Prashanth Neel quits Social Media ಸಿನಿಮಾ ಸೆಲೆಬ್ರಿಟಿಗಳಿಗೆ ಇನ್ನಷ್ಟು ಜನಪ್ರಿಯತೆ ಪಡೆಯಲು ನೆರವನ್ನು ನೀಡಿರುವುದು ಸೋಶಿಯಲ್ ಮೀಡಿಯಾಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಬಹುತೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇದೀಗ
ಕೆಜಿಎಫ್(KGF) ಸರಣಿ ಸಿನಿಮಾಗಳ ಮೂಲಕ ಇಡೀ ದೇಶದ ಗಮನ ಸೆಳೆದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್(Prashant Neel) ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳುವ ಮೂಲಕ ಶಾ ಕ್ ನೀಡಿದ್ದಾರೆ. ಆಗಾಗ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದ ಪ್ರಶಾಂತ್ ನೀಲ್ ಈಗ ಇದ್ದಕ್ಕಿದ್ದ ಹಾಗೆ ಸೋಶಿಯಲ್ ಮೀಡಿಯಾದಿಂದ ದೂರ ಸರಿದಿರುವುದು ಅಚ್ಚರಿಯನ್ನು ಉಂಟು ಮಾಡಿದೆ.
ರಾಕಿಭಾಯ್ ಪಾತ್ರಕ್ಕೆ ಬೇರೊಬ್ಬ ನಟ ಬರಬಹುದು: ಹೊಂಬಾಳೆ ಫಿಲ್ಮ್ಸ್ ಕೊಟ್ಟ ಶಾಕ್!

ಹೌದು, ಪ್ರಶಾಂತ್ ನೀಲ್(Prashant Neel) ಅವರು ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಎರಡನ್ನೂ ನಿಷ್ಕ್ರಿಯ ಮಾಡಿದ್ದಾರೆ. ಕೆಜಿಎಫ್(KGF director) ನಿರ್ದೇಶಕನ ಈ ದಿಢೀರ್ ನಿರ್ಧಾರದ ಹಿಂದಿನ ಕಾರಣವೇನು? ಎನ್ನುವುದು ಎಲ್ಲರ ಕುತೂಹಲವನ್ನು ಕೆರಳಿಸಿದೆ. ಕೆಜಿಎಫ್ ನಂತರ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್(Salar) ಸಿನಿಮಾದ ಕುರಿತಾಗಿ ಲೇಟೆಸ್ಟ್ ಅಪ್‌ಡೇಟ್‌ಗಳ ನಿರೀಕ್ಷೆಯಲ್ಲಿ ಇದ್ದಂತಹ ಸಿನಿಮಾ ಪ್ರೇಮಿಗಳಿಗೆ ಈಗ ಪ್ರಶಾಂತ್ ನೀಲ್ ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣದಿಂದ ದೂರ ಸರಿದು ದೊಡ್ಡ ಶಾ ಕ್ ಅನ್ನೇ ನೀಡಿದ್ದಾರೆ. Prashanth Neel quits Social Media
ಪ್ರಶಾಂತ್ ನೀಲ್(Prashant Neel last post) ಕೊನೆಯದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ರಾಕಿಂಗ್ ಸ್ಟಾರ್ ಯಶ್(Yash) ಅವರಿಗೆ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದರು. ಅವರು, ‘ಫಲಕ್ ಕಾ ದಸ್ತೂರ್… ಖುದಾ ಕಾ ಹುಕುಮ್.. ಔರ್ ಏಕ್ ಭಾಯಿ ಕೀ ದುವಾ ಹೈ.. ಕೀ ಹಾತೋಂ ಕೀ.. ಲಕೀರೋ ಕೋ ಭೀ ರುಕ್ಸತ್ ಕರ್.. ರೋಕ್ನೇಸೆ ಭೀ ನಹೀ ರುಕೇಗಿ..ತುಮ್ಹಾರಿ ಯೇ ಸಲ್ತನತ್….’ಎಂದು ಬರೆದುಕೊಂಡು, ಯಶ್ ಗೆ ‘ಹುಟ್ಟುಹಬ್ಬದ ಶುಭಾಶಯಗಳು ಬಾಸ್’ ಎಂದಿದ್ದರು. ಫೋಟೋ ಒಂದನ್ನು ಸಹಾ ಶೇರ್ ಮಾಡಿಕೊಂಡಿದ್ದರು.
ದಿನವಿಡೀ ನಾವೇನು ಡ್ರಗ್ಸ್ ತಗೊಳ್ಳಲ್ಲ: ಬಾಲಿವುಡ್ ಉಳಿಸಿ ಎಂದು ಯೋಗಿ ಮೊರೆ ಹೋದ ಸುನೀಲ್ ಶೆಟ್ಟಿ
ಆದರೆ ಈಗ ದಿಢೀರ್ ಎಂದು ಪ್ರಶಾಂತ್ ನೀಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾದ್ರು ಏತಕ್ಕೆ ಎನ್ನುವ ಕಾರಣ ಮಾತ್ರ ಬಹಿರಂಗವಾಗಿಲ್ಲ. ಬಹುಶಃ ಅವರು ಟ್ರೋಲ್ ಗಳಿಂದ ಬೇಸತ್ತು ಇಂತಹುದೊಂದು ನಿರ್ಧಾರವನ್ನು ಮಾಡಿರಬಹುದೇನೋ ಎನ್ನುವ ಮಾತುಗಳು ಸಹಾ ಕೇಳಿ ಬಂದಿದೆ. ಪ್ರಶಾಂತ್ ನೀಲ್ ಅವರು ಕೆಜಿಎಫ್ ನಂತರ ತೆಲುಗು ಸಿನಿಮಾ ರಂಗಕ್ಕೆ ಅಡಿಯಿಟ್ಟಾಗಲೇ ಅನೇಕರು ಅವರನ್ನು ಟ್ರೋಲ್ ಮಾಡಿದ್ದರು. ಅಲ್ಲದೇ ಬ್ಯಾಕ್ ಟು ಬ್ಯಾಕ್ ಅವರು ತೆಲುಗಿನ ಸಿನಿಮಾಗಳನ್ನು ಮಾಡುತ್ತಿರುವುದು ಸಹಾ ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.