Radhika Kumaraswamy: ಕನ್ನಡ ಚಿತ್ರರಂಗ ಕಂಡ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರು ರಾಧಿಕಾ ಕುಮಾರಸ್ವಾಮಿ, ಇವರಿಗೆ ಈಗ ವಯಸ್ಸು 35 ಆಗಿದ್ದರು, ಈಗಲೂ ಮದುವೆಯಾಗದ ಚಿಕ್ಕ ಹುಡುಗಿಯ ಹಾಗೆ ಕಾಣಿಸುತ್ತಾರೆ ರಾಧಿಕಾ ಕುಮಾರಸ್ವಾಮಿ. 2002ರಲ್ಲಿ ತೆರೆಕಂಡ ನಿನಗಾಗಿ ಸಿನಿಮಾ ಮೂಲಕ ರಾಧಿಕಾ ಕುಮಾರಸ್ವಾಮಿ ಮತ್ತು ನಟ ವಿಜಯ್ ರಾಘವೇಂದ್ರ ಇಬ್ಬರು ಸಹ ಚಂದನವನಕ್ಕೆ ನಾಯಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಸೂಪರ್ ಹಿಟ್ ಆದ ನಂತರ ರಾಧಿಕಾ ಅವರಿಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗಲು ಶುರುವಾಯಿತು.
ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು ರಾಧಿಕಾ ಕುಮಾರಸ್ವಾಮಿ, ಕನ್ನಡ ಮತ್ತು ತಮಿಳು ಎರಡು ಚಿತ್ರರಂಗದಲ್ಲಿ ಬ್ಯುಸಿಯಾದರು. ಕೆಲವು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ ಬಳಿಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮದುವೆಯಾದರು ರಾಧಿಕಾ. ಈ ದಂಪತಿಗೆ ಶಮಿಕಾ ಹೆಸರಿನ ಒಂದು ಮುದ್ದಾದ ಮಗು ಇದೆ. ಸಧ್ಯಕ್ಕೆ ರಾಧಿಕಾ ಅವರು ನಟನೆಯಿಂದ ಸ್ವಲ್ಪ ದೂರವೆ ಉಳಿದಿದ್ದಾರೆ.
ಇನ್ನುಮುಂದೆ ಆದರೂ ಇವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಎನ್ನುವುದೇ ಅಭಿಮಾನಿಗಳ ಆಸೆ. ಸಿನಿಮಾ ಇಂದ ಸ್ವಲ್ಪ ದೂರವೇ ಉಳಿದಿರುವ ರಾಧಿಕಾ ಕುಮಾರಸ್ವಾಮಿ ಕಿರುತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದರು ರಾಧಿಕಾ. ಇವರಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಆಗಾಗ ಸ್ಟೇಜ್ ಶೋ ಗಳನ್ನು ಸಹ ಕೊಡುತ್ತಾರೆ ರಾಧಿಕಾ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರು ಆಗಾಗ ಫೋಟೋಗಳು ಮತ್ತು ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ರಾಧಿಕಾ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿ ಗುಡ್ ನ್ಯೂಸ್ ನೀಡಿದ್ದಾರೆ. ಅದೇನು ಎಂದರೆ ಈ ವರ್ಷ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಲಿದ್ದಾರೆ ರಾಧಿಕಾ.
4 ವರ್ಷಗಳಿಂದ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡಿಕೊಂಡಿಲ್ಲ. ಹಾಗಾಗಿ ಈ ವರ್ಷ ಅವರಿಗೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಬೇಕು ಎಂದು ಅನ್ನಿಸಿದ್ದು, ತಮ್ಮ ಮನೆಯ ಅಡ್ರೆಸ್ ನೀಡಿ, ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಎಲ್ಲರೂ ಬನ್ನಿ ಕರೆದಿದ್ದಾರೆ. ವಿಡಿಯೋ ಮೂಲಕ ಕರೆದು, ಮನೆಯ ಅಡ್ರೆಸ್ ಅನ್ನು ಕ್ಯಾಪ್ಶನ್ ನಲ್ಲಿ ಹಾಕಿದ್ದಾರೆ. ಇವರ ಅಭಿಮಾನಿಗಳು ಇದರಿಂದ ಖುಷಿಯಾಗಿದ್ದಾರೆ ಎಂದರೆ ತಪ್ಪಲ್ಲ.