ಪಪ್ಪಾಯಿ ಯಾರೂ ಸೇವಿಸಬಾರದು ಗೊತ್ತಾ?ಪಪ್ಪಾಯಿ ಸೇವಿಸುವ ಪ್ರತಿಯೊಬ್ಬರೂ ಓದಲೇ ಬೇಕಾದ ಲೇಖನ!
ಪಪ್ಪಾಯಿ
ಸಾಮಾನ್ಯವಾಗಿ ಹೆಚ್ಚಿನವರು ಸೇವಿಸುವ ಹಣ್ಣು.ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪಪ್ಪಾಯಿ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದರೂ ಕೂಡ ಕೆಲವು ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿಯನ್ನು ಸೇವಿಸಬಾರದು.ಹಾಗಾದ್ರೆ ಯಾರು ಪಪ್ಪಾಯಿ ಹಣ್ಣನ್ನು ಸೇವಿಸಬಾರದು ಎಂದು ತಿಳಿಯೋಣ ಬನ್ನಿ.
ಮಧುಮೇಹ ಇರುವವರು
ಮಧುಮೇಹಿಗಳಿಗೆ ಪಪ್ಪಾಯಿ ಉತ್ತಮವಾಗಿದ್ದರೂ ಕೂಡ ಮಧುಮೇಹಿಗಳು ಇದನ್ನು ಸೇವಿಸುವಾಗ ಎಚ್ಚರವಾಗಿರಬೇಕು.ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.ಮಧುಮೇಹ ಸಮಸ್ಯೆಯಿಂದ ಬಳಲುವ ಹಲವರು ಔಷಧಿಯ ಸೇವನೆ ಯನ್ನು ಮಾಡುತ್ತಾರೆ.ಅಂಥವರು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದಲ್ಲ.ಕಾರಣ ಇದು ಔಷಧಿಯ ಪರಿಣಾಮಕಾರಿತತ್ವವನ್ನು ಕಡಿಮೆ ಮಾಡುತ್ತದೆ ಜೊತೆಗೆ ಪಪ್ಪಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಕಡಿಮೆ ಮಾಡುವುದರಿಂದ ಸಕ್ಕರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುವವರು ಇದರ ಅತಿಯಾದ ಸೇವನೆ ಮಾಡದಿದ್ದರೆ ಒಳ್ಳೆಯದು.ಹೈಪೋ ಥೈರಾಯ್ಡಿಸಮ್ ಇರುವವರಿಗೆ ಒಳ್ಳೆಯದಲ್ಲ.
ಹೈಪೋ ಥೈರಾಯ್ಡಿಸಮ್ ನಿಂದ ಬಳಲುತ್ತಿರುವ ಜನರು ಪಪ್ಪಾಯಿಯನ್ನು ಸೇವಿಸಲೇಬಾರದು
ಏಕೆಂದರೆ ಪಪ್ಪಾಯಿಯನ್ನು ಅಧಿಕವಾಗಿ ಸೇವಿಸುವುದರಿಂದ ಇವರ ಪರಿಸ್ಥಿತಿ ಇನ್ನೂ ಹದಗೆಡುತ್ತದೆ.
ಪಪ್ಪಾಯಿ ಅಲರ್ಜಿ ಇರುವವರು ಸೇವಿಸಬಾರದು
ಪಪ್ಪಾಯಿಯ ಅಲರ್ಜಿ ಇದ್ದರೆ ಪಪ್ಪಾಯಿ ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು.
ಈ ಸಮಸ್ಯೆಗಳಲ್ಲಿ ಪಪ್ಪಾಯಿ ತಿನ್ನುವುದು ನಿಮ್ಮ ದೇಹದ ಮೇಲೆ ದದ್ದುಗಳನ್ನು ಉಂಟು ಮಾಡುತ್ತದೆ.
ತುರಿಕೆ , ಹೊಟ್ಟೆ ನೋವಿನ ಸಮಸ್ಯೆಯು ಕೆಲವರಲ್ಲಿ ಕಂಡುಬರುತ್ತದೆ.
ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.
ಶಸ್ತ್ರಚಿಕಿತ್ಸೆ
ಹಣ್ಣಾದ ಪಪ್ಪಾಯಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಪಪ್ಪಾಯಿ ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಎಂದು
ನಂಬಲಾಗಿದೆ.
ಈ ಕಾರಣದಿಂದಾಗಿ ನೀವು ಚೇತರಿಸಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ
ಆದ್ದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಪಪ್ಪಾಯಿಯನ್ನು ಸೇವಿಸಬೇಡಿ.
ಗರ್ಭಿಣಿಯರು ಸೇವಿಸಬಾರದು ಗರ್ಭಾವಸ್ಥೆಯಲ್ಲಿ ಪಪ್ಪಾಯಿ ಅಧಿಕ ಪ್ರಮಾಣದಲ್ಲಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆಯುರ್ವೇದದ ಪ್ರಕಾರ ನೀವು ಗರ್ಭಿಣಿಯಾಗಿದ್ದಾಗ ಪಪ್ಪಾಯಿ ತೆಗೆದುಕೊಳ್ಳಬಾರದು.ಪಪ್ಪಾಯಿ ಹಣ್ಣಿನಲ್ಲಿ ಸಂಸ್ಕರಿಸಿದ ಪಪೈನ್ ಇರುತ್ತದೆ. ಇದು
ಮಗುವಿನ ಆರೋಗ್ಯಕ್ಕೆ ದುಷ್ಪರಿಣಾಮವನ್ನು ಬೀರಬಹುದು ಅಥವಾ ಇದು ಜನ್ಮ ದೋಷಕ್ಕೆ ಕಾರಣವಾಗಬಹುದು.
ಈ ಮೇಲೆ ತಿಳಿಸಿರುವ ಎಲ್ಲ ಸಮಸ್ಯೆ ಇರುವವರಿಗೆ ಪಪ್ಪಾಯಿ ಒಳ್ಳೆಯದಲ್ಲ.
ಇನ್ನು ಉಳಿದಂತೆ ಪಪ್ಪಾಯಿ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ
ಇದರ ಸೇವನೆಯಿಂದ ಹಲವಾರು ಲಾಭಗಳು ನಮಗೆ ದೊರೆಯುತ್ತದೆ.
ಧನ್ಯವಾದಗಳು.