R Subbalakshmi: ಚಿತ್ರರಂಗದ ಖ್ಯಾತ ನಟಿ ಆರ್.ಸುಬ್ಬಲಕ್ಷ್ಮೀ ಇನ್ನಿಲ್ಲ!

Written by Pooja Siddaraj

Published on:

R Subbalakshmi: ಚಿತ್ರರಂಗದಲ್ಲಿ ಈಗ ಹೆಚ್ಚಾಗಿ ಸಾವಿನ ಸುದ್ದಿಗಳೇ ಕೇಳಿಬರುತ್ತಿವೆ. ಇದರಿಂದ ಚಿತ್ರರಂಗದ ಕಲಾವಿದರು ನೋವಿನಲಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗದ ಖ್ಯಾತ ಹಿರಿಯ ನಟಿ ಆರ್.ಸುಬ್ಬಲಕ್ಷ್ಮೀ ಅವರು ನಿಧನವಾಗಿದ್ದಾರೆ ಎನ್ನುವ ಸುದ್ದಿ ತಿಳಿದುಬಂದಿದೆ. ಹಲವು ವರ್ಷಗಳಿಂದ ಇವರು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.

ಸುಬ್ಬಲಕ್ಷ್ಮಿ ಅವರಿಗೆ 87 ವರ್ಷ ವಯಸ್ಸಾಗಿದ್ದು, ಇವರು ನಿನ್ನೆ ಕೇರಳದ ತಿರುವನಂತಪುರಂ ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣ ಸುಬ್ಬಲಕ್ಷ್ಮೀ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಕೊಟ್ಟ ಚಿಕಿತ್ಸೆ ಫಲ ನೀಡದೆ ಕೊನೆಯುಸಿರೆಳೆದಿದ್ದಾರೆ. ಚಿಕ್ಕವರಾಗಿದ್ದಾಗಿನಿಂದಲು ಇವರು ಮನರಂಜನೆಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರು. ಬಾಲ್ಯದಲ್ಲೇ AIR ನಲ್ಲಿ ಗಾಯಕಿಯಾಗಿದ್ದರು..

ಇವರು ಕರ್ನಾಟಕ ಸಂಗೀತಗಾರ್ತಿ ಕೂಡ ಹೌದು. ಸುಬ್ಬಲಕ್ಷ್ಮೀ ಅವರು AIR ಇಂದ ನಿವೃತ್ತಿ ಪಡೆದ ನಂತರ ಚಿತ್ರರಂಗಕ್ಕೆ ಪ್ರವೇಶ ಮಾಡಿದರು, ಇವರು ನಟಿಸಿದ ಮೊದಲ ಸಿನಿಮಾ ನಂದನಂ. ಈ ಸಿನಿಮಾ ಬಳಿಕ ಹಲವು ಮಲಯಾಳಂ ಸಿನಿಮಾಗಳಲ್ಲಿ ಅಜ್ಜಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದಿಲ್ ಬೇಚಾರ ಸಿನಿಮಾದಲ್ಲಿಯೂ ಅವರ ಅಜ್ಜಿಯ ಪಾತ್ರದಲ್ಲಿ ನಟಿಸಿದ್ದರು.

ಬೆಳ್ಳಿತೆರೆ ಮಾತ್ರವಲ್ಲದೆ, ಕಿರುತೆರೆಯಲ್ಲಿ ಕೂಡ ಹಲವು ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ನಟಿಯಾಗಿ ಮಾತ್ರವಲ್ಲದೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಹಲವು ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ನಿನ್ನೆ ಪತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ ಹಿರಿಯನಟಿ ಆರ್.ಸುಬ್ಬಲಕ್ಷ್ಮೀ.

Leave a Comment