ಬಿಗ್ ಬಾಸ್ ಇದು ಕನ್ನಡದ ಅತಿದೊಡ್ಡ ಮತ್ತು ಅತಿಹೆಚ್ಚು ಬೇಡಿಕೆ ಇರುವ ರಿಯಾಲಿಟಿ ಶೋ ಎಂದರೆ ತಪ್ಪಲ್ಲ. ಈ ಶೋ ಶುರುವಾಗುತ್ತೆ ಎಂದರೆ ಕನ್ನಡ ಕಿರುತೆರೆ ವೀಕ್ಷಕರು ಕಾಯುತ್ತಾ ಇರುತ್ತಾರೆ. ನಿನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಚಾಲನೆ ಸಿಕ್ಕಿದ್ದು, ಕಿಚ್ಚ ಸುದೀಪ್ ಅವರು ಬಹಳಷ್ಟು ಟ್ವಿಸ್ಟ್ ಗಳ ಜೊತೆಗೆ 19 ಜನ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದಾರೆ.
ಈ ಬಾರಿ ವೀಕ್ಷಕರು ಆಯ್ಕೆ ಮಾಡಿ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದು, 6 ಸ್ಪರ್ಧಿಗಳು ವೇಟಿಂಗ್ ಲಿಸ್ಟ್ ನಲ್ಲಿದ್ದರು, ಇವರನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗಿದ್ದು, ಒಂದು ವಾರ ಸಮಯಾವಕಾಶ ನೀಡಲಾಗಿದೆ, ಅಷ್ಟರ ಒಳಗೆ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿ, ತಮ್ಮನ್ನು ತಾವು ಸಮರ್ಥರು ಎಂದು ಪ್ರೂವ್ ಮಾಡಿಕೊಂಡರೆ ಮನೆಯೊಳಗೆ ಉಳಿದುಕೊಳ್ಳುತ್ತಾರೆ.
ಈ ಸೀಸನ್ ನಲ್ಲಿ ಇದೊಂದು ಹೊಸ ಪ್ರಯತ್ನ ಆಗಿದ್ದು, ವೀಕ್ಷಕರಿಗು ಆಸಕ್ತಿದಾಯಕ ಅನ್ನಿಸಿದೆ.. ಸ್ಪರ್ಧಿಗಳು ಮೊದಲ ದಿನ ಬಿಗ್ ಬಾಸ್ ಮನೆಯೊಳಗೆ ಅಡ್ಜಸ್ಟ್ ಆಗುವ ಮೊದಲೇ ಬಿಗ್ ಟ್ವಿಸ್ಟ್ ಎದುರಾಗಿದ್ದು, ಬಿಗ್ ಬಾಸ್ ಮನೆಗೆ ಈಗ ಎಂ.ಎಲ್.ಎ ಪ್ರದೀಪ್ ಈಶ್ವರ್ ಎಂಟ್ರಿಯಾಗಿದೆ. ಹೌದು, ಇಂದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೊಮೋದಲ್ಲಿ ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ ಅವರು ಬಂದಿರುವುದನ್ನು ನೋಡಬಹುದಾಗಿದೆ.
ನಾನು ನಿನ್ನೆಯೇ ಬರಬೇಕಿತ್ತು ಬರಲು ಆಗಿರಲಿಲ್ಲ ಇಂದು ಸ್ಪರ್ಧಿಯಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ ಪ್ರದೀಪ್ ಈಶ್ವರ್. ಇವರನ್ನು ನೋಡಿ ಮನೆಮಂದಿ ಶಾಕ್ ಆಗಿದ್ದಾರೆ. ನಟಿ ಸಿರಿ ಅವರು ಕಂಟಸ್ಟೆಂಟ್ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದು, ಮನೆಯ ಇನ್ನಿತರ ಸದಸ್ಯರು ಕೂಡ ಶಾಕ್ ಆಗಿದ್ದಾರೆ. ಎಂ.ಎಲ್.ಎ ಆಗಿರುವ ಪ್ರದೀಪ್ ಈಶ್ವರ್ ನಿಜಕ್ಕೂ ಮನೆಯಲ್ಲಿ ಸ್ಪರ್ಧಿಯಾಗಿ ಇರುತ್ತಾರ ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ..
ಇನ್ನು ಕಳೆದ ಕೆಲವು ದಿನಗಳಿಂದ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬಹುದು ಎನ್ನುವ ಮಾತುಗಳು ಕೇಳಿಬಂದರು ಕೂಡ, ನಿಜಕ್ಕೂ ಬರುತ್ತಾರಾ ಎಂದು ಗೊಂದಲ ಕೂಡ ಇತ್ತು, ಆದರೆ ಈಗ ಆ ಎಲ್ಲಾ ಪ್ರಶ್ನೆ ಗೊಂದಲಗಳಿಗೆ ತೆರೆ ಬಿದ್ದಿದ್ದು ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇನ್ಮುಂದೆ ದೊಡ್ಮನೆ ಆಟ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.