Pranitha Subhash: ಎಷ್ಟು ಸ್ಲಿಮ್ ಆಗಿದ್ದಾರೆ ನೋಡಿ ನಟಿ ಪ್ರಣೀತಾ! ಇವರು ಒಂದು ಮಗುವಿನ ತಾಯಿನಾ ಎನ್ನುತ್ತಿದ್ದಾರೆ ನೆಟ್ಟಿಗರು!

0 12

Pranitha Subhash: ಸ್ಯಾಂಡಲ್ ವ್ಯಡ್ ನ ಮುದ್ದಾದ ನಟಿ ಪ್ರಣೀತಾ ಸುಭಾಷ್ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಡಿಬಾಸ್ ದರ್ಶನ್ ಅವರ ಪೊರ್ಕಿ ಸಿನಿಮಾ ಮೂಲಕ ನಟನೆಯ ಜರ್ನಿ ಶುರು ಮಾಡಿದ ಪ್ರಣೀತಾ ಅವರು, ನಂತರ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಯಶಸ್ಸು ಪಡೆದರು. ಹಾಗೆಯೇ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಪ್ರಣೀತಾ. ಆದರೆ ಈಕೆ ಅಪ್ಪಟ ಬೆಂಗಳೂರಿನ ಹುಡುಗಿ..

ಪ್ರಣೀತಾ ಅವರು ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಕೆರಿಯರ್ ಪೀಕ್ ನಲ್ಲಿ ಇರುವಾಗಲೇ ನಿತಿನ್ ಅವರೊಡನೆ ಮದುವೆಯಾದರು. ಈ ಜೋಡಿಗೆ ಒಂದು ಮುದ್ದಾದ ಹೆಣ್ಣುಮಗುವಿಗೆ. ಪ್ರಣೀತಾ ಅವರು ಮದುವೆಯಾದ ನಂತರ ಸಿನಿಮಾದಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಒಳ್ಳೆಯ ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ. ಹೆಚ್ಚಿನ ಸಮಯವನ್ನು ಫ್ಯಾಮಿಲಿಗೆ ಕೊಡುತ್ತಿದ್ದಾರೆ. ಆದರೆ ಪ್ರಣೀತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್.

ಅನೇಕ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮಗಳ ಜೊತೆಗೆ, ಹಬ್ಬದ ಆಚರಣೆಯ ಫೋಟೋಸ್ ಹೀಗೆ ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಇವರು ಲೆಹೆಂಗಾದಲ್ಲಿ ಒಂದು ಫೋಟೋ ಶೇರ್ ಮಾಡಿದ್ದು, ಬಹಳ ಸ್ಲಿಮ್ ಆಗಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಮದುವೆಯಾಗಿ ಒಂದು ಮಗು ಆದಮೇಲು ಪ್ರಣೀತಾ ಅವರು ಎಷ್ಟು ಸ್ಲಿಮ್ ಆಗಿದ್ದಾರೆ ಎಂದು ಶಾಕ್ ಆಗಿದ್ದಾರೆ. ಹಾಗೆಯೇ ಇವರ ಸೌಂದರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Leave A Reply

Your email address will not be published.