RRR ಬಾಲಿವುಡ್ ಸಿನಿಮಾ ಅಲ್ಲ- ರಾಜಮೌಳಿ ಹೇಳಿಕೆಗೆ ಕೆಂಡ ಕಾರಿದ ಬಾಲಿವುಡ್ ಮಂದಿ

0
31

RRR is not a Bollywood film : Rajamouli about RRR ರಾಜಮೌಳಿ(Raja Mouli) ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಮಾಡಿರುವ ನಿರ್ದೇಶಕನಾಗಿದ್ದಾರೆ. ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡಿರುವ ರಾಜಮೌಳಿ ಅವರು, ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಯಶಸ್ಸನ್ನು ಪಡೆದುಕೊಂಡಿರುವುದು ಮಾತ್ರವೇ ಅಲ್ಲ, ಬಾಲಿವುಡ್ ಗೆ ಸವಾಲನ್ನು ಕೂಡಾ ಎಸೆಯುವಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ.‌ ಇತ್ತೀಚಿಗಷ್ಟೇ ರಾಜಮೌಳಿ ಅವರ ತ್ರಿಬಲ್ ಆರ್(Rajamouli about RRR) ಸಿನಿಮಾದ ‘ನಾಟು ನಾಟು..’ ಹಾಡು ‘ಗೋಲ್ಡನ್​ ಗ್ಲೋಬ್​ 2023’ ಅವಾರ್ಡ್​(Golden Globe 2023) ಅನ್ನು ಗೆದ್ದು ಬೀಗಿದ್ದು, ಈಗ ಅನ್ಯ ದೇಶಗಳ ಜನರು ಸಹಾ ದಕ್ಷಿಣದ ಸಿನಿಮಾ ರಂಗದ ಕಡೆಗೆ ನೋಡುವ ಹಾಗೆ ಆಗಿದೆ.

ಬಿಸಿ ಚಪಾತಿ ಸೇವಿಸುವ ಮುನ್ನ ಮಿಸ್ ಮಾಡದೇ ಈ ಮಾಹಿತಿ ನೋಡಿ!

ಗೋಲ್ಡನ್ ಗ್ಲೋಬ್ ಅವಾರ್ಡ್ ನಂತರ ಈಗ ತ್ರಿಬಲ್ ಆರ್ ಆಸ್ಕರ್ ಪ್ರಶಸ್ತಿಯ ಕಡೆಗೆ ಕಣ್ಣಿಟ್ಟಿದೆ. ಇನ್ನು ಪ್ರಶಸ್ತಿ ಗೆದ್ದ ನಂತರ ರಾಜಮೌಳಿ(Raja Mouli) ಅವರು ಹೇಳಿದ ಮಾತೊಂದು ಈಗ ಪರ ವಿ ರೋ ಧ ಚರ್ಚೆಗಳು ಆರಂಭವಾಗಿದೆ. ವಿಶೇಷವಾಗಿ ಇದು ಬಾಲಿವುಡ್ ಸಿನಿಮಾ ಪ್ರೇಕ್ಷಕರನ್ನು ಅಸಮಾಧಾನಗೊಳ್ಳುವಂತೆ ಮಾಡಿದೆ. ಅಮೆರಿಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜಮೌಳಿ ಅವರು, ಇದು ಬಾಲಿವುಡ್​(Bollywood) ಸಿನಿಮಾ ಅಲ್ಲ. ದಕ್ಷಿಣ ಭಾರತದ ತೆಲುಗು ಭಾಷೆಯ ಸಿನಿಮಾ ಇದು. ಅಲ್ಲಿಂದಲೇ ನಾನು ಬಂದಿರುವುದು. ಸಿನಿಮಾದ ಕಥೆಯನ್ನು ಮುಂದುವರಿಸಲು ನಾನು ಹಾಡುಗಳನ್ನು ಬಳಸುತ್ತೇನೆ ಎನ್ನುವ ಮಾತು ಹೇಳಿದ್ದರು ಹೇಳಿದ್ದಾರೆ.

ರಾಜಮೌಳಿ ಮಾತು ವೈರಲ್ ಆದ ಮೇಲೆ ಅನೇಕರು ಅಸಮಾಧಾನಗೊಂಡು. ‘ಆರ್​ ಆರ್​ ಆರ್​ ನಾಮಿನೇಟ್​ ಆಗಿರುವುದು ಭಾರತದಿಂದಲೇ ಹೊರತು ಅದು ಸೌತ್​ ಇಂಡಿಯಾ ಅಥವಾ ತೆಲುಗು ಚಿತ್ರರಂಗದಿಂದ ಅಲ್ಲ. ಆದ್ದರಿಂದ ಪ್ರದೇಶ ಮತ್ತು ಭಾಷೆಗಳ ವಿಚಾರದಲ್ಲಿ ಪಕ್ಷಪಾತ ಬೇಡ ಎಂದಿದ್ದಾರೆ. ಬಾಲಿವುಡ್ ಎನ್ನುವುದೊಂದು ಚಿತ್ರರಂಗವಲ್ಲ. ಬದಲಿಗೆ ಅದು ಭಾರತವನ್ನು ಪ್ರತಿನಿಧಿಸುತ್ತದೆ’ ಎಂದು ಕಮೆಂಟ್​ ಗಳನ್ನು ಮಾಡಿದ್ದಾರೆ. ಆದರೆ ಇಷ್ಟು ದಿನ ದಕ್ಷಿಣ ಸಿನಿಮಾ ಬಗ್ಗೆ ಮೆಚ್ಚುಗೆ ನೀಡದವರು ಈಗ ಉರಿದುಕೊಳ್ಳುವುದು,ಎಲ್ಲಾ ಇಂಡಸ್ಟ್ರಿ ಒಂದೇ ಅಂತ ಈಗ ಹೇಳೋದು ಎಷ್ಟು ಸರಿ ಎಂದಿದ್ದಾರೆ‌ ಕೆಲವರು.

LEAVE A REPLY

Please enter your comment!
Please enter your name here