Radhika Gandhi: ಸ್ಯಾಂಡಲ್ವುಡ್ ಇಂದ ದೂರವಾದ ನಟಿ ಪೂಜಾ ಗಾಂಧಿ ತಂಗಿ ಈಗ ಮಾಡ್ತಿರೋ ಕೆಲಸ ಏನು ಗೊತ್ತಾ?

0 1

Radhika Gandhi: ನಟಿ ಪೂಜಾ ಗಾಂಧಿ ಅವರು ಮುಂಗಾರು ಮಳೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮ ಎಷ್ಟು ದೊಡ್ಡ ಹಿಟ್ ಆಯಿತು ಎಂದರೆ, ಬ್ಯಾಕ್ ಟು ಬ್ಯಾಕ್ ಸಿನಿಮಾ ಅವಕಾಶಗಳು ಬರುವುದಕ್ಕೆ ಶುರುವಾದವು. ಬಳಿಕ ಪೂಜಾ ಗಾಂಧಿ ಅವರ ತಂಗಿ ರಾಧಿಕಾ ಗಾಂಧಿ ಅವರು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈಗ ನಟನೆ ಇಂದ ದೂರವಾಗಿರೋ ಇವರು ಏನು ಮಾಡುತ್ತಿದ್ದಾರೆ ಗೊತ್ತಾ?

ರಾಧಿಕಾ ಗಾಂಧಿ ಅವರು ಅಕ್ಕನ ಹಾಗೆ ಸಕ್ಸಸ್ ಕಾಣಬೇಕು ಎಂದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿಕ್ಕಮಗಳೂರ ಚಿಕ್ಕ ಮಲ್ಲಿಗೆ, ಕಲಾಕಾರ್, ಹೊಸ ಪ್ರೇಮ ಪುರಾಣ ಹಾಗೂ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ರಾಧಿಕಾ ಗಾಂಧಿ ಅವರಿಗೆ ಅಕ್ಕನ ಹಾಗೆ ಸಿನಿಮಾ ರಂಗದಲ್ಲಿ ಯಶಸ್ಸು ಸಿಗಲಿಲ್ಲ. ಹಾಗಾಗಿ ಚಿತ್ರರಂಗದಿಂದ ದೂರವಾದರು ನಟಿ ರಾಧಿಕಾ ಗಾಂಧಿ..

ಬಳಿಕ ಇವರು ಮತ್ತೆ ಶಿಕ್ಷಣದಲ್ಲಿ ತೊಡಗಿ ವೊಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿದ್ದಾರೆ ರಾಧಿಕಾ ಗಾಂಧಿ. ಬಳಿಕ ಇವರು ಸೆನ್ಸ್ ಸ್ಟ್ರೇಟಜಿ ಅಂಡ್ ಡಿಸೈನ್ ಹೆಸರಿನ ಕಂಪನಿಯಲ್ಲಿ ಕ್ಲೈಂಟ್ ಸರ್ವಿಸ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ರಾಧಿಕಾ. ಪ್ರಸ್ತುತ ವಿಜ್ ಕ್ರಾಫ್ಟ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ..

ಇವರು ಫ್ಯಾಶನ್ ಡಿಸೈನರ್ ಆಗಿದ್ದು, ತಮ್ಮದೇ ಆದ ಫ್ಯಾಶನ್ ಹೌಸ್ ಹೊಂದಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಾಧಿಕಾ, ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ.

Leave A Reply

Your email address will not be published.