Prabhas: ಪ್ರಭಾಸ್ ಗೆ ಈ ಜನ್ಮದಲ್ಲಿ ಮದುವೆ ಆಗಲ್ಲ! ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ ಗುರೂಜಿ!

Written by Pooja Siddaraj

Published on:

Prabhas: ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಆಗುವ ವ್ಯಕ್ತಿಗಳಲ್ಲಿ ಒಬ್ಬರು ವೇಣುಸ್ವಾಮಿ ಗುರೂಜಿ. ಇವರು ತೆಲುಗು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಬಗ್ಗೆ ನುಡಿದಿರುವ ಭವಿಷ್ಯ ಇದುವರೆಗೂ ನಿಜವಾಗಿದೆ. ಹಾಗಾಗಿ ಜನರು ಕೂಡ ವೇಣುಸ್ವಾಮಿ ನುಡಿಯುವ ಭವಿಷ್ಯವನ್ನು ನಂಬುವುದಕ್ಕೆ ಶುರು ಮಾಡಿದ್ದಾರೆ. ಇದೀಗ ಇವರು ನಟ ಪ್ರಭಾಸ್ ಅವರ ಮದುವೆ ಬಗ್ಗೆ ಮಾತನಾಡಿದ್ದಾರೆ..

ವೇಣುಸ್ವಾಮಿ ಈ ಹಿಂದೆ ನಟಿ ಸಮಂತಾ ಹಾಗೂ ನಾಗಚೈತನ್ಯ ಅವರ ವೈವಾಹಿಕ ಜೀವನ ಹೆಚ್ಚು ಸಮಯ ಉಳಿಯುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ ಮದುವೆಯಾದ 4 ವರ್ಷಗಳ ಒಳಗೆ ಇವರಿಬ್ಬರು ಬೇರೆ ಬೇರೆಯಾದರು. ಇನ್ನು ರಶ್ಮಿಕಾ ಅವರು ಸ್ಟಾರ್ ಆಗಲು ಇವರು ನೀಡಿದ ಸಲಹೆಗಳು ಮತ್ತು ಮಾಡಿಸಿದ ಪೂಜೆಗಳೇ ಕಾರಣ ಎಂದು ಕೂಡ ಹೇಳುತ್ತಾರೆ. ಹಾಗಾಗಿ ವೇಣುಸ್ವಾಮಿ ಅವರ ಮಾತುಗಳ ಮೇಲೆ ಎಲ್ಲರಿಗೂ ನಂಬಿಕೆ ಇದೆ..

ವೇಣುಸ್ವಾಮಿ ಅವರು ಇದೀಗ ನಟ ಪ್ರಭಾಸ್ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಪ್ರಭಾಸ್ ಅವರಿಗೆ ಈಗ 44 ವರ್ಷ ಆದರೆ ಇನ್ನೂ ಅವರಿಗೆ ಮದುವೆಯಾಗಿಲ್ಲ. ಅಭಿಮಾನಿಗಳು ಕೂಡ ತಮ್ಮ ಮೆಚ್ಚಿನ ನಟನ ಮದುವೆ ನೋಡಬೇಕು ಎಂದು ಕಾದು ಕುಳಿತಿದ್ದಾರೆ. ಆದರೆ ಪ್ರಭಾಸ್ ಅವರ ಮದುವೆ ಬಗ್ಗೆ ಇನ್ನೂ ಅಪ್ಡೇಟ್ ಸಿಕ್ಕಿಲ್ಲ. ಯಾವಾಗ ಮದುವೆ ಆಗುತ್ತಾರೆ ಎನ್ನುವುದು ಕೂಡ ಗೊತ್ತಿಲ್ಲ.

ಆದರೆ ಸಲಾರ್ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನ ಇದೆ ಎನ್ನುವಾಗಲೇ ಪ್ರಭಾಸ್ ಅವರ ಮದುವೆ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಪ್ರಭಾಸ್ ಅಗರಿಗೆ ಈ ಜನ್ಮದಲ್ಲಿ ಮದುವೆ ಆಗುವುದಿಲ್ಲ, ಮದುವೆ ವಿಚಾರಕ್ಕೆ ಸಾಕಷ್ಟು ತೊಂದರೆ ಮತ್ತು ಅಡೆತಡೆಗಳು ಇವೆ ಎಂದು ಹೇಳಿದ್ದಾರೆ ವೇಣುಸ್ವಾಮಿ. ಇದೀಗ ಈ ಭವಿಷ್ಯ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

Leave a Comment