಿವೆ.ಇನ್ನೂ ಇಂತಹ ಒಣ ಕೆಮ್ಮಿನ ನಿವಾರಣೆಗೆ ಒಂದು ಲೇಹ್ಯವನ್ನು ತಯಾರಿಸಿಕೊಳ್ಳುವ ವಿಧಾನವನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಲೇಹ್ಯದ ಹೆಸರು ಪಿತ್ತಜಕಾಸ
ಬೇಕಾಗುವ ಪದಾರ್ಥಗಳು :ಖರ್ಜೂರ( ಮೃದುವಾದ ಕಪ್ಪು ಖರ್ಜೂರ )ಅಂದರೆ ಮೃದುವಾದ ಕಪ್ಪು ಖರ್ಜೂರದ ಒಳಗೆ ಇರುವ ಬೀಜವನ್ನು ತೆಗೆದು ಮೇಲಿನ ಕಪ್ಪು ಪದರವನ್ನು ತೆಗೆದು ಒಳಗಿರುವ ಕಪ್ಪು ಖರ್ಜೂರವನ್ನು 5 ಗ್ರಾಂ ತೆಗೆದು ಬಳಸಿಕೊಳ್ಳಬೇಕು ;ಒಣ ದ್ರಾಕ್ಷಿ 5 ಗ್ರಾಂ ;ಆರ್ಗ್ಯಾನಿಕ್ ಬೆಲ್ಲ 5 ಗ್ರಾಂ ;ಹಿಪ್ಪಲಿ ಪೌಡರ್ 5 ಗ್ರಾಂ ;ಒದ್ದಲೂ 5 ಗ್ರಾಂ ;ತುಪ್ಪ 10 ಗ್ರಾಂ ;ಜೇನುತುಪ್ಪ 5 ಗ್ರಾಂ :
ಮಾಡುವ ವಿಧಾನ :ಮೊದಲಿಗೆ ಖರ್ಜೂರ , ಒಣದ್ರಾಕ್ಷಿ ಆರ್ಗ್ಯಾನಿಕ್ ಬೆಲ್ಲ ಈ ಮೂರನ್ನೂ ಮಿಕ್ಸ್ ಮಾಡಿ
ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಬೇಕು ನಂತರ ಒದ್ದಲು ಮತ್ತು ಹಿಪ್ಪಲಿಯನ್ನು ಮಿಕ್ಸ್ ಮಾಡಿಕೊಳ್ಳಬೇಕು
ನಂತರ ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ಕೊಂಡು ಪೇಸ್ಟ್ ತಯಾರಿಸಿಕೊಳ್ಳಬೇಕು.ಈ ಪೇಸ್ಟಿಗೆ 5 ಗ್ರಾಂ ಜೇನುತುಪ್ಪ ಮತ್ತು 10 ಗ್ರಾಂ ತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ1 ಗಾಳಿ ಆಡದಂತಹ ಡಬ್ಬಿಯೊಳಗೆ ಹಾಕಿ ಮುಚ್ಚಿಡಬೇಕು.ಈ ಲೇಹ್ಯವನ್ನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಊಟಕ್ಕೆ 30 ರಿಂದ 45 ನಿಮಿಷಕ್ಕೆ ಮುನ್ನ ಅರ್ಧ ಸ್ಪೂನ್ ಈ ಲೇಹ್ಯವನ್ನು ತಿಂದು ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು.
ಇದರಿಂದ ಒಣ ಕೆಮ್ಮು ನಿವಾರಣೆಯಾಗಿ ,ದೇಹಕ್ಕೆ ಶಕ್ತಿ ದೊರೆಯುತ್ತದೆ , ಧ್ವನಿ ಸರಿಯಾಗುತ್ತದೆ , ಗಂಟಲು , ಎದೆ ಉರಿ ನಿಲ್ಲುತ್ತದೆ ,ಹಳದಿ ಕಫ ನಿಲ್ಲುತ್ತದೆ ಮತ್ತು ಇನ್ನೂ ಹಲವಾರು ಶ್ವಾಸಕೋಶದ ತೊಂದರೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ.ಇದನ್ನು ಪ್ರತಿಯೊಬ್ಬರೂ ಅಂದರೆ ಎಲ್ಲಾ ವಯಸ್ಕರರೂ ಸೇವಿಸಬಹುದು.
ವಿಶೇಷ ಸೂಚನೆ *ಈ ಲೇಹ್ಯವನ್ನು ಸೇವಸಿದ ನಂತರ ಹಾಲನ್ನು ಕುಡಿಯಬಾರದು.
ಧನ್ಯವಾದಗಳು.