Padmaja Rao: ಭಾಗ್ಯಲಕ್ಷ್ಮಿ ಧಾರಾವಾಹಿಯ ಖಡಕ್ ಅತ್ತೆ ಕುಸುಮ ಅವರ ರಿಯಲ್ ಲೈಫ್ ಗಂಡ ಯಾರು ಗೊತ್ತಾ?

0 1

Padmaja Rao: ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರಾವಾಹಿಯ ಬಿಗ್ ಹೈಲೈಟ್ ಕುಸುಮ ಪಾತ್ರ ಎಂದರೆ ತಪ್ಪಲ್ಲ. ಸೊಸೆಯನ್ನು ಮಗಳ ಹಾಗೆ ನೋಡಿಕೊಳ್ಳುತ್ತಾ, ಮಗ ಮೊಮ್ಮಕ್ಕಳು ಸೊಸೆಗೆ ಅವಮಾನ ಮಾಡುತ್ತಿರುವಾಗ, ಅವರೆಲ್ಲರ ಎದುರು ಸೊಸೆಗೆ ಸಪೋರ್ಟ್ ಮಾಡಿ ಸೊಸೆಯನ್ನು ಶಾಲೆಗೆ ಕಳಿಸುತ್ತಿರುವ ಪಾತ್ರ ಕುಸುಮ. ಇದು ಎಲ್ಲರೂ ಮೆಚ್ಚುತ್ತಿರುವ ಅತ್ತೆಯ ಪಾತ್ರ ಆಗಿದೆ.

ಈ ಪಾತ್ರದಲ್ಲಿ ಪದ್ಮಜಾ ರಾವ್ ಅವರ ಅಭಿನಯ ಅದ್ಭುತವಾಗಿದೆ ಎಂದು ಎಲ್ಲಾ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇದ್ರೆ ಇಂಥ ಅತ್ತೆ ಇರಬೇಕು ಎನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ರೀಚ್ ಆಗಿದೆ ಪದ್ಮಜಾ ಅವರ ಪಾತ್ರ. ಪದ್ಮಜಾ ಅವರು ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಈ ಎರಡಕ್ಕೂ ಹೊಸಬರಲ್ಲ. ಇವರಿಗೆ ಚಿಕ್ಕವರಾಗಿದ್ದಾಗಿನಿಂದಲು ನಟನೆಯಲ್ಲಿ ಆಸಕ್ತಿ ಇತ್ತು. ಆದರೆ ಆಗ ಒಳ್ಳೆಯ ಅವಕಾಶ ಇರಲಿಲ್ಲ..

ಇವರ ತಂದೆ ಮನೆಯಲ್ಲಿ ಪ್ರೋತ್ಸಾಹ ಸಿಗಲಿಲ್ಲ, ಮನೆಗೆ ಇವರೇ ದೊಡ್ಡ ಮಗಳಾಗಿದ್ದ ಕಾರಣ ಬೇಗ ಮದುವೆ ಮಾಡಿ ಕಳಿಸಿಬಿಟ್ಟಿದ್ದರು. ಗಂಡನ ಮನೆಯಲ್ಲಿ ಕೂಡ ಉತ್ತಮ ಪ್ರೋತ್ಸಾಹ ಸಿಗಲಿಲ್ಲ. ಕೆಲ ವರ್ಷಗಳ ನಂತರ ಗಂಡನಿಂದ ವಿಚ್ಛೇದನ ಪಡೆದ ಬಳಿಕ ಅವರ ಮಗನಿಗೆ 2 ವರ್ಷ. ಆ ವೇಳೆ ಪದ್ಮಜಾ ಅವರಿಗೆ 30 ವರ್ಷ, ಆಗ ಹೀರೋಯಿನ್ ಆಗುವ ಅವಕಾಶ ಅವರಿಗೆ ಸಿಗಲಿಲ್ಲ. ಆ ವೇಳೆ ಕಿರುತೆರೆ ಮತ್ತು ನಿರ್ದೇಶಕ ಮತ್ತು ನಿರ್ಮಾಪಕರಿಗೆ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು..

ಬಳಿಕ ವೈಶಾಲಿ ಕಾಸರವಳ್ಳಿ ಅವರ ಮೂಡಲ ಮನೆ ಧಾರವಾಹಿಯಲ್ಲಿ ನಟಿಸಿದರು. ಈ ಧಾರವಾಹಿ ಮತ್ತು ಸಿನಿಮಾಗಲ್ಲಿ ಹೆಚ್ಚು ಅವಕಾಶಗಳು ಬರುವುದಕ್ಕೆ ಶುರುವಾದವು. ನಂತರ ಇವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ಜೊತೆಗೆ ಮದುವೆಯಾದರು. ಇವರ ಮಗನ ಹೆಸರು ಸಂಜೀವ್. ಇವರು ಕೂಡ ಬಹಳ ಫೇಮಸ್ ಆಗಿದ್ದಾರೆ.

ಸಂಜೀವ್ ಅವರು ಪ್ರಾಣಿ ಪ್ರೇಮಿ, ತಮ್ಮದೇ ಒಂದು ಪ್ರಾಣಿ ಅಭಯ ಸಂಸ್ಥೆ ಮಾಡಿಕೊಂಡು, 50ಕ್ಕಿಂತ ಹೆಚ್ಚು ಪ್ರಾಣಿಗಳನ್ನು ಉಳಿಸಿ, ಕಾಪಾಡುತ್ತಿದ್ದಾರೆ. ಪದ್ಮಜಾ ರಾವ್ ಅವರಿಗೂ ಕೂಡ ಮಗನ ಮೇಲೆ ಬಹಳ ಪ್ರೀತಿ ಇದೆ. ಇವರ ಮಗ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ.

Leave A Reply

Your email address will not be published.