Pathaan Movie :ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ನಾಯಕನಾಗಿ ಅಭಿನಯಿಸಿರುವ ʼಪಠಾಣ್ʼ (Pathan) ಸಿನಿಮಾ ಇಂದು ಬಿಡುಗಡೆ ಆಗಿದ್ದು, ಅಭಿಮಾನಿಗಳು ಸಿನಿಮಾವನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನ ಸಾಕಷ್ಟು ಚರ್ಚೆ, ವಿ ವಾ ದಗಳಿಗೆ ಈ ಸಿನಿಮಾ ಕಾರಣವಾಗಿತ್ತು. ಅದರಲ್ಲೂ ಸಿನಿಮಾದ ಬೇಷರಂ ರಂಗ್(Besharam Rang song) ಹಾಡಿನ ಬಿಡುಗಡೆ ನಂತರ ಎದ್ದ ವಿ ವಾ ದದ ಕಿಚ್ಚು ಇಡೀ ದೇಶದಲ್ಲಿ ಹಬ್ಬಿತ್ತು. ಪಠಾಣ್(Pathan Movie) ಸಿನಿಮಾದ ಬೇಷರಂ ರಂಗ್ ಹಾಡು ಸಿನಿಮಾದ ಪ್ರಚಾರಕ್ಕೆ ಒಂದರ್ಥದಲ್ಲಿ ಪಾಸಿಟಿವ್ ಆಗಿಯೂ ಮತ್ತು ನೆಗೆಟಿವ್ ಆಗಿಯೂ ಸಹಾ ಪರಿಣಾಮವನ್ನು ಬೀರಿದೆ ಎನ್ನುವುದು ಸತ್ಯವಾದ ವಿಚಾರವೇ ಆಗಿದೆ.

ಪಠಾಣ್ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್(Pathan Advance Booking) ವಿಚಾರದಲ್ಲೊಂದು ಹೊಸ ದಾಖಲೆ ಮಾಡಿ ಬಾಲಿವುಡ್ ಗೆ(Bollywood) ಮರು ಜೀವವನ್ನು ನೀಡಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್(boycott Pathan) ಮಾಡಬೇಕು ಎನ್ನುವ ಕೂಗು ಒಂದು ಕಡೆ ಇದ್ದರೂ ಕೂಡಾ ಮತ್ತೊಂದು ಕಡೆ ನಾಲ್ಕು ವರ್ಷಗಳ ನಂತರ ತಮ್ಮ ಅಭಿಮಾನ ನಟನನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ. ಈಗ ಬಹು ದಿನಗಳ ನಂತರ ನಟಿ ದೀಪಿಕಾ ಪಡುಕೋಣೆ(Deepika Padukone) ತಾವು ನಾಯಕಿಯಾಗಿ ಕಾಣಿಸಿಕೊಂಡಿರುವ ಪಠಾಣ್ ಸಿನಿಮಾದ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನಟಿಯನ್ನು ಪಠಾಣ್ ಸಿನಿಮಾದ ಜೂಮ್ ಜಾ ಪಠಾಣ್(Jhoom Ja Pathan) ಮತ್ತು ಬೇಷರಂ ರಂಗ್(Besharam Rang Song) ಈ ಎರಡು ಹಾಡುಗಳಲ್ಲಿ ನಿಮಗೆ ಯಾವುದು ಇಷ್ಟ ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆ ಇದಕ್ಕೆ ಉತ್ತರ ನೀಡಿದ ನಟಿ ದೀಪಿಕಾ ಪಡುಕೋಣೆ ಎರಡು ಹಾಡುಗಳು ಸಹಾ ಬಹಳ ವಿಭಿನ್ನವಾಗಿ ಮೂಡಿ ಬಂದಿದೆ. ಆದರೆ ಈ ಎರಡರಲ್ಲಿ ನನಗೆ ಬೇಷರಂ ರಂಗ್ ಹಾಡು ಬಹಳ ಇಷ್ಟವಾಗಿದೆ ಎನ್ನುವ ಉತ್ತರವನ್ನು ನೀಡಿದ್ದಾರೆ. ಆ ಹಾಡಿನ ಶೂಟಿಂಗ್ ವೇಳೆ ಸಖತ್ ಎಂಜಾಯ್ ಮಾಡಿ ಸ್ಟೆಪ್ ಹಾಕಿದ್ದೆವು. ಹಾಡು ಹಿಟ್ ಆಗಿರುವುದು ಖುಷಿಯಾಗಿದೆ ಎಂದಿದ್ದಾರೆ.