Darshan: ನಟ ದರ್ಶನ್ ಆವರ ಗುಣ ವ್ಯಕ್ತಿತ್ವ ಹೇಗೆ ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೂ ಕೆಲವೊಮ್ಮೆ ಕೆಲವು ವಿಚಾರಗಳಿಂದ ಡಿಬಾಸ್ ಸುದ್ದಿಯಾಗುತ್ತಾರೆ. ಇದೀಗ ಮತ್ತೊಂದು ವಿಚಾರಕ್ಕೆ ದರ್ಶನ್ ಅವರು ಸುದ್ದಿಯಾಗಿದ್ದು, ಡಿಬಾಸ್ ಅವರ ವಿರುದ್ಧ ಮಹಿಳೆ ಒಬ್ಬರು ದೂರು ದಾಖಲಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ಆಗಿರೋದೇನು ಗೊತ್ತಾ?
ಈ ಮಹಿಳೆಯ ಹೆಸರು ಅಮಿತಾ ಜಿಂದಾಲ್, ಈಕೆ ರಾಜ ರಾಜೇಶ್ವರಿ ನಗರ ಪೊಲೀಸ್ ಸ್ಟೇಶನ್ ನಲ್ಲಿ ನಟ ದರ್ಶನ್ ಹಾಗೂ ಅವರ ಮನೆಯ ನಾಯಿಗಳನ್ನು ನೋಡಿಕೊಳ್ಳುವ ವ್ಯಕ್ತಿಗಳ ಮೇಲೆ ದೂರು ನೀಡಿದ್ದಾರೆ. ಈ ಮಹಿಳೆಗೆ ದರ್ಶನ್ ಅವರ ಮನೆಯ ನಾಯಿಗಳು ಕಚ್ಚಿವೆ, ಹಲ್ಲೆ ಮಾಡಿವೆ ಎಂದು ಪೊಲೀಸರ ಬಳಿ ಇರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ವಿಶ್ವ ಪಾರ್ಶ್ವವಾಯು ದಿವಸದ ದಿನ ಈ ಮಹಿಳೆ, ಸ್ಪರ್ಶ್ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಅಟೆಂಡ್ ಮಾಡುವುದಕ್ಕೆ ಹೋಗಿದ್ದರು, ಆ ವೇಳೆ ದರ್ಶನ್ ಅವರ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ತಮ್ಮ ಕಾರ್ ನಿಲ್ಲಿಸಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಹೋಗಲು ಕಾರ್ ನಿಲ್ಲಿಸಿದ್ದ ಜಾಗಕ್ಕೆ ಬಂದಾಗ, ಅಲ್ಲಿ ದರ್ಶನ್ ಅವರ 3 ನಾಯಿಗಳಿದ್ದವಂತೆ, 2 ನಾಯಿಗಳನ್ನು ಕಟ್ಟಿ ಹಾಕಲಾಗಿದ್ದು, ಒಂದು ನಾಯಿಯನ್ನು ಹಾಗೆ ಬಿಟ್ಟಿದ್ದರಂತೆ.
ಅವುಗಳನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿ ಇದ್ದರಂತೆ. ಅವರ ಬಳಿ ಹೋದ ಮಹಿಳೆ, ನಾಯಿಗಳನ್ನು ಆ ಕಡೆ ಕರೆದುಕೊಂಡು ಹೋಗಿ, ನಾನು ಕಾರ್ ತೆಗೆಯಬೇಕು ಎಂದು ಹೇಳಿದರಂತೆ. ಆದರೆ ಅಲ್ಲಿದ್ದ ವ್ಯಕ್ತಿ ಮಹಿಳೆಯ ಜೊತೆಗೆ ಮಾತಿಗೆ ಮಾತು ಬೆಳೆಸಿದ್ದಾನೆ. ಇವರಿಬ್ಬರ ಜಗಳ ನೋಡಿ, ಮತ್ತೊಬ್ಬ ವ್ಯಕ್ತಿ ಕೂಡ ಬಂದಿದ್ದು, ಇಬ್ಬರು ಕೂಡ ಮಹಿಳೆಯ ಜೊತೆಗೆ ವಾದ ಮಾಡಿದ್ದಾರೆ. ಇದರ ನಡುವೆ ಆಕೆಯ ಮೇಲೆ ಒಂದು ನಾಯಿ ಅಟ್ಯಾಕ್ ಮಾಡಿದೆ.
ನಂತರ ಕಟ್ಟಿ ಹಾಕಿದ ಮತ್ತೊಂದು ನಾಯಿಯು ಸೇರಿ, ಎರಡು ನಾಯಿಗಳು ಅಟ್ಯಾಕ್ ಮಾಡಿದ್ದು, ಆಕೆಯ ಹೊಟ್ಟೆಯ ಭಾಗಕ್ಕೆ ಕಚ್ಚಿವೆ ಮತ್ತು ಬಟ್ಟೆ ಹರಿದು ಹಾಕಿವೆ. ನಾಯಿಗಳು ಕಚ್ಚುತ್ತದೆ ಎಂದು ಗೊತ್ತಿದ್ದರೂ ಕೂಡ ಅವುಗಳು ಅಟ್ಯಾಕ್ ಮಾಡಿತ್ತಿದ್ದರು ಹಾಗೆಯೇ ಬಿಟ್ಟಿದ್ದಕ್ಕೆ, ಮಹಿಳೆಯ ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ದೂರು ದಾಖಲು ಮಾಡಿದ್ದಾರೆ.
ಹಾಗೆಯೇ ಮನೆಯ ಮಾಲೀಕರಾಗಿರುವ ದರ್ಶನ್ ಅವರ ಮೇಲು ದೂರು ದಾಖಲು ಮಾಡಿದ್ದಾರೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದರ್ಶನ್ ಅವರ ವಿರುದ್ಧ ದೂರು ದಾಖಲು ಮಾಡಿದ್ದು, ಸೆಕ್ಷನ್ 289ಎ ಅಡಿಯಲ್ಲಿ ದರ್ಶನ್ ಅವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ ಎಂದು ಮಾಹಿತಿ ಸಿಕ್ಕಿದೆ.