Rajesh Nataranga: ಅಮೃತಧಾರೆ ಧಾರವಾಹಿ ಹಾಗೆ ರಿಯಲ್ ಲೈಫ್ ನಲ್ಲೂ ಲೇಟ್ ಆಗಿ ಮದುವೆ ಆಗಿದ್ದರಂತೆ ನಟ ರಾಜೇಶ್!

0 3

Rajesh Nataranga: ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಧಾರವಾಹಿಗಳಲ್ಲಿ ಒಂದು ಅಮೃತಧಾರೆ. ಈ ಧಾರವಾಹಿಯಲ್ಲಿ ನಟ ರಾಜೇಶ ನಟರಂಗ ನಾಯಕ ಗೌತಮ್ ಪಾತ್ರದಲ್ಲಿ ನಟಿ ಛಾಯಾ ಸಿಂಗ್ ನಾಯಕಿ ಭೂಮಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರಿಗೆ ಧಾರವಾಹಿಯಲ್ಲಿ ಬಹಳ ಲೇಟ್ ಆಗಿ ಮದುವೆ ಆಗುತ್ತದೆ.

ಇಬ್ಬರಿಗೂ ನಾನಾ ಕಾರಣಕ್ಕೆ ಮದುವೆ ಆಗಿರುವುದಿಲ್ಲ. ವಿಧಿ ಎನ್ನುವ ಹಾಗೆ ಇಬ್ಬರ ಬಂಧ ಬೆಸೆಯುತ್ತದೆ. ಈ ರೀತಿ ಗೌತಮ್ ಭೂಮಿಕಾ ಮದುವೆ ಆಗಿದೆ. ಧಾರವಾಹಿಯಲ್ಲಿ ಮಾತ್ರವಲ್ಲ ನಟ ರಾಜೇಶ್ ನಟರಂಗ ಅವರು ರಿಯಲ್ ಲೈಫ್ ನಲ್ಲಿ ಕೂಡ ಬಹಳ ತಡವಾಗಿ ಮದುವೆ ಆಗಿದ್ದಂತೆ. 34ನೇ ವಯಸ್ಸಿಗೆ ರಾಜೇಶ್ ಅವರು ಮದುವೆಯಾದರು.

ಕೆರಿಯರ್ ನಲ್ಲಿ ಸೆಟ್ಲ್ ಆದಮೇಲೆ ಮದುವೆ ಆಗಬೇಕು ಎಂದುಕೊಂಡಿದ್ದ ರಾಜೇಶ್ ಅವರು ಮದುವೆಗೆ ಓಕೆ ಅಂದಿರಲಿಲ್ಲ. ಆದರೆ ರಾಜೇಶ್ ಅವರ ತಾಯಿಗೆ ಮಗನ ಮದುವೆ ನೋಡಬೇಕು ಎಂದು ಆಸೆ ಇತ್ತಂತೆ. ತಾಯಿಗೋಸ್ಕರ ಮದುವೆ ಆಗಿದ್ದಂತೆ ನಟ ರಾಜೇಶ್. ರಾಜೇಶ್ ಹಾಗೂ ಚೈತ್ರ ದಂಪತಿಯದ್ದು ಅರೇಂಜ್ ಮ್ಯಾರೇಜ್. ಚೈತ್ರ ಅವರ ಫೋಟೋ ನೋಡಿ ಒಪ್ಪಿಗೆ ಕೊಟ್ಟಿದ್ದರಂತೆ ರಾಜೇಶ್ ಅವರು..

ಚೈತ್ರ ಅವರು ಕೂಡ ನಿರೂಪಕಿ ಆಗಿದ್ದು, ಒಂದೆರಡು ಧಾರವಾಹಿಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರಂತೆ. ಮೊದಲ ಭೇಟಿಯಲ್ಲೇ ಚೈತ್ರ ಅವರ ಜೊತೆಗೆ ಮಾತಾಡೋಕೆ ಏನು ಇಲ್ಲ ಎಂದು ಹೇಳಿದ್ದರಂತೆ ರಾಜೇಶ್ ಅವರು. ಇನ್ನು ಚೈತ್ರ ಅವರಿಗಿಂತ ಅವರ ತಾಯಿಗೆ ರಾಜೇಶ ಅವರು ಇಷ್ಟ ಆಗಿದ್ರಂತೆ. ಒಂದು ವರ್ಷಗಳ ಕಾಲ ಇವರ ಮದುವೆ ಫಿಕ್ಸ್ ಆಗಿರಲಿಲ್ಲ.

ನಂತರ ಚೈತ್ರ ಅವರ ತಾಯಿಯೇ ರಾಜೇಶ್ ಅವರ ತಾಯಿ ಜೊತೆ ಮಾತನಾಡಿ ಮದುವೆ ಫಿಕ್ಸ್ ಮಾಡಿಸಿದರಂತೆ. ಈ ಜೋಡಿ ಮದುವೆಯಾಗಿ,, ಇಂದು ಇವರಿಗೆ ಧ್ವನಿ ಹೆಸರಿನ ಮಗಳಿದ್ದಾಳೆ. ಇವರ ಮಗಳು ಈಗ ಪಿಯುಸಿ ಓದುತ್ತಿದ್ದು, ಮಲಯಾಳಂ ಸಿನಿಮಾ ಒಂದರಲ್ಲಿ ಕೂಡ ನಟಿಸಿದ್ದಾಳೆ.

Leave A Reply

Your email address will not be published.