Prashanth Bharadwaj: ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಿಲನಾ ಧಾರವಾಹಿ ಖ್ಯಾತಿಯ ನಟ ಪ್ರಶಾಂತ್!

0 2

Prashanth Bharadwaj: ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ ಮಿಲನಾ ಧಾರಾವಾಹಿಯ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡವರು ನಟ ಪ್ರಶಾಂತ್ ಭಾರದ್ವಾಜ್. ಉತ್ತಮ ನಟನಾಗಿ ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಾರದ್ವಾಜ್ ಅವರು ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಶಾಂತ್ ಅವರ ನಿಶ್ಚಿತಾರ್ಥ ನಡೆದಿತ್ತು. ವೈಷ್ಣವಿ ಎನ್ನುವ ಹುಡುಗಿಯ ಜೊತೆಗೆ ನಿಶ್ಚಿತಾರ್ಥವಾದ ನಂತರ ಫೋಟೋಸ್ ಶೇರ್ ಮಾಡಿದ್ದರು ಪ್ರಶಾಂತ್. ನಿನ್ನೆಯಷ್ಟೇ ಇವರ ಮದುವೆ ಸಹ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪ್ರಶಾಂತ್ ಅವರ ಮದುವೆ ಫೋಟೋಗಳು ವೈರಲ್ ಆಗಿವೆ. ಕನ್ನಡ ಕಿರುತೆರೆಯ ಕಲಾವಿದರು ಇವರ ಮದುವೆಗೆ ಬಂದು ಹೊಸ ಜೋಡಿಗೆ ಶುಭಕೋರಿದ್ದಾರೆ..

ಇನ್ನು ಪ್ರಶಾಂತ್ ಅವರು ಮಿಲನಾ ನಂತರ ಹೆಚ್ಚಿನ ಧಾರವಾಹಿಗಳಲ್ಲಿ ನಟಿಸಿಲ್ಲ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಕಿರುತೆರೆಯಲ್ಲಿ ಕೂಡ ಪ್ರಶಾಂತ್ ಅವರು ಸಕ್ರಿಯವಾಗಿದ್ದು, ಪ್ರಸ್ತುತ ತೆಲುಗು ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ. ಆದರೆ ಇವರ ಮಿಲನಾ ಧಾರಾವಾಹಿಯನ್ನು ಇಂದಿಗು ಕನ್ನಡ ಕಿರುತೆರೆ ವೀಕ್ಷಕರು ಮರೆತಿಲ್ಲ ಎಂದರೆ ತಪ್ಪಲ್ಲ.

Leave A Reply

Your email address will not be published.