Rachita Ram: ನಟಿ ರಚಿತಾ ರಾಮ್ ಅವರ ಮದುವೆ ಫಿಕ್ಸ್ ಆಯ್ತಾ?ಸುಳಿವು ಕೊಟ್ಟ ಕ್ರೇಜಿಸ್ಟಾರ್!

0 15

Rachita Ram: ನಟಿ ರಚಿತಾ ರಾಮ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ, 1 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟಿ ಎಂದು ಕೂಡ ಹೆಸರು ಪಡೆದಿದ್ದಾರೆ. ಹಾಗೆಯೇ ಕನ್ನಡದ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಇವರೇ.. ರಚಿತಾ ರಾಮ್ ಅವರ ಮದುವೆ ಫಿಕ್ಸ್ ಆಗಿದೆ ಎನ್ನುವ ವಿಚಾರ ಈಗ ವೈರಲ್ ಆಗಿದೆ..

ರಚಿತಾ ರಾಮ್ ಅವರು ಜೀಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಶೋಗೆ ಜಡ್ಜ್ ಆಗಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಈ ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತು ಹಿರಿಯನಟಿ ಲಕ್ಷ್ಮಿ ಅವರು ಕೂಡ ಜಡ್ಜ್ ಆಗಿದ್ದಾರೆ. ಈ ವಾರ ಡ್ರಾಮಾ ಜ್ಯೂನಿಯರ್ಸ್ ಮತ್ತು ಸರಿಗಮಪ ಎರಡು ಕಾರ್ಯಕ್ರಮಗಳ ಮಹಾಸಂಗಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಎರಡು ಕಾರ್ಯಕ್ರಮದ ಸ್ಪರ್ಧಿಗಳು ಪರ್ಫಾರ್ಮ್ ಮಾಡಿದರು..

ಈ ವೇಳೆ ಸರಿಗಮಪ ಸ್ಪರ್ಧಿ ಪಂಜಾಬ್ ನವರಾದ ಜಸ್ ಕರಣ್ ಸಿಂಗ್ ರಚಿತಾ ರಾಮ್ ಅವರ ಹಾಡುಗಳನ್ನು ಹಾಡಿ ಇಂಪ್ರೆಸ್ ಮಾಡಿದರು. ಹಾಗೆಯೇ ರಚಿತಾ ರಾಮ್ ಅವರು ಸ್ಟೇಜ್ ಮೇಲೆ ಬಂದು, ಜಸ್ ಕರಣ್ ಅವರಿಗೆ ಮೆಚ್ಚುಗೆ ಸೂಚಿಸಿ, ಹಿಂದಿಯ ಯೇ ರಾತೆ, ಯೇ ಮೌಸಂ ಹಾಡನ್ನು ಹಾಡಲು ಕೇಳಿ, ಜಸ್ ಕರಣ್ ಆ ಹಾಡನ್ನು ಹಾಡಿದ್ದಕ್ಕೆ ಬಹಳ ಸಂತೋಷಪಟ್ಟರು, ಹಾಗೆಯೇ ಜಸ್ ಕರಣ್ ರಚಿತಾ ಅವರಿಗಾಗಿ ಒಂದು ಸಣ್ಣ ಕವಿತೆಯನ್ನು ಹೇಳಿದರು..

ನೀವು ರಾಣಿಯಂತೆ ಇರಲು ರಾಜನನ್ನು ಮದುವೆಯಾಗಬೇಕು ಅಂತ ಇಲ್ಲ, ರಾಣಿಯಂತೆ ನೋಡಿಕೊಳ್ಳುವ ನನ್ನಂಥ ಹುಡುಗನನ್ನು ಮದುವೆಯಾಗಬಹುದು ಎಂದು ಹೇಳಿದರು. ರಚಿತಾ ರಾಮ್ ಅವರು ಮೆಚ್ಚುಗೆ ಸೂಚಿಸುತ್ತಿದ್ದ ಹಾಗೆ, ರವಿಚಂದ್ರನ್ ಅವರು ಮಧ್ಯ ಮಾತನಾಡಿ ನೀವು ತುಂಬಾ ಲೇಟ್ ಇದು ರಾಂಗ್ ಟೈಮ್ ಎಂದು ಹೇಳಿದರು. ಅದಕ್ಕೆ ರಚಿತಾ ರಾಮ್ ಅವರು ಇದಕ್ಕೆ ನಾನು ಆಮೇಲೆ ಉತ್ತರ ಕೊಡ್ತೀನಿ ಎಂದು ಹೇಳುತ್ತಾರೆ.

ಈ ಮಾತು ಸ್ಟೇಜ್ ಮೇಲೆ ಆಡಿದ ಬಳಿಕ, ರಚಿತಾ ರಾಕ್ ಅವರು ಶೀಘ್ರದಲ್ಲೇ ಮದುವೆ ಆಗ್ತಾರಾ? ಅದರ ಬಗ್ಗೆಯೇ ರವಿಚಂದ್ರನ್ ಅವರು ಸುಳಿವು ಕೊಟ್ಟಿದ್ದಾ? ಎಂದು ಅಭಿಮಾನಿಗಳಲ್ಲಿ ಹೊಸ ಚರ್ಚೆ ಶುರುವಾಗಿದೆ. ನಿಜಕ್ಕೂ ರಚಿತಾ ಅವರು ಮದುವೆಯಾಗುತ್ತಿದ್ದಾರಾ? ಈ ಪ್ರಶ್ನೆಗೆ ಖುದ್ದು ರಚಿತಾ ಅವರೇ ಉತ್ತರ ನೀಡಬೇಕಿದೆ.

Leave A Reply

Your email address will not be published.