Latest Breaking News

ಅಡ್ವಾನ್ಸ್ ಬುಕ್ಕಿಂಗ್ ನಲ್ಲೇ ಪಠಾಣ್ ಹೊಸ ದಾಖಲೆ: ಕೆಜಿಎಫ್-2 ದಾಖಲೆ ಮುರಿಯುತ್ತಾ ಶಾರೂಖ್ ಫಠಾಣ್ ?

0 208

Get real time updates directly on you device, subscribe now.

Pathan’s new record in advance booking: Shah Rukh Pathan breaking the record of KGF-2? ಬರೋಬ್ಬರಿ ನಾಲ್ಕು ವರ್ಷಗಳ ನಂತರ ಬಾಲಿವುಡ್ ನ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ (Shah Rukh Khan) ಬೆಳ್ಳಿ ತೆರೆಯ ಮೇಲೆ ರಂಜಿಸಲು, ಅಭಿಮಾನಿಗಳನ್ನು ಖುಷಿ ಪಡಿಸಲು ಸಜ್ಜಾಗಿದ್ದು, ಅವರ ಹೊಸ ಸಿನಿಮಾ ಪಠಾಣ್ ಬಿಡುಗಡೆಗೆ ಸಜ್ಜಾಗಿದೆ. ಕಿಂಗ್ ಖಾನ್ ನಟನೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಪಠಾಣ್ ಸಿನಿಮಾ ಇನ್ನೆರಡು ದಿನಗಳಲ್ಲಿ ಅಂದರೆ ಜನವರಿ 25 ರಂದು ತೆರೆಗೆ ಬರುತ್ತಿದ್ದು, ಸಿನಿಮಾ ಟಿಕೆಟ್ ಗಳ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದ್ದು, ಅಭಿಮಾನಿಗಳು ಮುಗಿ ಬಿದ್ದು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ.

ಪಠಾಣ್’ ಸಿನಿಮಾ ಬಿಡುಗಡೆಗೆ ಮೊದಲೇ ಸಾಕಷ್ಟು ಸುದ್ದಿ ಮಾಡಿದೆ. ಸಿನಿಮಾ ಒಂದಷ್ಟು ವಿ ವಾ ದಗಳಿಂದ ಸಹಾ ಸದ್ದು ಮಾಡಿದೆ. ಪಠಾಣ್ ಎಲ್ಲೆಡೆ ಹೈಪ್ ಕ್ರಿಯೇಟ್ ಮಾಡಿದ್ದು, ಟಿಕೆಟ್ ಗಳ ಅಡ್ವಾನ್ಸ್ ಬುಕ್ಕಿಂಗ್ (Advance Booking) ನಿಂದಲೇ ಸಿನಿಮಾ ಬರೋಬ್ಬರಿ 30 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ಈ ಹಿಂದೆ ರಣಬೀರ್ ಮತ್ತು ಆಲಿಯಾ ಜೋಡಿಯ ‘ಬ್ರಹ್ಮಾಸ್ತ್ರ ಸಿನಿಮಾ ಮಾಡಿದ್ದ ದಾಖಲೆಯನ್ನು ಪಠಾಣ್’ ಅಳಿಸಿ ಹಾಕಿದೆ.
ಕೊರೊನಾ ನಂತರದ ದಿನಗಳಲ್ಲಿ ಬಾಲಿವುಡ್ ನಲ್ಲಿ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಬ್ರಹ್ಮಾಸ್ತ್ರ ದಾಖಲೆ ಬರೆದಿತ್ತು.

ಆದರೆ ಈಗ ಬ್ರಹ್ಮಾಸ್ತ್ರ(Brahmastra) ಸಿನಿಮಾವನ್ನು ಹಿಂದಿಕ್ಕಿದ ಪಠಾಣ್, ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್ಸ್‌ನಿಂದ 30 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ಕೆಜಿಎಫ್-2 ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ 42 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈಗ ಪಠಾಣ್ ಆ ದಾಖಲೆಯನ್ನು ಮುರಿಯಲಿದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ವರದಿಯೊಂದರ ಪ್ರಕಾರ, ಈಗಾಗಲೇ ಪಠಾಣ್ ಸಿನಿಮಾದ 2.5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದೆ ಎನ್ನಲಾಗಿದೆ.

Get real time updates directly on you device, subscribe now.

Leave a comment