Rakhi Adil marriage ಬಾಲಿವುಡ್ ನ ಡ್ರಾಮಾ ಕ್ವೀನ್ ಖ್ಯಾತಿಯ ರಾಖಿ ಸಾವಂತ್(Rakhi Sawant) ಹಾಗೂ ಅವರ ಹೊಸ ಬಾಯ್ ಫ್ರೆಂಡ್ ಆದಿಲ್ ಖಾನ್(Adil Khan) ಜೊತೆಗೆ ಮದುವೆಯಾಗಿದ್ದಾರೆ ಎನ್ನುವ ಫೋಟೋಗಳು ಕಳೆದರೆಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ರಾಖಿಯ ಬಾಯ್ ಫ್ರೆಂಡ್ ಆದಿಲ್ ಮಾತ್ರ ಮದುವೆಯ (Rakhi Adil Marriage) ವಿಚಾರವನ್ನು ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಈಗ ಇವೆಲ್ಲವುಗಳ ನಡುವೆಯೇ ಮದುವೆ ಬಗ್ಗೆ ರಾಖಿ ಅವರು ಮಾತನಾಡಿರುವುದು ಮಾತ್ರವೇ ಅಲ್ಲದೇ ಆದಿಲ್ ತನಗೆ ಮೋಸ ಮಾಡಿದ್ದಾನೆ ಎನ್ನುವ ಸುಳಿವನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.

ನಾಯಿಗೆ ಸಂಬಂಧಿಸಿದ ಶಕುನ ಮತ್ತು ಅಪಶಕುನಗಳ ಬಗ್ಗೆ ತಿಳಿಯಿರಿ!
ರಾಖಿ ಮತ್ತು ಆದಿಲ್ ಮದುವೆ ನಡೆದು ಬರೋಬ್ಬರಿ 7 ತಿಂಗಳು ಕಳೆದಿವೆ ಎನ್ನಲಾಗಿದ್ದು, ಅದಿಲ್(Adil) ಈ ಬಗ್ಗೆ ಎಲ್ಲಿಯೂ ಹೇಳಬಾರದೆಂದು ರಾಖಿಗೆ ತಾಕೀತು ಮಾಡಿದ್ದಾರಂತೆ. ರಾಖಿ(Rakhi) ಆದಿಲ್ ನ ಭೇಟಿಯಾದ ಮೇಲೆ ಕಳೆದ ವರ್ಷ ಜುಲೈನಲ್ಲಿ ನಾನು, ಆದಿಲ್ ಮದುವೆಯಾದೆವು. ಆದ್ರೆ ನಮ್ಮ ಮದುವೆ ವಿಚಾರ ಗೊತ್ತಾದ್ರೆ ಆದಿಲ್ ತನ್ನ ತಂಗಿಗೆ ಹುಡುಗನನ್ನು ಹುಡುಕೋದು ಕಷ್ಟ ಆಗುತ್ತೆ ಅನ್ನೋ ಮಾತನ್ನು ಹೇಳಿದ್ರು, ಅಲ್ಲದೇ ಆತ ರಾಖಿ ಸಾವಂತ್ ಜೊತೆ ಇರೋದನ್ನು ನಾಚಿಕೆ ಕೆಲಸ ಅಂದುಕೊಂಡಿದ್ದಾನೆ ಎಂದೂ ಸಹಾ ಹೇಳಿ ರಾಖಿ ಸಾವಂತ್ ಎಲ್ಲರಿಗೂ ಸಹಾ ಶಾ ಕ್ ನೀಡಿದ್ದಾರೆ.
ಇದೇ ವೇಳೆ ರಾಖಿ, ನಾನು ಬಿಗ್ ಬಾಸ್ 14 ಶೋನಲ್ಲಿದ್ದಾಗ ಸಾಕಷ್ಟು ವಿಷಯ ನಡೆಯಿತು ಎಂದಿದ್ದಾರೆ. ರಾಖಿ ಸಾವಂತ್ ಬಿಗ್ ಬಾಸ್ ಗೆ ತಮ್ಮ ಮಾಜಿ ಪತಿ ರಿತೇಶ್ ಜೊತೆಗೆ ಎಂಟ್ರಿ ನೀಡಿದ್ದರು. ಆದರೆ ಅನಂತರ ರಿತೇಶ್ ಜೊತೆಗೆ ವಿಚ್ಛೇದನ ಪಡೆದಿದ್ದರು. ರಾಖಿ ಈಗ, ನಾನು ಆದಿಲ್‌ರನ್ನು ಮದುವೆಯಾಗಿದ್ದೇನೆಂದು ಜಗತ್ತಿಗೆ ಹೇಳಬೇಕಿತ್ತು ಆದ್ರೆ ಅದು ಆಗ್ಲಿಲ್ಲ, ಆದಿಲ್ ಯಾವ ಕಾರಣದಿಂದ ನಮ್ಮ ಈ ಮದುವೆಯನ್ನು ಗುಟ್ಟಾಗಿ ಇಟ್ಟಿದ್ದಾನೆ ಅಂತ ಅರ್ಥ ಆಗ್ತಿಲ್ಲ. ಆತ ತನ್ನ ಪಾಲಕರಿಗೆ ಹೆದರಿ ಹೀಗೆ ಮಾಡಿದ್ದಾನಾ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.