Pooja Gandhi: 16 ವರ್ಷಗಳ ನಂತರ ಮುಂಗಾರು ಮನೆಯಲ್ಲಿ ಕಾಣಿಸಿಕೊಂಡ ಪೂಜಾ ಗಾಂಧಿ! ನೆಟ್ಟಿಗರಿಂದ ಮೆಚ್ಚುಗೆ!

0 1

Pooja Gandhi: 2006 ರ ಕೊನೆಯಲ್ಲಿ ತೆರೆಕಂಡ ಮುಂಗಾರು ಮಳೆ ಸಿನಿಮಾ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿತ್ತು. 50 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸೌತ್ ಸಿನಿಮಾ ಆಗಿತ್ತು. ಮುಂಗಾರು ಮಳೆ ಸಿನಿಮಾ ಮೂಲಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರ ಅದೃಷ್ಟ ಬದಲಾಗಿತ್ತು. ಹಾಗೂ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕಿಯ ಎಂಟ್ರಿ ಸಹ ಆಗಿತ್ತು. ನಟಿ ಪೂಜಾ ಗಾಂಧಿ ಉತ್ತರ ಭಾರತದಿಂದ ಸ್ಯಾಂಡಲ್ ವುಡ್ ಗೆ ಬಂದಿದ್ದರು.

ಮುಂಗಾರು ಮಳೆ ಸಿನಿಮಾದ ಯಶಸ್ಸಿನಿಂದ ಪೂಜಾ ಗಾಂಧಿ ಅವರಿಗೆ ಗಾಂಧಿನಗರದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು. ಅನಿಸುತಿದೆ ಹಾಡಿನ ಮೂಲಕ ಎಲ್ಲಾ ಹುಡುಗರ ಫೇವರೆಟ್ ಆಗಿದ್ದರು ನಟಿ ಪೂಜಾ ಗಾಂಧಿ. ಕೆಲ ವರ್ಷಗಳ ಕಾಲ ಸ್ಯಾಂಡಲ್ ವುಡ್ ನ ಟಾಪ್ ನಟಿಯಾಗಿದ್ದ ಪೂಜಾ ಗಾಂಧಿ ಅಪ್ಪು, ಸುದೀಪ್, ರವಿಚಂದ್ರನ್ ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದರು. ಆದರೆ ವರ್ಷಗಳು ಕಳೆಯುತ್ತಾ ಇವರ ಬೇಡಿಕೆ ಕಡಿಮೆಯಾಗಿ, ಸಿನಿಮಗಳ್ಚ್ ಸಹ ಕಡಿಮೆ ಆದವು.

ಕೆಲ ಸಮಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಪೂಜಾ 2018 ರಲ್ಲಿ ದಂಡುಪಾಳ್ಯ 2 ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಬಳಿಕ ಪೂಜಾ ಗಾಂಧಿ ಅವರು ಬೇರೆ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಇತ್ತೀಚೆಗೆ ಪೂಜಾ ಗಾಂಧಿ ಅವರು ಕನ್ನಡ ಕಲಿತು ಸುದ್ದಿಯಾಗಿದ್ದರು, ಉತ್ತರ ಭಾರತದವರಾದ ಪೂಜಾ ಗಾಂಧಿ ಕನ್ನಡ ಓದುವುದು ಬರೆಯುವುದನ್ನು ಕಲಿತು ಕನ್ನಡಿಗರ ಎದುರು ಜನಪ್ರಿಯತೆ ಪಡೆದುಕೊಂಡಿದ್ದರು.

ಇತ್ತೀಚೆಗೆ ನವೆಂಬರ್ 30ರಂದು ಪೂಜಾ ಗಾಂಧಿ ಅವರು ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ವಿಜಯ್ ಘೋರ್ಪಡೆ ಅವರೊಡನೆ ಮದುವೆಯಾಗಿದ್ದಾರೆ. ಈ ಪದ್ಧತಿಯಲ್ಲಿ ಮದುವೆಯಾದ ಮೊದಲ ಸೆಲೆಬ್ರಿಟಿ ಜೋಡಿ ಆಗಿದ್ದಾರೆ ಪೂಜಾ. ಮದುವೆ ನಂತರ ಕುವೆಂಪು ಅವರ ಕವಿಶೈಲಕ್ಕೆ ಪತಿಯ ಜೊತೆಗೆ ಭೇಟಿ ನೀಡಿದ್ದರು. ಅದಾದ ಬಳಿಕ ಮತ್ತೊಂದು ಸ್ಪೆಷಲ್ ಜಾಗಕ್ಕೆ ಭೇಟಿ ನೀಡಿದ್ದಾರೆ.

16 ವರ್ಷಗಳ ಹಿಂದೆ ಮುಂಗಾರು ಮಳೆ ಸಿನಿಮಾ ಚಿತ್ರೀಕರಣವಾದ ಅದೇ ಮನೆಗೆ ಭೇಟಿ ನೀಡಿದ್ದಾರೆ ಪೂಜಾ ಗಾಂಧಿ. ಆ ಮನೆಯಲ್ಲೆಲ್ಲಾ ಓಡಾಡಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಪೂಜಾ ಗಾಂಧಿ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

Leave A Reply

Your email address will not be published.