ಡಿಜಿಟಲ್ ದುನಿಯಾ ಎನ್ನುವುದು ಇಂದು ವಿಶ್ವವ್ಯಾಪಿ ತನ್ನ ಜಾಲವನ್ನು ಹರಡಿದೆ. ಪ್ರಸ್ತುತ ವಿಶ್ವದಾದ್ಯಂತ ಡಿಜಿಟಲ್ ಎನ್ನುವುದು ದೈನಂದಿನ ಜೀವನದ ಒಂದು ಭಾಗವೇ ಆಗಿ ಹೋಗಿದೆ. ದಿನ ಆರಂಭದಿಂದ ಹಿಡಿದು ರಾತ್ರಿ ಮಲಗುವವರೆಗೆ ಒಂದಲ್ಲಾ ಒಂದು ರೀತಿ ಯಾವುದೋ ಒಂದು ಸಮಯದಲ್ಲಿ ನಾವು ಡಿಜಿಟಲ್ ಜಗದೊಳಗೆ ಎಂಟ್ರಿ ನೀಡಿರುತ್ತೇವೆ. ಇಂತಹ ಡಿಜಿಟಲ್ ಕೋನದಲ್ಲಿ ಸುದ್ದಿ ಮಾದ್ಯಮಗಳ ಪಾತ್ರದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ ಎನ್ನಬಹುದು. ಈಗ ಸುದ್ದಿಗಳಿಗಾಗಿ ಮರುದಿನದ ಪತ್ರಿಕೆ ವರೆಗೂ ಕಾಯಬೇಕಾದ ಅನಿವಾರ್ಯತೆ ಇಲ್ಲ, ಏಕೆಂದರೆ ಕ್ಷಣ ಕ್ಷಣದ ಸುದ್ದಿಗಳನ್ನು ಡಿಜಿಟಲ್ ಸುದ್ದಿ ಮಾದ್ಯಮಗಳು ನಮ್ಮ ಮುಂದೆ ಆ ಕ್ಷಣದಲ್ಲೇ ತಂದಿಡುವ ಮೂಲಕ ವೇಗವಾಗಿ ಸಾಗುತ್ತಿರುವ ಜನರ ಜೀವನದ ವೇಗದೊಂದಿಗೆ ಬೆರೆತು ಹೋಗಿವೆ.
ಹೀಗೆ ನಮ್ಮ ಆಧುನಿಕ ಜೀವನದಲ್ಲೊಂದು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತಿರುವ ಡಿಜಿಟಲ್ ಮಾದ್ಯಮಗಳ ಜಗತ್ತಿನಲ್ಲೊಂದು ದಾಪುಗಾಲು ಇಡುತ್ತಾ ಮುಂದೆ ಸಾಗಿದೆ ಸುದ್ದಿಮನೆ. ವಿಶಿಷ್ಟ ಸುದ್ದಿಗಳ ಮೂಲಕ, ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ನೀಡುವ ಮೂಲಕ, ಜ್ಞಾನಾಧಾರಿತ ವಿಚಾರಗಳ ಹಂಚಿಕೆಯ ಮೂಲಕ ಅಪಾರ ಸಂಖ್ಯೆಯ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡು, ಅನನ್ಯವಾದ ವಿಷಯಗಳ ಸಮಗ್ರ ಭಂಡಾರವಾಗಿ ಸದ್ದು ಮಾಡುತ್ತಿರುವ ಸುದ್ದಿ ಮನೆ ಡಿಜಿಟಲ್ ದುನಿಯಾದಲ್ಲೊಂದು ಹೊಸ ಸಂಚಲನವನ್ನು ಉಂಟು ಮಾಡುವ ಮೂಲಕ ಬಹಳಷ್ಟು ಜನರ ಗಮನವನ್ನು ಸೆಳೆದಿದೆ.
ಸುದ್ದಿಗಳು, ಸಂದರ್ಶನಗಳು, ವಿಶೇಷ ವಿಷಯಾಧಾರಿತ ಮಾಹಿತಿಗಳ ಸುಂದರ ವೀಡಿಯೋಗಳು ಹೀಗೆ ಹತ್ತು ಹಲವು ಸುದ್ದಿಗಳ ಚಿತ್ರಣವನ್ನು ಜನರ ಮುಂದೆ ಇಡುವಲ್ಲಿ ಸುದ್ದಿ ಮನೆಯ ಪ್ರಯತ್ನ ಗಮನಾರ್ಹವಾಗಿದೆ. ಅದರಲ್ಲೂ ಆಟೋ ಚಾಲನೆ ಮಾಡುವ ಮಹಿಳೆಯರ ಸ್ಪೂರ್ತಿದಾಯಕ ಸಂದರ್ಶನಗಳು, ಸ್ಯಾಂಡಲ್ವುಡ್ ಕಲಾವಿದರ ಜೀವನದ ಆಸಕ್ತಿಕರ ಅನುಭವಗಳ ಹಂಚಿಕೊಳ್ಳುವ ಸಂದರ್ಶನಗಳು, ಜನರ ಗಮನ ಸೆಳೆಯುವ ಬಿಗ್ ಬಾಸ್ ಸ್ಪರ್ಧಿಗಳ ಸುದ್ದಿ ಮನೆ ಸಂದರ್ಶನಗಳು ಜನರನ್ನು ವಿಶೇಷವಾಗಿ ಸೆಳೆಯುತ್ತಿವೆ. ಒಟ್ಟಾರೆ ಡಿಜಿಟಲ್ ಮಾದ್ಯಮಗಳಲ್ಲಿ ಸುದ್ದಿ ಮನೆ ತನ್ನದೇ ಆದ ವಿಶೇಷತೆಯೊಂದಿಗೆ ಮುಂದೆ ಸಾಗಿದೆ.