Puneeth Rajkumar: ನಮ್ಮೆಲ್ಲರ ಪ್ರೀತಿಯ ಅಪ್ಪು ಅವರ 2ನೇ ವರ್ಷದ ಪುಣ್ಯಸ್ಮರಣೆ ನಡೆದಿದೆ. ಅಪ್ಪು ಅವರು ಅಗಲಿ 2 ವರ್ಷ ಆಗಿದ್ದರು ಕೂಡ ಇಂದಿಗೂ ಕೂಡ ಅಭಿಮಾನಿಗಳು ಅವರನ್ನು ಮರೆತಿಲ್ಲ. ಅಪ್ಪು ಅವರ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಸರ್ಕಾರ ಕೂಡ ಅಪ್ಪು ಅವರ ಹೆಸರಲ್ಲಿ ಕೆಲವು ಒಳ್ಳೆಯ ಕೆಲಸಗಳನ್ನು ಮಾಡುವ ನಿರ್ಧಾರ ಮಾಡಿದ್ದು, ಇದೀಗ ಆ ಕೆಲಸ ಲಾಂಚ್ ಕೂಡ ಆಗಿದೆ..
ಅಪ್ಪು ಅವರ ಹೆಸರಿನಲ್ಲಿ ಈಗ ಸಿದ್ದರಾಮಯ್ಯ ಅವರ ಸರ್ಕಾರವು ಅಪ್ಪು ಹೃದಯ ಜ್ಯೋತಿ ಯೋಜೆನಯನ್ನು ಶುರು ಮಾಡಿದೆ. ಈ ಯೋಜನೆಯ ಮೂಲಕ ಸಾಕಷ್ಟು ಜನರಿಗೆ ಸಹಾಯ ಆಗಲಿದೆ. ಅಪ್ಪು ಅವರ ಹೆಸರಿನ ಈ ಯೋಜನೆಯಲ್ಲಿ ಜನರು ಉಚಿತವಾಗಿ ಇಸಿಜಿ ಮಾಡಿಸಿಕೊಳ್ಳಬಹುದು. ಸಾರ್ವಜನಿಕ ಸ್ಥಳದಲ್ಲಿ ಹಬ್ ಅಂಡ್ ಸ್ಪೋಕ್ ಹಾಗೂ ಎಇಡಿ ಸಾಧನಗಳನ್ನು ಅಳವಡಿಸಬೇಕು ಎಂದು ಪ್ಲಾನ್ ಮಾಡಲಾಗಿದೆ.
ಈ ಯೋಜನೆಯ ಅನುಸಾರ ಒಬ್ಬ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತವಾದರೆ ತಮಗೆ ಹತ್ತಿರ ಇರುವ ಈ ಕೇಂದ್ರಕ್ಕೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು, ಇಸಿಜಿ ಮಾಡಿಸಿಕೊಳ್ಳಬಹುದು. ಆದರೆ ಇವರ ಬಳಿ ಬಿಪಿಎಲ್ ಕಾರ್ಡ್ ಇರಬೇಕು ಎನ್ನುವುದು ಕಡ್ಡಾಯವಾಗಿದೆ. ಬಿಪಿಎಲ್ ಕಾರ್ಡ್ ಇದ್ದರೆ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ಗಳಲ್ಲಿ ಕೂಡ ಚಿಕಿತ್ಸೆ ಪಡೆದುಕೊಳ್ಳಬಹುದು.
ಆಯುಶ್ಮಾನ್ ಕಾರ್ಡ್ ಕೂಡ ಇದ್ದರೆ ಉಚಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯ ಬಗ್ಗೆ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದು, ಶೀಘ್ರದಲ್ಲೇ ಅಪ್ಪು ಹೃದಯ ಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ. ಅಪ್ಪು ಅವರ ಹೆಸರಿನಲ್ಲಿ ನೇತ್ರಾಲಯಗಳಲ್ಲಿ ಕೂಡ ಹೊಸ ಸೇವೆ ಶುರು ಮಾಡುವ ಪ್ಲಾನ್ ಮಾಡಿದೆ ಸರ್ಕಾರ..ಅದರ ಜೊತೆಗೆ ಈ ಯೋಜನೆಯನ್ನು ಕೂಡ ಮಾಡಿಕೊಳ್ಳುತ್ತಿರುವುದು ಸಂತೋಷದ ವಿಚಾರ ಆಗಿದೆ..
ಅಪ್ಪು ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ, ತಾವು ಮಾಡಿರುವ ಸಮಾಜಮುಖಿ ಕಾರ್ಯಗಳಿಂದ ಅಪ್ಪು ಅವರು ಎಲ್ಲರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ಪ್ರಪಂಚದಿಂದ ದೂರವಾಗಿ, 2 ವರ್ಷಗಳು ಕಳೆದು ಹೋಗಿದ್ದರು ಸಹ, ಜನರು ಇಂದಿಗೂ ಅವರ ಸಮಾಧಿ ಬಳಿ ಹೋಗುವುದು ಮತ್ತು ಅಪ್ಪು ಅವರನ್ನು ನೆನೆಯುವುದನ್ನು ಮರೆತಿಲ್ಲ.