Parineeti Chopra: ಮದುವೆಗೆ ಬಂದವರಿಗೆ ಇಂಥ ಉಡುಗೊರೆ ಕೊಡೋದಾ? ಟ್ರೋಲ್ ಅದ ಬಾಲಿವುಡ್ ಸ್ಟಾರ್ ನಟಿ

Written by Pooja Siddaraj

Published on:

ಸೆಲೆಬ್ರಿಟಿ ಮದುವೆಗಳು ಎಂದರೆ ಹೆಚ್ಚಾಗಿ ಸುದ್ದಿಯಾಗುತ್ತದೆ. ಐಷಾರಾಮಿ ಉಡುಗೆ ತೊಡುಗೆ, ದುಬಾರಿ ಖರ್ಚು, ಗ್ರ್ಯಾಂಡ್ ವೆನ್ಯೂ ಇದೆಲ್ಲವೂ ನೋಡುಗರ ಕಣ್ಣು ಸೆಳೆಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮದುವೆಗಳ ಫೋಟೋ ಕೂಡ ವೈರಲ್ ಆಗುತ್ತದೆ. ಇದೀಗ ಬಾಲಿವುಡ್ ನಲ್ಲಿ ಹೊಸದಾಗಿ ಹಸೆಮಣೆ ಏರಿರುವ ಜೋಡಿ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡ. ಈ ಜೋಡಿಯ ಮದುವೆ ಫೋಟೋಸ್ ಈಗ ವೈರಲ್ ಆಗುತ್ತಿದೆ.

ಬಾಲಿವುಡ್ ಸೆಲೆಬ್ರಿಟಿಗಳ ಮದುವೆ ಹೆಚ್ಚಿನ ಅಭಿಮಾನಿಗಳ ಗಮನ ಸೆಳೆಯುತ್ತದೆ. ಅದೇ ರೀತಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡ ಅವರ ಮದುವೆ ಫೋಟೋಸ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ನಟಿ ಪರಿಣಿತಿ ಚೋಪ್ರಾ ಹಲವು ವರ್ಷಗಳಿಂದ ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿ, ಇನ್ನು ರಾಹುಲ್ ಚಡ್ಡ ಅವರು AAP ಪಕ್ಷದ ಸಂಸದ ಆಗಿದ್ದು, ಇವರಿಬ್ಬರು ಪ್ರೀತಿಸಿ, ಇತ್ತೀಚೆಗೆ ಮದುವೆಯಾಗಿದ್ದಾರೆ..

ಈ ಜೋಡಿಯ ಮದುವೆ ಕಳೆದ ವಾರ ಸೆಪ್ಟೆಂಬರ್ 24ರಂದು ಅದ್ಧೂರಿಯಾಗಿ ನಡೆದಿದೆ. ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿಯ ಮದುವೆ ಕುಟುಂಬದವರು, ಆತ್ಮೀಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದಿದೆ. ಇವರಿಬ್ಬರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಜೊತೆಗೆ ಈಗ ಈ ಜೋಡಿಯ ಮದುವೆಯ ಬಗ್ಗೆ ಒಂದು ಆಸಕ್ತಿಕರ ವಿಚಾರ ಬೆಳಕಿಗೆ ಬಂದಿದ್ದು, ಅದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಪ್ರಸ್ತುತ ವೈರಲ್ ಆಗಿರುವುದು ಪರಿಣಿತಿ ಚೋಪ್ರಾ ಮತ್ತು ರಾಹುಲ್ ಚಡ್ಡ ದಂಪತಿ ತಮ್ಮ ಮದುವೆಗೆ ಬಂದಿರುವ ಅತಿಥಿಗಳಿಗೆ ಕೊಟ್ಟಿರುವ ಗಿಫ್ಟ್. ಇವರ ಮದುವೆಯಲ್ಲಿ ಭಾಗವಹಿಸಿದ್ದ ಟೆನ್ನಿಸ್ ಸ್ಟಾರ್ ಸಾನಿಯಾ ಮಿರ್ಜಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಕೆಲವು ಫೋಟೋಸ್ ಶೇರ್ ಮಾಡಿದ್ದು, ಅದರಲ್ಲಿರುವ ಒಂದು ಫೋಟೋ ಇಂದ ಪರಿಣಿತಿ ಚೋಪ್ರಾ ಅವರ ಮದುವೆಯ ಗಿಫ್ಟ್ ವಿಚಾರ ವೈರಲ್ ಆಗಿದೆ.

ಸಾನಿಯಾ ಮಿರ್ಜಾ ಅವರು ಶೇರ್ ಮಾಡಿರುವ ಫೋಟೋದಲ್ಲಿ, ಒಂದು ಪೇಪರ್ ಗ್ಲಾಸ್ ನ ಒಳಗೆ ಹೂವುಗಳನ್ನು ನೋಡಬಹುದು, ಅದರ ಜೊತೆಗೆ ಒಂದು ಹ್ಯಾಂಡ್ ಫ್ಯಾನ್ ಕೂಡ ಇದ್ದು, ಅವುಗಳ ಜೊತೆಗೆ ಇರುವ ಟ್ಯಾಗ್ ನಲ್ಲಿ ‘ನಮ್ಮ ಮದುವೆಗೆ ಬಂದು ನಿಮ್ಮ ಕಣ್ಣಲ್ಲಿ ನೀರು ಬಂದಿದ್ದರೆ, ಈ ಹ್ಯಾಂಡ್ ಕರ್ಚಿಫ್ ಇಂದ ಕಣ್ಣು ಒರೆಸಿಕೊಳ್ಳಿ..’ ಎಂದು ಬರೆಯಲಾಗಿದೆ. ಈ ಸಾಲುಗಳನ್ನು ನೋಡಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡ ಅವರ ಮದುವೆಯ ಗಿಫ್ಟ್ ಎನ್ನಲಾಗುತ್ತಿದೆ.

ಈ ಫೋಟೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ಕೊಡುತ್ತಿದ್ದು, ಹಣ ಇದೆ ಅಂತ ಹೀಗೂ ಮಾಡ್ತಾರಾ, ಇದೆಲ್ಲ ತುಂಬಾ ಓವರ್ ಆಯ್ತು ಎಂದು ಪರಿಣಿತಿ ಚೋಪ್ರಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹೊಸ ಜೋಡಿ ತಮ್ಮ ಮದುವೆಗೆ ಬಂದವರಿಗೆ ಕೊಟ್ಟ ಗಿಫ್ಟ್ ಇಂದ ಟ್ರೋಲ್ ಆಗುತ್ತಿದ್ದಾರೆ.

Leave a Comment