Rakhi Sawant :ಜೈಲಿನಲ್ಲಿರೋ ತನ್ನ ಪತಿ ಮೇಲೆ ಮತ್ತೊಂದು ಹೊಸ ಆರೋಪ ಮಾಡಿದ ರಾಖಿ ಸಾವಂತ್

0
38

Rakhi Sawant :ಮೋಸ ಮಾಡಿದನೆಂದು ಪತಿಯ ಮೇಲೆ ದೂರು ದಾಖಲು ಮಾಡಿ ಈಗಾಗಲೇ ಪತಿಯನ್ನು ಜೈಲು ಪಾಲು ಮಾಡಿರುವ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant), ತಮ್ಮ ಪತಿ ಆದಿಲ್ ಖಾನ್ (Adil Khan) ವಿ ರು ದ್ಧ ಆ ರೋ ಪ ಗಳನ್ನು ಮಾಡುವುದು ಮಾತ್ರ ಇನ್ನೂ ನಿಲ್ಲಿಸಿಲ್ಲ. ಈಗ ರಾಖಿ ಹೊಸ ಹೇಳಿಕೆಯಲ್ಲಿ ಆದಿಲ್ ತನಗೆ ಜೈಲಿಂದಲೇ (Jail) ಮೆಸೇಜ್ ಮಾಡಿದ್ದಾರೆಂದು ಹೇಳಿದ್ದು, ಆದಿಲ್ ತನ್ನನ್ನು ಕ್ಷಮಿಸುವಂತೆ ಮತ್ತು ಕೇಸು ವಾಪಸ್ಸು ಪಡೆಯುವಂತೆ ಕೇಳಿದ್ದಾನೆ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ತಾನು ಅದಕ್ಕೆ ಸಿದ್ಧವಿಲ್ಲ ಎಂದಿರುವ ರಾಖಿ ಇನ್ನಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕುಗಳಲ್ಲಿ ಗಿಡಗಳನ್ನು ನೆಡಬೇಡಿ, ವಾಸ್ತು ದೋಷಗಳು ಬರುತ್ತವೆ!

ಆದಿಲ್(Rakhi Adil) ಎಲ್ಲವನ್ನೂ ಮರೆತು ಮತ್ತೆ ಜೀವನ ಮಾಡೋಣ, ತಾನು ಮಾಡಿದ್ದು ತಪ್ಪು, ತನ್ನನ್ನು ಕ್ಷಮಿಸಿ, ಕೇಸ್ ವಾಪಸ್ಸು ತೆಗೆದು ಕೋ ಎಂದು ಹೇಳಿದ್ದಾನೆ. ಆದರೆ ಒಂದು ವೇಳೆ ನಾನು ಆತನನ್ನು ಕ್ಷಮಿಸಿದರೆ, ಬಹುಶಃ ಅವನು ನನ್ನನ್ನು ಕೊ ಲ್ಲ ಬಹುದು ಎಂದು ಹೇಳಿರುವ ರಾಖಿ, ಅವನು ನನ್ನನ್ನು ಸಾಯಿಸಲು ಪ್ಲಾನ್ ಮಾಡಿಕೊಂಡೇ ಈಗ ಜೈಲಿನಿಂದ ಕಳುಹಿಸಿರುವ ಸಂದೇಶದಲ್ಲಿ ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕುಗಳಲ್ಲಿ ಗಿಡಗಳನ್ನು ನೆಡಬೇಡಿ, ವಾಸ್ತು ದೋಷಗಳು ಬರುತ್ತವೆ!

ನಾನು ಅವನನ್ನು ನಂಬುವುದಿಲ್ಲ, ಅವನೊಟ್ಟಿಗೆ ಬಾಳುವುದಿಲ್ಲ ಎಂದು ಹೇಳುತ್ತಾ, ನಾನು ಡಿವೋರ್ಸ್ ಕೊಟ್ಟರೆ ಆದಿಲ್ ಜೀವನದಲ್ಲಿ ಬೇರೊಬ್ಬ ಹುಡುಗಿ ಬರುತ್ತಾಳೆ. ನನಗೆ ಆದಂತೆ ಬೇರೆಯವರಿಗೆ ಆಗಬಾರದು. ನಾನು ಅವನಿಗೆ ಡಿವೋರ್ಸ್ ನೀಡುವುದಿಲ್ಲ, ನಾನು ಕೂಡಾ ಇನ್ನೆಂದೂ ಮದುವೆ ಆಗಲಾರೆ ಎಂದು ರಾಖಿ ಹೇಳಿದ್ದಾರೆ. ಪ್ರಸ್ತುತ ರಾಖಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆದಿಲ್ ಖಾನ್ ಮೈಸೂರಿನ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನು ರಾಖಿ ಕೂಡಾ ಮೊದಲಿನಂತೆ ತಮ್ಮ ಬಿಂದಾಸ್ ಜೀವನಕ್ಕೆ ಮರಳಿದ್ದಾರೆ.

LEAVE A REPLY

Please enter your comment!
Please enter your name here