Poonam Pandey: ನಟಿ ಪೂನಂ ಪಾಂಡೆ ಸತ್ತಿಲ್ಲ! ವಿಡಿಯೋ ಮೂಲಕ ಬದುಕಿದ್ದೇನೆ ಎಂದು ತಿಳಿಸಿದ ನಟಿ

0 28

Poonam Pandey: ನಟಿ ಪೂನಂ ಪಾಂಡೆ ಇನ್ನಿಲ್ಲ ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. cervical cancer ಗೆ ನಟಿ ಪೂನಂ ಪಾಂಡೆ ಬಲಿಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಯಿತು. ಈ ವಿಚಾರವನ್ನು ತಿಳಿಸಿದ್ದು ಮತ್ಯಾರು ಅಲ್ಲ, ಪೂನಂ ಪಾಂಡೆ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಿಂದ ಅವರ ಅಧಿಕೃತ ಟೀಮ್ ಇಂದಲೇ ಪೂನಂ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ ಎನ್ನುವ ಪೋಸ್ಟ್ ಬಂದಿತ್ತು.

ಪೂನಂ ಪಾಂಡೆ ಇನ್ನಿಲ್ಲ ಎನ್ನುವ ವಿಚಾರ ಯಾರಿಂದಲೂ ಊಹಿಸಿಕೊಳ್ಳಲು ಅಥವಾ ಅರಗಿಸಿಕೊಳ್ಳಲು ಸಹ ಯಾರಿಂದಲು ಸಾಧ್ಯ ಆಗಲಿಲ್ಲ. ಈ ವಿಚಾರ ಹೊರಬರುತ್ತಿದ್ದ ಹಾಗೆ ಪೂನಂ ಪಾಂಡೆ ಅವರಿಗೆ ಶ್ರದ್ಧಾಂಜಲಿ ಕೋರಿ ಅನೇಕ ಸೆಲೆಬ್ರಿಟಿಗಳು ಪೋಸ್ಟ್ ಮಾಡಿದರು, ಸ್ಟೋರಿ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಆದರೆ ಅಸಲಿ ಟ್ವಿಸ್ಟ್ ಬೇರೆಯೇ ಇದ್ದು, ಅದು ನಿನ್ನೆ ಹೊರಬಂದಿದೆ.

ಆ ವಿಚಾರ ಏನು ಎಂದರೆ, ಪೂನಂ ಪಾಂಡೆ ಅವರು ನಿಜಕ್ಕೂ ಸತ್ತಿಲ್ಲ, ನಿನ್ನೆ ಫೆಬ್ರವರಿ 3ರಂದು ಪೂನಂ ಪಾಂಡೆ ಅವರು ವಿಧಿವಶವಾಗಿಲ್ಲ ಎಂದು ಖುದ್ದು ಪೂನಂ ಪಾಂಡೆ ಅವರೇ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಫೆಬ್ರವರಿ 4 ಅಂದರೆ ಇಂದು ಕ್ಯಾನ್ಸರ್ ದಿನ ಹಾಗಾಗಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಪೂನಂ ಪಾಂಡೆ ಅವರು ಈ ರೀತಿ ಪ್ರಚಾರ ಮಾಡಿದ್ದಾರೆ.

ಆದರೆ ನೆಟ್ಟಿಗರು ಇದೆಲ್ಲಾ ಚೀಪ್ ಪಬ್ಲಿಸಿಟಿ ಗಿಮಿಕ್ಸ್ ಎಂದು ನೆಟ್ಟಿಗರು ಪೂನಂ ಪಾಂಡೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಸೆಲೆಬ್ರಿಟಿಗಳು ಕೂಡ ಪೂನಂ ಪಾಂಡೆ ಅವರು ನಿಜಕ್ಕೂ ನಿಧನರಾಗಿದ್ದಾರೆ ಎಂದು ಸ್ಟೋರಿ ಪೋಸ್ಟ್ ಮಾಡಿದ್ದವರೆಲ್ಲರು ಸಹ ಸ್ಟೋರಿ ಡಿಲೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲರು ಶಾಕ್ ಆಗಿದ್ದಂತೂ ನಿಜ.

Leave A Reply

Your email address will not be published.