Pooja Gandhi: ನಾಳೆ ಹಸೆಮಣೆ ಏರಲು ಸಜ್ಜಾದ ಪೂಜಾ ಗಾಂಧಿ! ಹುಡುಗ ಯಾರು ಗೊತ್ತಾ?

0 2

Pooja Gandhi: 2006 ರ ಕೊನೆಯಲ್ಲಿ ತೆರೆಕಂಡ ಮುಂಗಾರು ಮಳೆ ಸಿನಿಮಾ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿತ್ತು. 50 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸೌತ್ ಸಿನಿಮಾ ಆಗಿತ್ತು. ಮುಂಗಾರು ಮಳೆ ಸಿನಿಮಾ ಮೂಲಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರ ಅದೃಷ್ಟ ಬದಲಾಗಿತ್ತು. ಹಾಗೂ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕಿಯ ಎಂಟ್ರಿ ಸಹ ಆಗಿತ್ತು. ನಟಿ ಪೂಜಾ ಗಾಂಧಿ ಉತ್ತರ ಭಾರತದಿಂದ ಸ್ಯಾಂಡಲ್ ವುಡ್ ಗೆ ಬಂದಿದ್ದರು.

ಮುಂಗಾರು ಮಳೆ ಸಿನಿಮಾದ ಯಶಸ್ಸಿನಿಂದ ಪೂಜಾ ಗಾಂಧಿ ಅವರಿಗೆ ಗಾಂಧಿನಗರದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು. ಅನಿಸುತಿದೆ ಹಾಡಿನ ಮೂಲಕ ಎಲ್ಲಾ ಹುಡುಗರ ಫೇವರೆಟ್ ಆಗಿದ್ದರು ನಟಿ ಪೂಜಾ ಗಾಂಧಿ. ಕೆಲ ವರ್ಷಗಳ ಕಾಲ ಸ್ಯಾಂಡಲ್ ವುಡ್ ನ ಟಾಪ್ ನಟಿಯಾಗಿದ್ದ ಪೂಜಾ ಗಾಂಧಿ ಅಪ್ಪು, ಸುದೀಪ್, ರವಿಚಂದ್ರನ್ ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದರು. ಆದರೆ ವರ್ಷಗಳು ಕಳೆಯುತ್ತಾ ಇವರ ಬೇಡಿಕೆ ಕಡಿಮೆಯಾಗಿ, ಸಿನಿಮಗಳ್ಚ್ ಸಹ ಕಡಿಮೆ ಆದವು.

ಕೆಲ ಸಮಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಪೂಜಾ 2018 ರಲ್ಲಿ ದಂಡುಪಾಳ್ಯ 2 ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಬಳಿಕ ಪೂಜಾ ಗಾಂಧಿ ಅವರು ಬೇರೆ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಇತ್ತೀಚೆಗೆ ಪೂಜಾ ಗಾಂಧಿ ಅವರು ಕನ್ನಡ ಕಲಿತು ಸುದ್ದಿಯಾಗಿದ್ದರು, ಉತ್ತರ ಭಾರತದವರಾದ ಪೂಜಾ ಗಾಂಧಿ ಕನ್ನಡ ಓದುವುದು ಬರೆಯುವುದನ್ನು ಕಲಿತು ಕನ್ನಡಿಗರ ಎದುರು ಜನಪ್ರಿಯತೆ ಪಡೆದುಕೊಂಡಿದ್ದರು.

ಇದೀಗ ಪೂಜಾ ಗಾಂಧಿ ಅವರು ಮದುವೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ನಾಳೆ ಪೂಜಾ ಗಾಂಧಿ ಅವರ ಮದುವೆ ಯಲಹಂಕದಲ್ಲಿ ನಡೆಯಲಿದೆ. ವಿಜಯ್ ಲಾಜಿಸ್ಟಿಕ್ಸ್ ಮಾಲೀಕರಾದ ವಿಜಯ್ ಅವರೊಡನೆ ಮದುವೆ ಆಗಲಿದ್ದಾರೆ. ಇವರಿಬ್ಬರಿಗೂ ಕೆಲ ವರ್ಷಗಳ ಪರಿಚಯವಿದ್ದು, ಪ್ರೀತಿಸುತ್ತಿದ್ದಾರೆ. ಪೂಜಾ ಗಾಂಧಿ ಅವರಿಗೆ ಕನ್ನಡ ಕಲಿಸಿದ್ದು ಕೂಡ ಇವರೇ ಅಂತೆ. ಇದೀಗ ಪೂಜಾ ಗಾಂಧಿ ಅವರು ಮದುವೆ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಈ ಸಂತೋಷದ ಸುದ್ದಿಯನ್ನು ಖುದ್ದು ಪೂಜಾ ಗಾಂಧಿ ಅವರೇ ಹೇಳಿಕೊಂಡಿದ್ದಾರೆ. ನಾಳೆ ನವೆಂಬರ್ 29ರಂದು ಇವರ ಮದುವೆ ನಡೆಯಲಿದೆ. ಮದುವೆ ನಂತರ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.