Radika Pandit: ರಾಧಿಕಾ ಪಂಡಿತ್ ಅವರ ಸಿಂಪಲ್ ಲುಕ್ ಗೆ ಅಭಿಮಾನಿಗಳು ಫಿದಾ.

Written by Pooja Siddaraj

Published on:

Radhika Pandit: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಕೆಜಿಎಫ್ ಸಿನಿಮಾದಿಂದ ಯಶ್ ಅವರ ಸಿನಿಕೆರಿಯರ್ ಸಂಪೂರ್ಣ ಬದಲಾಯಿತು ಎಂದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ಸೀಮಿತರಾಗಿದ್ದ ಯಶ್, ಇಡೀ ಭಾರತ ಚಿತ್ರರಂಗವೇ ಕೊಂಡಾಡುವಂತೆ ಬೆಳೆದಿದ್ದಾರೆ, ಆದರೆ ಒಂದೇ ದಿನದಲ್ಲಿ ಕಲ್ಲು ಶಿಲೆಯಾಗುವುದಿಲ್ಲ ಎಂಬಂತೆ ಯಶ್ ಒಂದೇ ದಿನದಲ್ಲಿ ಸ್ಟಾರ್ ಆದವರಲ್ಲ.

ಯಶ್ ನಡೆದು ಬಂದ ಹಾದಿಯಲ್ಲಿ, ಅವಮಾನ ಕಷ್ಟ ಹಸಿವು ತಿರಸ್ಕಾರ ಎಲ್ಲವೂ ಇತ್ತು. ಕಷ್ಟದಿಂದ ಕೂಡಿದ ಪ್ರತಿಯೊಂದು ಹಂತವನ್ನು ದಾಟಿಯೇ ಯಶ್ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಆ ಎಲ್ಲಾ ಕಷ್ಟದ ಸಮಯದಲ್ಲಿ ಯಶ್ ಅವರ ಜೊತೆಗೆ ಇದ್ದಿದ್ದು ಅವರ ಪತ್ನಿ ರಾಧಿಕಾ ಪಂಡಿತ್. ಯಶ್ ಅವರು ಕಷ್ಟಪಡುತ್ತಿದ್ದ ದಿನಗಳಿಂದಲೂ ಇವರಿಬ್ಬರು ಸ್ನೇಹಿತರಾಗಿ ಜೊತೆಗೆ ಇದ್ದಾರೆ. ಬಳಿಕ ಇಬ್ಬರು ಪ್ರೀತಿಸಲು ಶುರು ಮಾಡಿ, ಮದುವೆಯಾದರು.

ಇವರಿಬ್ಬರು ಜೀವನ ನಡೆಸುತ್ತಿರುವ ರೀತಿ ಎಲ್ಲಾ ಪ್ರೇಮಿಗಳಿಗೆ ಸ್ಫೂರ್ತಿ ಎಂದರೆ ತಪ್ಪಲ್ಲ. ಈ ಜೋಡಿಯನ್ನು ಕಂಡರೆ ಎಲ್ಲರಿಗೂ ಅಷ್ಟು ಇಷ್ಟ. ಇಂದು ಬದುಕಿನಲ್ಲಿ ಸಕ್ಸಸ್ ಕಂಡು ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ..

ಇದೀಗ ರಾಧಿಕಾ ಪಂಡಿತ್ ಅವರು ಸಿಂಪಲ್ ಲುಕ್ ನಲ್ಲಿ ಮನೆಯಲ್ಲಿರುವ 2 ಫೋಟೋಸ್ ಶೇರ್ ಮಾಡಿದ್ದು, ಅಭಿಮಾನಿಗಳು ಇದನ್ನು ನೋಡಿ ಫಿದಾ ಆಗಿದ್ದಾರೆ. ಸಿಂಪಲ್ ಆಗಿದ್ರು ಎಷ್ಟು ಸುಂದರವಾಗಿ ಕಾಣುತ್ತಾರೆ ರಾಧಿಕಾ ಪಂಡಿತ್ ಎಂದು ಹಾರ್ಟ್ ಎಮೋಜಿಗಳನ್ನು ಕಮೆಂಟ್ ನಲ್ಲಿ ತಿಳಿಸಿದ್ದಾರೆ.

Leave a Comment