Pooja Gandhi: ಕುವೆಂಪು ಅವರ ಮಂತ್ರಾಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ನಟಿ ಪೂಜಾ ಗಾಂಧಿ!

Written by Pooja Siddaraj

Published on:

Pooja Gandhi: 2006 ರ ಕೊನೆಯಲ್ಲಿ ತೆರೆಕಂಡ ಮುಂಗಾರು ಮಳೆ ಸಿನಿಮಾ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿತ್ತು. 50 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸೌತ್ ಸಿನಿಮಾ ಆಗಿತ್ತು. ಮುಂಗಾರು ಮಳೆ ಸಿನಿಮಾ ಮೂಲಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರ ಅದೃಷ್ಟ ಬದಲಾಗಿತ್ತು. ಹಾಗೂ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕಿಯ ಎಂಟ್ರಿ ಸಹ ಆಗಿತ್ತು. ನಟಿ ಪೂಜಾ ಗಾಂಧಿ ಉತ್ತರ ಭಾರತದಿಂದ ಸ್ಯಾಂಡಲ್ ವುಡ್ ಗೆ ಬಂದಿದ್ದರು.

ಮುಂಗಾರು ಮಳೆ ಸಿನಿಮಾದ ಯಶಸ್ಸಿನಿಂದ ಪೂಜಾ ಗಾಂಧಿ ಅವರಿಗೆ ಗಾಂಧಿನಗರದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು. ಅನಿಸುತಿದೆ ಹಾಡಿನ ಮೂಲಕ ಎಲ್ಲಾ ಹುಡುಗರ ಫೇವರೆಟ್ ಆಗಿದ್ದರು ನಟಿ ಪೂಜಾ ಗಾಂಧಿ. ಕೆಲ ವರ್ಷಗಳ ಕಾಲ ಸ್ಯಾಂಡಲ್ ವುಡ್ ನ ಟಾಪ್ ನಟಿಯಾಗಿದ್ದ ಪೂಜಾ ಗಾಂಧಿ ಅಪ್ಪು, ಸುದೀಪ್, ರವಿಚಂದ್ರನ್ ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದರು. ಆದರೆ ವರ್ಷಗಳು ಕಳೆಯುತ್ತಾ ಇವರ ಬೇಡಿಕೆ ಕಡಿಮೆಯಾಗಿ, ಸಿನಿಮಗಳ್ಚ್ ಸಹ ಕಡಿಮೆ ಆದವು.

ಕೆಲ ಸಮಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಪೂಜಾ 2018 ರಲ್ಲಿ ದಂಡುಪಾಳ್ಯ 2 ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಬಳಿಕ ಪೂಜಾ ಗಾಂಧಿ ಅವರು ಬೇರೆ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಇತ್ತೀಚೆಗೆ ಪೂಜಾ ಗಾಂಧಿ ಅವರು ಕನ್ನಡ ಕಲಿತು ಸುದ್ದಿಯಾಗಿದ್ದರು, ಉತ್ತರ ಭಾರತದವರಾದ ಪೂಜಾ ಗಾಂಧಿ ಕನ್ನಡ ಓದುವುದು ಬರೆಯುವುದನ್ನು ಕಲಿತು ಕನ್ನಡಿಗರ ಎದುರು ಜನಪ್ರಿಯತೆ ಪಡೆದುಕೊಂಡಿದ್ದರು.

ಒಂದೆರಡು ದಿನಗಳಿಂದ ಇವರ ಮದುವೆ ಬಗ್ಗೆ ಸುದ್ದಿಗಳು ಕೇಳಿಬಂದಿದ್ದವು. ಅದೇ ರೀತಿ ನಿನ್ನೆ ಇವರ ಮದುವೆ ನಡೆದಿದೆ, ಇದುವರೆಗೂ ಕನ್ನಡದ ಯಾವುದೇ ಕಲಾವಿದರು ಮದುವೆ ಮಾಡಿಕೊಳ್ಳದ ರೀತಿಯಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಪೂಜಾ ಗಾಂಧಿ ಅವರ ಮದುವೆ ನಡೆದಿದೆ. ಸರಳವಾಗಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ ನಟಿ ಪೂಜಾ ಗಾಂಧಿ.

ಇವರ ಮದುವೆಗೆ ಸ್ಯಾಂಡಲ್ ವುಡ್ ತಾರೆಯರು ಆಗಮಿಸಿ ಶುಭ ಕೋರಿದ್ದಾರೆ. ನಟಿ ಸುಧಾರಾಣಿ, ಶುಭಾ ಪೂಂಜಾ, ಸಂಜನಾ ಗಲ್ರಾನಿ ಸೇರಿದಂತೆ ಸಾಕಷ್ಟು ಕಲಾವಿದರು ಬಂದು ಪೂಜಾ ಗಾಂಧಿ ಅವರಿಗೆ ಶುಭಕೋರಿದ್ದಾರೆ.

Leave a Comment