Pavi Poovappa: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿರುವ ಪವಿ ಪೂವಪ್ಪ ನಿಜಕ್ಕೂ ಯಾರು ಗೊತ್ತಾ?

Written by Pooja Siddaraj

Published on:

Pavi Poovappa: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 7 ವಾರ ಕಳೆದಿದೆ, ನಿನ್ನೆಯಷ್ಟೇ 50 ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದ ಸ್ಪೆಷಲ್ ಎಪಿಸೋಡ್ ನಡೆದಿದೆ. ಜೊತೆಗೆ ಕಳೆದ ವಾರ ಕ್ವಿಜ್ ಗೆದ್ದ ಬಾಯ್ಸ್ ಗೆ ಕಿಚ್ಚನ ಕಡೆಯಿಂದ ಸ್ಪೆಷಲ್ ಗಿಫ್ಟ್ ಕೂಡ ಸಿಕ್ಕಿದೆ. ಮತ್ತೊಂದು ಸ್ಪೆಷಲ್ ಎನ್ನುವ ಹಾಗೆ ನಿನ್ನೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ.

ಹೌದು, ಬಿಗ್ ಬಾಸ್ ಮನೆ ಎಂದರೆ ದಿನಕ್ಕೆ ಹೊಸ ಸರ್ಪ್ರೈಸ್ ಗಳು ಇದ್ದೆ ಇರುತ್ತದೆ. ಟಾಸ್ಕ್ ವಿಚಾರ ಆಗಲಿ, ರೂಲ್ಸ್ ವಿಚಾರ ಆಗಲಿ ಬಿಗ್ ಬಾಸ್ ಕಡೆಯಿಂದ ಮನೆಯ ಸ್ಪರ್ಧಿಗಳಿಗೆ ಸರ್ಪ್ರೈಸ್ ಗಳು, ಶಾಕ್ ಗಳು ಸಿಗುತ್ತಲೇ ಇರುತ್ತದೆ. ಅದೇ ರೀತಿ ಈಗ ಬಿಗ್ ಬಾಸ್ ಅರ್ಧ ಜರ್ನಿ ಮುಗಿದಿರುವ ವೇಳೆ ಸ್ಪರ್ಧಿಗಳಿಗೆ ಸರ್ಪ್ರೈಸ್ ಮತ್ತು ಶಾಕ್ ಎರಡು ಸಿಕ್ಕಿದೆ ಎಂದರೆ ತಪ್ಪಲ್ಲ.

ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ದಾರೆ. ಪ್ರೋಮೋದಲ್ಲಿ ಅವರ ಮುಖವನ್ನು ಇನ್ನು ತೋರಿಸಿಲ್ಲ, ಇಂದಿನ ಎಪಿಸೋಡ್ ನಲ್ಲಿ ಹೊಸ ಸ್ಪರ್ಧಿಗಳು ಯಾರು ಎನ್ನುವುದು ರಿವೀಲ್ ಆಗಲಿದೆ.. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಹೊಸ ಸ್ಪರ್ಧಿಗಳು ಯಾರು ಎನ್ನುವುದು ರಿವೀಲ್ ಆಗಿದೆ.

ಹೌದು, ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ಸ್ಪರ್ಧಿಗಳು ಯಾರು ಎನ್ನುವ ವಿಷಯ ರಿವೀಲ್ ಆಗಿದ್ದು, ಒಬ್ಬರು ಮಾಡೆಲ್ ಪವಿ ಪೂವಯ್ಯ, ಇವರು ಮೂಲತಃ ಮಡಿಕೇರಿಯ ಹುಡುಗಿ ಆಗಿದ್ದು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿದ್ದಾರೆ, ಇವರು ಮಾಡೆಲ್ ಆಗಿ ಬಣ್ಣದ ಜಗತ್ತಿನಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ಇವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.

ಪವಿ ಪೂವಪ್ಪ ಅವರು ಕಳೆದ 10 ವರ್ಷಗಳಿಂದ ಮಾಡೆಲಿಂಗ್ ವೃತ್ತಿಯಲ್ಲಿದ್ದು, ಬಹಳಷ್ಟು ಬ್ರ್ಯಾಂಡ್ ಗಳಿಗೆ ಮಾಡೆಲ್ ಆಗಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಪವಿ ಪೂವಪ್ಪ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 1 ಲಕ್ಷ ಫಾಲೋವರ್ಸ್ ಇದ್ದಾರೆ. ಇದೀಗ ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಯಾವ ರೀತಿ ಸದ್ದು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

Leave a Comment