Pradeep Eshwar: ಶಾಸಕ ಪ್ರದೀಪ್ ಈಶ್ವರ್ ಪತ್ನಿ ಯಾರು ಗೊತ್ತಾ? ಅವರ ಆಸ್ತಿ ಕೇಳಿದರೆ ಶಾಕ್ ಆಗ್ತೀರಿ!

0 15

Pradeep Eshwar: ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿರುವವರು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್. ವಿಧಾನಸಭಾ ಎಲೆಕ್ಷನ್ ನಲ್ಲಿ ಡಾ.ಕೆ ಸುಧಾಕರ್ ಅವರನ್ನು ಸೋಲಿಸಿ ಗೆದ್ದಿರುವ ಪ್ರದೀಪ್ ಅವರು ಇಂದು ಶಾಸಕರಾಗಿ ಸುದ್ದಿ ಆಗುವುದಕ್ಕಿಂತ ಹೆಚ್ಚಾಗಿ motivational speaker ಆಗಿ ಹೆಚ್ಚು ಸುದ್ದಿಯಾಗಿದ್ದಾರೆ ಎಂದರೆ ತಪ್ಪಲ್ಲ. ಪ್ರದೀಪ್ ಅವರ ಪತ್ನಿ ಯಾರು ಗೊತ್ತಾ?

ಪ್ರದೀಪ್ ಈಶ್ವರ್ ಅವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ, ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಪ್ರದೀಪ್ ಅವರು ತುಮಕೂರಿನ ಸಿದ್ದಗಂಗಾ ಮಠದ ಆಶ್ರಯದಲ್ಲಿ ಪಡೆದರು. ಅಲ್ಲಿ ಬೆಳೆದು, ಓದು ಮುಗಿಸಿಕೊಂಡ ನಂತರ ಮತ್ತೆ ಚಿಕ್ಕಬಳ್ಳಾಪುರಕ್ಕೆ ಬಂದು, ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕೆ ಶುರು ಮಾಡಿದರು. ಶಿಕ್ಷಕರಾಗಿ, ಟ್ಯೂಶನ್ ಹೇಳಿಕೊಡುವ ಕೆಲಸ ಮಾಡುತ್ತಿದ್ದರು.

ಕೆಲ ವರ್ಷಗಳು ಈ ರೀತಿ ಕೆಲಸ ಮಾಡಿದ ನಂತರ, ಪ್ರದೀಪ್ ಅವರು 2018 ರಲ್ಲಿ ನೀಟ್ ಪರೀಕ್ಷೆಗೆ ತರಬೇತಿ ಕೊಡುವ ಅಕಾಡೆಮಿಯನ್ನು ಸಹ ಶುರು ಮಾಡಿದರು. ಪ್ರದೀಪ್ ಈಶ್ವರ್ ಅವರು ಜೀವಶಾಸ್ತ್ರ ಕಲಿಸುತ್ತಾರೆ, ಬೆಂಗಳೂರಿನಲ್ಲಿ ಬೇರೆ ಪ್ರಾಧ್ಯಾಪಕರ ಜೊತೆಗೆ ಸೇರಿ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. 2018 ರಿಂದಲೇ ರಾಜಕೀಯದಲ್ಲೂ ಕಾಣಿಸಿಕೊಳ್ಳುತ್ತಿರುವ ಇವರು ಈ ವರ್ಷ ವಿಧಾನಸಭೆಯಲ್ಲಿ ಗೆದ್ದು, ಶಾಸಕರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಾಗುವ ಪ್ರದೀಪ್ ಈಶ್ವರ್ ಅವರ ಪತ್ನಿಯ ಹೆಸರು ಎಂ. ನಯನ. ಗಂಡನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರದೀಪ್ ಈಶ್ವರ್ ಅವರು ಚುನಾವಣೆಯ ಆಯೋಗಕ್ಕೆ ನೀಡಿರುವ ಮಾಹಿತಿಯ ಅನುಸಾರ, ಅವರ ವಾರ್ಷಿಕ ಆದಾಯ ₹34,67,770 ರೂಪಾಯಿಗಳು, ಇನ್ನು ನಯನಾ ಅವರ ವಾರ್ಷಿಕ ಆದಾಯ ₹25,50,000 ರೂಪಾಯಿ ಆಗಿದೆ. ಇವರ ಪತ್ನಿ ಕೂಡ ಕೋಟಿಗಟ್ಟಲೇ ಆಸ್ತಿಯ ಒಡತಿ ಆಗಿದ್ದಾರೆ.

Leave A Reply

Your email address will not be published.