ಇಲ್ಲಿ ಸದಾ ಮೊಳಗೋದು ಜೈ ಶ್ರೀರಾಮ್ ಮಾತ್ರ”- ಪಠಾಣ್ ಸಕ್ಸಸ್ ಗೆ ನಟಿ ಕಂಗನಾ ಖಡಕ್ ತಿರುಗೇಟು

0
38

ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಇದ್ದ ಕಡೆ ವಿ ವಾ ದ ವೊಂದು ಇದ್ದೇ ಇರುತ್ತದೆ ಎನ್ನುವಷ್ಟು ಮಟ್ಟಕ್ಕೆ ನಟಿ ಸುದ್ದಿ ಮಾಡಿದ್ದಾರೆ. ಕಂಗನಾ(Kangana) ಅಡುವ ಮಾತು, ನೀಡುವ ಹೇಳಿಕೆ ಎಲ್ಲವೂ ಸಹಾ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕುತ್ತದೆ. ಈ ಹಿಂದೆ ನಟಿ ಟ್ವಿಟರ್ ನಲ್ಲಿ ತಮ್ಮ ಸಿಟ್ಟು, ಅಸಮಾಧಾನ ಮತ್ತು ಹತಾಶೆಯನ್ನು ಹೊರ ಹಾಕುತ್ತಿದ್ದರು. ಅದೇ ಕಾರಣಕ್ಕೆ ನಟಿಯ ಟ್ವಿಟರ್ ಖಾತೆಯನ್ನು ಟ್ವಿಟರ್ ನಿಂದ ರದ್ದು ಮಾಡಲಾಗಿತ್ತು. ಇದರಿಂದಾಗಿ ನಟಿ ತಮ್ಮ ಮಾತು, ಹತಾಶೆ ಎಲ್ಲವನ್ನೂ ಸಹಾ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಳ್ಳುತ್ತಿದ್ದರು.

ಈಗ ಬಹು ದಿನಗಳ ನಂತರ ನಟಿ ಕಂಗನಾ ಅವರಿಗೆ ಮತ್ತೆ ಟ್ವಿಟರ್ ಖಾತೆ ಮರಳಿ ದಕ್ಕಿದ್ದು, ನಟಿ ಟ್ವಿಟರ್ ನಲ್ಲಿ(Kangana Back to Twitter) ಮತ್ತೆ ಸಕ್ರಿಯರಾಗಿದ್ದಾರೆ. ಅಲ್ಲದೇ ಟ್ವಿಟರ್ ಗೆ ರೀ ಎಂಟ್ರಿ ಕೊಟ್ಟ ಕೂಡಲೇ ನಟಿ ತಮ್ಮ ಮಾತಿನ ವರಸೆ ಆರಂಭಿಸಿದ್ದು, ನಟಿಯ ಟ್ವೀಟ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟಿ ಇದೀಗ ತಮ್ಮ ಟ್ವಿಟರ್ ಖಾತೆಯ ಮೂಲಕ ಶಾರೂಖ್ ಖಾನ್ (Shah Rukh Khan) ಅಭಿನಯದ ಪಠಾಣ್(Pathan movie ) ಸಿನಿಮಾದ ಬಗ್ಗೆ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿದ್ದಾರೆ.

ನಟಿ ಕಂಗನಾ ಭರ್ಜರಿ ಗೆಲುವನ್ನು ಸಾಧಿಸಿರುವ ಪಠಾಣ್ ಸಿನಿಮಾದ ಬಗ್ಗೆ ಮಾಡಿದ ಟ್ವೀಟ್ ನಲ್ಲಿ, ಪಠಾಣ್ ದ್ವೇ ಷ ದ ಮೇಲೆ ಪ್ರೀತಿ ಸಾಧಿಸಿರುವ ಗೆಲುವೆಂದು ಎಲ್ಲರೂ ಹೇಳುತ್ತಿದ್ದು, ನಾನು ಅದನ್ನು ಒಪ್ಪುತ್ತೇನೆ. ಆದರೆ ಯಾರ ದ್ವೇ ಷ ದ ಮೇಲೆ ಯಾರ ಪ್ರೀತಿ? ಯಾರು ಟಿಕೆಟ್ ಗಳನ್ನು ಖರೀದಿಸಿ ಸಿನಿಮಾ ನೋಡಿದ್ದಾರೆ? ಭಾರತದ ಪ್ರೀತಿ ಈ ಸಿನಿಮಾವನ್ನು ಗೆಲ್ಲಿಸಿದ್ದು ಅದರಲ್ಲಿ 80% ಹಿಂದೂ ಗಳೇ ಇದ್ದಾರೆ ಎಂದು ಒಂದು ಟ್ವೀಟ್ ನಲ್ಲಿ ನಟಿ ಹೇಳಿದ್ದಾರೆ. ಕಂಗನಾ ಮಾಡಿರುವ ಟ್ವೀಟ್ ಗಳು ವೈರಲ್ ಆಗಿವೆ.

ಮತ್ತೊಂದು ಟ್ವೀಟ್ ನಲ್ಲಿ, ಶ ತೃ ರಾಷ್ಟ ಪಾಕಿಸ್ತಾನವನ್ನು ಮತ್ತು ಐಎಸ್ಐ ಅನ್ನು ಒಳ್ಳೆಯವರು ಎಂದು ತೋರಿಸಿರುವ ಸಿನಿಮಾ ಯಶಸ್ಸನ್ನು ಕಂಡಿದೆ. ದ್ವೇ ಷ ವನ್ನು ಮೀರಿದ ಭಾರತದ ಈ ಮನೋಭಾವವೇ ಅದನ್ನು ಮಹಾನ್ ಮಾಡಿದೆ. ದ್ವೇ ಷ ಮತ್ತು ಶ ತೃ ಗಳ ಕ್ಷುಲ್ಲಕ ರಾಜಕೀಯವನ್ನು ಗೆದ್ದಿದ್ದು ಭಾರತದ ಪ್ರೀತಿ. ಯಾರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಿರೋ ಅವರು ಗಮನಿಸಿ, ಪಠಾಣ್ ಒಂದು ಸಿನಿಮಾ ಆಗಲು ಮಾತ್ರ ಸಾಧ್ಯ. ಭಾರತದಲ್ಲಿ ಸದಾ ಮೊಳಗುವುದು ಜೈ ಶ್ರೀರಾಮ್ ಮಾತ್ರ ಎಂದಿದ್ದಾರೆ ಕಂಗನಾ.

LEAVE A REPLY

Please enter your comment!
Please enter your name here