ರಾಧಿಕಾ ಪಂಡಿತ್ ನಿರ್ಧಾರ, ಅಭಿಮಾನಿಗಳಿಗೆ ಬೇಸರ: ಆದ್ರೂ ಇದ್ಯಂತೆ ಸರ್ಪ್ರೈಸ್

0
42

Radhika Pandit :ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಹೆಸರಾಗಿರುವ ನಟಿ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಕೂಡಾ ಅವರನ್ನು ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆಗೆ ಕಡಿಮೆಯೇನಿಲ್ಲ. ಸೋಶಿಯಲ್ ಮೀಡಿಯಾಗಳಲ್ಲೂ ಸಕ್ರಿಯವಾಗಿರುವ ನಟಿಯನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಫಾಲೋ ಮಾಡುತ್ತಾರೆ. ರಾಧಿಕಾ ಪಂಡಿತ್ ಅವರು ಪ್ರತಿ ವರ್ಷ ಫ್ಯಾನ್ಸ್​ ಜೊತೆ  ಆಚರಿಸಿಕೊಳ್ಳುತ್ತಾರೆ. ಆದರೆ ಈ ವರ್ಷ ಅವರು ಮನೆಯಲ್ಲಿ ಇರುವುದಿಲ್ಲವೆಂದು ನಟಿ ತಿಳಿಸಿದ್ದಾರೆ.

ಹೌದು, ಈ ವಿಚಾರವನ್ನು ಜನ್ಮದಿನಕ್ಕೂ ಒಂದು ದಿನ ಮುನ್ನ ಅವರು ತಿಳಿಸಿದ್ದಾರೆ. ಮಾರ್ಚ್ ಏಳರಂದು ನಟಿ ರಾಧಿಕಾ ಪಂಡಿತ್ ಅವರ ಜನ್ಮದಿನ(Radhika Pandit Birthday). ನಟಿಯ ಜನ್ಮದಿನಕ್ಕೆ ಅವರ ಅಭಿಮಾನಿಗಳು ಅವರ ಮನೆ ಬಳಿ ಜಮಾಯಿಸುತ್ತಾರೆ. ಆದ ಕಾರಣ ನಟಿ ಮುಂಚಿತವಾಗಿಯೇ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ವರ್ಷ ಮನೆಯಿಂದ ದೂರ ತೆರಳಿ ಬರ್ತ್​ಡೇ ಆಚರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಡಿರುವ ಪೋಸ್ಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಮೊಟ್ಟೆಯಲ್ಲ ಧರ್ಮ ಮುಖ್ಯ, 25 ಲಕ್ಷ ಬಹುಮಾನ ಬೇಡವೆಂದು ಶೋನಿಂದ‌ ಹೊರ ನಡೆದ ದಿಟ್ಟ ಮಹಿಳೆ

ರಾಧಿಕಾ ಪಂಡಿತ್ ತಮ್ಮ ಪೋಸ್ಟ್ ನಲ್ಲಿ, ಇದೇ ಮೊದಲ ಬಾರಿಗೆ ಮನೆಯಿಂದ ದೂರ ಹೋಗಿ ಬರ್ತ್​ಡೇ ಆಚರಿಸಿಕೊಳ್ಳಲಿದ್ದೇನೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ಇದರಿಂದ ಬೇಸರ ಆಗಬಹುದು ಎಂಬುದು ನನಗೆ ತಿಳಿದಿದೆ. ಹಾಗಾಗಿ ಇಲ್ಲಿ ಒಂದು ಆ್ಯಕ್ಟಿವಿಟಿ ಪ್ಲ್ಯಾನ್​ ಮಾಡಿದ್ದೇನೆ. ಆ ಮೂಲಕ ನಿಮ್ಮ ಜೊತೆ ಸಂಪರ್ಕದಲ್ಲಿ ಇರಬಹುದು, ಎಂದು ರಾಧಿಕಾ ಪಂಡಿತ್​ ಪೋಸ್ಟ್​ ಮಾಡಿದ್ದಾರೆ. ಆದರೆ ಆ ಆ್ಯಕ್ಟಿವಿಟಿ ಏನು ಎನ್ನುವುದು ಮಾತ್ರ ನಟಿ ರಿವೀಲ್ ಮಾಡಿಲ್ಲ.

LEAVE A REPLY

Please enter your comment!
Please enter your name here